ಪಿಂಚಣಿ ನಿಯಮಗಳಲ್ಲಿ ಬದಲಾವಣೆ; ಏಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ!

Story Highlights

ಕಡಿಮೆ ಹೂಡಿಕೆ (Investment ) ಮಾಡಿ ಪಿಂಚಣಿ ಬರುವಂತೆ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿತ್ತು. ಅದುವೇ ನ್ಯಾಷನಲ್ ಪೆನ್ಷನ್ ಸ್ಕೀಮ್ (National pension scheme).

ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದೆ. ಈಗಾಗಲೇ ಚುನಾವಣೆಯ ಕಾವು ಜೋರಾಗಿದೆ. ಹಾಗಾಗಿ ಚುನಾವಣೆಯ ಸಮಯದಲ್ಲಿ ಸರ್ಕಾರ ಯಾವೆಲ್ಲಾ ಹೊಸ ಯೋಜನೆಗಳನ್ನು ಪರಿಚಯಿಸಬಹುದು, ಯಾವೆಲ್ಲ ಬದಲಾವಣೆಗಳನ್ನು ತರಬಹುದು, ಯಾರಿಗೆ ತೊಂದರೆ ಆಗಬಹುದು ಹೀಗೆ ಹಲವಾರು ಚರ್ಚೆಗಳು ಸಾಮಾಜಿಕ ಜಾಲತಾಣ (social media) ದಲ್ಲಿ ನಡೆಯುತ್ತಿವೆ. ಹೌದು ಮಹತ್ವದ ಬದಲಾವಣೆಯನ್ನು ಸರ್ಕಾರ ಮಾಡಲಿದ್ದು ಇದರ ಬಗ್ಗೆ ಅಪ್ಡೇಟ್ ಸಿಕ್ಕಿದೆ..

ವೃದ್ಧಾಪ್ಯ ಜೀವನವನ್ನು ಸುಲಭವಾಗಿ, ಅಂದ್ರೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲದೆ ನಡೆಸಲು ಮುಖ್ಯವಾಗಿ ಪಿಂಚಣಿ (pension) ಬೇಕು. ನಿವೃತ್ತಿ ನಂತರದ ಬದುಕು ಸಾಗಿಸುವುದಕ್ಕೆ ಕೆಲವು ಕಂಪನಿಗಳು ಅಥವಾ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಪಿಂಚಣಿ ಸಿಗುತ್ತದೆ.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ

ಇನ್ನು ಅತಿ ಕಡಿಮೆ ಹೂಡಿಕೆ (Investment ) ಮಾಡಿ ಪಿಂಚಣಿ ಬರುವಂತೆ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿತ್ತು. ಅದುವೇ ನ್ಯಾಷನಲ್ ಪೆನ್ಷನ್ ಸ್ಕೀಮ್ (National pension scheme).. ಇದೀಗ ಈ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಈ ಹೊಸ ನಿಯಮ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ!

NPS ನಲ್ಲಿ ಮಹತ್ವದ ಬದಲಾವಣೆ!

ರಾಷ್ಟ್ರೀಯ ಪಿಂಚಣಿ ಯೋಜನೆ ಗೆ ಸಂಬಂಧಪಟ್ಟಹಾಗೆ ಸರ್ಕಾರ ಹೊಸ ಅಪ್ಡೇಟ್ ನೀಡಿದೆ, ಹೊಸ ರೂಲ್ಸ್ ಜಾರಿಗೆ ತರಲಾಗಿದ್ದು ಏಪ್ರಿಲ್ ಒಂದರಿಂದ ಈ ಪಿಂಚಣಿ ಪಡೆದುಕೊಳ್ಳುವವರಿಗೆ ಅಪ್ಲೈ ಆಗಲಿದೆ.. ಹಾಗಾದ್ರೆ ಸರ್ಕಾರ ಜಾರಿಗೆ ತಂದಿರುವ ಆ ಹೊಸ ರೂಲ್ಸ್ ಯಾವುದು ಎಂಬುದನ್ನ ನೋಡುವುದಾದರೆ,

ರಾಷ್ಟ್ರೀಯ ಪಿಂಚಣಿ ಯೋಜನೆ ಖಾತೆಯನ್ನು ಯಾರು ಹೊಂದಿರುತ್ತಾರೋ ಅವರಿಗೆ ಲಾಗಿನ್ (Login) ಮಾಡುವ ಪ್ರಕ್ರಿಯೆಯನ್ನು ನೀಡಲಾಗಿತ್ತು, ಇದರಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದ್ದು ಡಬಲ್ ಸೆಕ್ಯೂರಿಟಿ ಸಿಸ್ಟಮ್ ಅಳವಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ..

ಇನ್ನು ಮುಂದೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಸದಸ್ಯರು ಆಧಾರ್ ವೆರಿಫಿಕೇಶನ್ ಹಾಗೂ ಮೊಬೈಲ್ ಗೆ ಬಂದ ಓಟಿಪಿ ಮೂಲಕವೇ ಲಾಗಿನ್ ಆಗಬೇಕು ಆಗ ಮಾತ್ರ ನಿಮ್ಮ ಖಾತೆ ಲಾಗಿನ್ ಆಗುತ್ತದೆ. ಈ ಹೊಸ ವ್ಯವಸ್ಥೆ ಏಪ್ರಿಲ್ 1 2024 ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ.

ಗೂಗಲ್ ಪೇ ಮೂಲಕ ಸಿಗುತ್ತೆ 1 ಲಕ್ಷದವರೆಗೆ ಸಾಲ! ಒಂದೇ ನಿಮಿಷದಲ್ಲಿ ಪಡೆಯಿರಿ

Pension SchemeTwo factor authentication ಅನ್ನು ಪಿಂಚಣಿ ನಿಧಿ ನಿಯಂತ್ರಕ ಇತ್ತೀಚಿಗೆ ಕಡ್ಡಾಯಗೊಳಿಸಿದೆ, ಇದರಿಂದ ಪಿಂಚಣಿ ಪಡೆದುಕೊಳ್ಳುವ ಸದಸ್ಯರಿಗೆ ನಿಜಕ್ಕೂ ಭದ್ರತೆ ಸಿಗುತ್ತದೆ..

ಎನ್ ಪಿ ಎಸ್ ಖಾತೆಯನ್ನು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಮೂಲಕ ನಿರ್ವಹಿಸಲ್ಪಡುತ್ತದೆ ಇದು ಆನ್ಲೈನ್ ಮೂಲಕ ಸೇವೆ ಒದಗಿಸುವ ವ್ಯವಸ್ಥೆ ಆಗಿದ್ದು NPS ಬಗೆಗಿನ ಎಲ್ಲಾ ಮಾಹಿತಿಗಳನ್ನು ಇಲ್ಲಿ ಪಡೆದುಕೊಳ್ಳಬಹುದು.

ಸರ್ಕಾರದ ಈ ಯೋಜನೆಯಲ್ಲಿ ಪಡೆಯುವ ಸಾಲಕ್ಕೆ ಸಿಗುತ್ತೆ ಭಾರೀ ಸಬ್ಸಿಡಿ!

ರಾಷ್ಟ್ರೀಯ ಪಿಂಚಣಿ ಯೋಜನೆಗೆ ಲಾಗಿನ್ ಅಗತ್ಯ!

ಹಿರಿಯ ನಾಗರಿಕರು ಸಾಮಾನ್ಯವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಇನ್ನು ಮುಂದೆ ನಿಮ್ಮ ಖಾತೆಗೆ ಲಾಗಿನ್ ಆಗಬೇಕಾದರೆ ಯಾರ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೋ ಅವರ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗ್ ಇನ್ ಆಗಬೇಕು. ಈ ಲಾಗ್ ಇನ್ ಪ್ರಕ್ರಿಯೆಯನ್ನು ಕೂಡ ಇನ್ನಷ್ಟು ಸುರಕ್ಷಿತಗೊಳಿಸಲು ಆಧಾರ್ ವೆರಿಫಿಕೇಶನ್ ಹಾಗೂ ಓಟಿಪಿ ಎರಡು ಪರಿಶೀಲನೆ ಮಾಡಲಾಗುತ್ತದೆ.

ಎನ್‌ಪಿಎಸ್ ಸದಸ್ಯರು ನೆನಪಿಟ್ಟುಕೊಳ್ಳಬೇಕಾದ ಅಗತ್ಯ ಅಂಶ ಅಂದ್ರೆ ಲಾಗಿನ್ ಆಗಬೇಕಾದರೆ ಆಧಾರ್ ಬೇಕು ಆದರೆ ಈ ಆಧಾರ್ ಅನ್ನು ಬಳಕೆದಾರರ ಐಡಿ ಗೆ ಲಿಂಕ್ ಮಾಡಿರಲಾಗುತ್ತೆ ಇದಾದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ಲಾಗಿನ್ ಆಗಬೇಕು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ

ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ಎಲ್ಲಿ ರಾಷ್ಟ್ರೀಯ ಪಿಂಚಣಿ ಖಾತೆಯನ್ನು ಆರಂಭಿಸಿದ್ದೀರೋ, ಅದೇ ಬ್ಯಾಂಕ್ (Bank Account) ಅಥವಾ ಅಂಚೆ ಕಚೇರಿಯಲ್ಲಿ ಮಾಹಿತಿ ಪಡೆಯಬಹುದು.

Changes in pension rules, New rule from April 1

Related Stories