ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ

ಆರಂಭದಿಂದಲೇ ಒಂದಷ್ಟು ಹಣವನ್ನು ಹೂಡಿಕೆ (investment) ಮಾಡ್ತಾ ಬಂದ್ರೆ ಭವಿಷ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ (financial problem) ಎದುರಿಸುವ ಪರಿಸ್ಥಿತಿ ಇಲ್ಲ. ಉದಾಹರಣೆಗೆ ನೀವು ಸರ್ಕಾರಿ ಯೋಜನೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬಹುದು ಹಾಗೂ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು.
ಅದರಲ್ಲೂ ಈ ಒಂದು ಯೋಜನೆಯಲ್ಲಿ ನೀವು ಹಣ ಉಳಿತಾಯ ಮಾಡ್ತಾ ಬಂದ್ರೆ ಗಂಡ ಹೆಂಡತಿ ಇಬ್ಬರೂ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಆರಾಮಾಗಿ ಪಡೆದುಕೊಳ್ಳಬಹುದು. ನೀವು ಮಾಡಬೇಕಾಗಿರೋದು ಇಷ್ಟೇ..
ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ; ಮಹಿಳೆಯರಿಗೆ ಮಾತ್ರ
ಅಟಲ್ ಪಿಂಚಣಿ ಯೋಜನೆ! (Atal pension scheme)
ಒಂದು ವೇಳೆ ವಯಸ್ಸಾದಾಗ ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕಿದರೂ ಕೂಡ ಆರ್ಥಿಕವಾಗಿ ಸಮಸ್ಯೆ ಎದುರಿಸಬಾರದು ಎನ್ನುವ ಕಾರಣಕ್ಕೆ ಸರ್ಕಾರ ಇದನ್ನ ಪರಿಚಯಿಸಿದೆ.
2018ರಲ್ಲಿ ಆರಂಭವಾದ ಅಟಲ್ ಪಿಂಚಣಿ ಯೋಜನೆಯಲ್ಲಿ 18ರಿಂದ 40 ವರ್ಷ ವಯಸ್ಸಿನವರು ಹೂಡಿಕೆ ಮಾಡಬಹುದು. ಮದುವೆಯಾದ ನಂತರ ಪತಿ-ಪತ್ನಿ ಇಬ್ಬರೂ ಹೂಡಿಕೆ ಮಾಡಲು ಆರಂಭಿಸಿದರೆ ಒಬ್ಬರಿಗೆ ತಲಾ 5,000 ಗಳಂತೆ 10 ಸಾವಿರ ರೂಪಾಯಿಗಳನ್ನು 60 ವರ್ಷದ ಬಳಿಕ ಪಡೆದುಕೊಳ್ಳಬಹುದು.
ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಪಿಂಚಣಿ (Pension) ಮೊತ್ತ ನಿರ್ಧಾರವಾಗುತ್ತದೆ. 1,000 ರೂಪಾಯಿಗಳಿಂದ 5,000 ರೂಪಾಯಿಗಳವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಸಿಗುತ್ತೆ 21,000 ರೂಪಾಯಿ! ಹೊಸ ಯೋಜನೆ
ಎಷ್ಟು ಹೂಡಿಕೆ ಮಾಡಬೇಕು!
ಕನಿಷ್ಠ 40 ರೂಪಾಯಿಗಳಿಂದ ಗರಿಷ್ಟ 210ಗಳನ್ನು ಹೂಡಿಕೆ ಮಾಡಿದರೆ ಸಾಕು 18 ವರ್ಷ ವಯಸ್ಸಿನವರು 210ಗಳನ್ನ ಹೂಡಿಕೆ ಮಾಡಿದ್ರೆ 60 ವರ್ಷ ವಯಸ್ಸಿಗೆ 5000 ಪಿಂಚಣಿ ಪಡೆಯಬಹುದು. ಅದೇ ರೀತಿ 40 ವರ್ಷ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ ಪ್ರತಿ ತಿಂಗಳು 1454 ರೂಪಾಯಿ ಮಾಡಬೇಕು. ಈ ಯೋಜನೆಯಲ್ಲಿ 20 ವರ್ಷಗಳವರೆಗೆ ಹೂಡಿಕೆ ಮಾಡಬಹುದು.
ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂಪಾಯಿ!
ಎಲ್ಲಿ ಅಟಲ್ ಪಿಂಚಣಿ ಖಾತೆ ತೆರೆಯಬಹುದು?
ನೀವು ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ (Post Office) ಅಟಲ್ ಪಿಂಚಣಿ ಖಾತೆ ತೆರೆದು ಉಳಿತಾಯ ಆರಂಭಿಸಬಹುದು 60 ವರ್ಷ ಕಳೆಯುತ್ತಿದ್ದ ಹಾಗೆ ಸರ್ಕಾರ ನಿಮ್ಮ ಖಾತೆಗೆ (Bank Account) 5000 ಅಥವಾ ಗಂಡ ಹೆಂಡತಿಗೆ ಒಟ್ಟಾಗಿ ರೂ.10,000ಗಳನ್ನು ಜಮಾ ಮಾಡುತ್ತದೆ.
ವೈರಲ್ ಆಯ್ತು 1965ರ ಮಸಾಲೆ ದೋಸೆ ಹೋಟೆಲ್ ಬಿಲ್! ಆಗ ಎಷ್ಟಿತ್ತು ಗೊತ್ತಾ?
In this scheme both husband and wife will get 10,000 rupees every month
ಎಷ್ಟು ಹೂಡಿಕೆ ಮಾಡಬೇಕು!



