ಸರ್ಕಾರದ ಈ ಯೋಜನೆಯಲ್ಲಿ ಪಡೆಯುವ ಸಾಲಕ್ಕೆ ಸಿಗುತ್ತೆ ಭಾರೀ ಸಬ್ಸಿಡಿ!

Story Highlights

ಕೇಂದ್ರ ಸರ್ಕಾರದ ಯೋಜನೆಯಲ್ಲಿ ಸಾಲ ತೆಗೆದುಕೊಂಡರೆ ಸಿಗುತ್ತೆ ಭಾರಿ ಸಬ್ಸಿಡಿ! ಯಾರು ಇದರ ಫಲಾನುಭವಿಗಳು ಗೊತ್ತಾ?

Business Loan : ನಿಮಗೆಲ್ಲ 2020 ರಿಂದ 22 ನೇ ವರ್ಷದವರೆಗೂ ಕರೋನ (Covid 19) ಮಹಾಮಾರಿಯಿಂದ ನಾವು ಎಷ್ಟೆಲ್ಲಾ ಸಮಸ್ಯೆ ಅನುಭವಿಸಿದ್ದೇವೆ ಎನ್ನುವುದು ನೆನಪಿರಬಹುದು. ಸಾಕಷ್ಟು ಜನ ಪ್ರಾಣ ಕಳೆದುಕೊಂಡರೆ ಇನ್ನಷ್ಟು ಜನ ತಮ್ಮ ಜೀವನವನ್ನು ಕಳೆದುಕೊಂಡರು.

ಅಂದ್ರೆ ಹೆಚ್ಚು ಕಡಿಮೆ ದುಡಿಯುವುದಕ್ಕೆ ಅಗತ್ಯವಾದ ಕೆಲಸವಾಗಲಿ, ಹಣವಾಗಲಿ ಇಲ್ಲದೆ ಕಷ್ಟ ಪಡುವಂತಾಯಿತು, ಅದರಲ್ಲೂ ಬೀದಿ ವ್ಯಾಪಾರಿಗಳು ಕೆಲಸವನ್ನು ಕಳೆದುಕೊಂಡು ಅಥವಾ ವ್ಯಾಪಾರವನ್ನು ಮಾಡಲು ಸಾಧ್ಯವಾಗದೆ ಪರದಾಡುವಂತೆ ಆಗಿತ್ತು.

ಗೂಗಲ್ ಪೇ ಮೂಲಕ ಸಿಗುತ್ತೆ 1 ಲಕ್ಷದವರೆಗೆ ಸಾಲ! ಒಂದೇ ನಿಮಿಷದಲ್ಲಿ ಪಡೆಯಿರಿ

ಇದನ್ನ ಗಮನಿಸಿದ ಕೇಂದ್ರ ಸರ್ಕಾರ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ನಡೆಸುವವರಿಗೆ ಆರ್ಥಿಕ ಸಹಾಯವನ್ನು ನೀಡಲು ಮುಂದಾಯಿತು. ಅದಕ್ಕಾಗಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಚನೆ ಅಡಿಯಲ್ಲಿ ಇಂದು ಲಕ್ಷಾಂತರ ಜನ ಸಾಲ ಸೌಲಭ್ಯ (Loan) ಪಡೆದುಕೊಂಡು ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಪ್ರಯೋಜನಗಳು!

ಸಣ್ಣ ಉದ್ಯಮ ಮಾಡುವವರು ಅದರಲ್ಲೂ ಬೀದಿ ಬದಿಯಲ್ಲಿ ತರಕಾರಿ, ಹಣ್ಣು, ಹೂವು ಮಾರಾಟ ಮಾಡುವವರು, ಕ್ಷೌರಿಕ ಅಂಗಡಿಯವರು, ಪಾನ್ ಶಾಪ್ ಫಾಸ್ಟ್ ಫುಡ್ ಮಾರಾಟ ಮಾಡುವವರು, ಲಾಂಡ್ರಿ ಕೆಲಸ ಮಾಡುವವರು ಹೀಗೆ ಸಾಕಷ್ಟು ಜನ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ

Loan Scheme7%ಬಡ್ಡಿ ಯಲ್ಲಿ ಪಡೆಯಿರಿ ಸಾಲ ಸೌಲಭ್ಯ!

ಈ ಯೋಜನೆಯಲ್ಲಿ ಹತ್ತು ಸಾವಿರ ರೂಪಾಯಿಯಿಂದ 50,000ಗಳ ವರೆಗೂ ಸಾಲ (Loan) ಪಡೆಯಬಹುದು. ಆರಂಭಿಕ ಹಂತದ ಸಾಲಕ್ಕೆ ಅಂದ್ರೆ ಹತ್ತು ಸಾವಿರದ ವರೆಗೂ ನೀವು ಗ್ಯಾರಂಟಿಯನ್ನು ಕೂಡ ಕೊಡುವ ಅಗತ್ಯ ಇರುವುದಿಲ್ಲ.

ಮೊದಲ ಹಂತದ ಸಾಲ ಮರುಪಾವತಿ ಮಾಡಿದ ನಂತರ ಎರಡನೇ ಹಂತದ ಸಾಲ ಪಡೆಯಬಹುದು. ಹತ್ತು ಸಾವಿರ ರೂಪಾಯಿಗಳ ಸಾಲ ಮರುಪಾವತಿ ಮಾಡಿದ್ರೆ 20 ಸಾವಿರ ಸಾಲ ಪಡೆದುಕೊಳ್ಳಲು ಅರ್ಹರಾಗುತ್ತೀರಿ. ಅದನ್ನು ಮರುಪಾವತಿ ಮಾಡಿದ್ರೆ ಐವತ್ತು ಸಾವಿರ ರೂಪಾಯಿಗಳ ಸಾಲ ಪಡೆಯಬಹುದು.

ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ

ಈ ಸಾಲಕ್ಕೆ 7% ಬಡ್ಡಿ ದರ ನಿಗದಿಪಡಿಸಲಾಗಿದೆ. ನೀವು 10,000ಗಳನ್ನು ಸಾಲವಾಗಿ ಪಡೆದುಕೊಂಡರೆ ರೂ. 400 ರೂಪಾಯಿಗಳ ಸಬ್ಸಿಡಿ ಹಾಗೂ ವಾರ್ಷಿಕವಾಗಿ ಜನಧನ ಖಾತೆಯ ಮೂಲಕ ಮಾಡುವ ಡಿಜಿಟಲ್ ಪೇಮೆಂಟ್ (digital payment) ಮೇಲೆ 1200 ಕ್ಯಾಶ್ಬ್ಯಾಕ್ (cashback) ಕೂಡ ಪಡೆಯುತ್ತೀರಿ.

18 ವರ್ಷ ಮೇಲ್ಪಟ್ಟ ವ್ಯಾಪಾರಿಗಳು ಹಾಗೂ 60 ವರ್ಷ ವಯಸ್ಸಿನ ಹೊರಗಿನ ವ್ಯಾಪಾರಿಗಳು ಸಾಲ ಪಡೆಯಬಹುದು. ಇನ್ನು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ SVANidhi ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಬೇಕು ಎಂದು ಪಡೆದುಕೊಳ್ಳಬಹುದು. ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ

You will get a huge subsidy for the loan you get in this government scheme

Related Stories