ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
Home Loan : ಸ್ವಂತ ಮನೆ (Own House) ನಿರ್ಮಾಣಮಾಡುವ ನಿಮ್ಮ ಕನಸನ್ನು ನನಸು ಮಾಡಲು ಈಗ ಬ್ಯಾಂಕ್ ಗಳೂ ಕೂಡ ಸಹಕರಿಸಲು ಮುಂದಾಗಿವೆ. ಹೌದು, ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ನಾವು ಗೃಹ ಸಾಲವನ್ನು ತೆಗೆದುಕೊಂಡು ಮನೆ ಕಟ್ಟಿಸುತ್ತೇವೆ.
ಒಂದು ದೊಡ್ದ ಮೊತ್ತದ ಹಣವನ್ನು ಸಾಲವಾಗಿ ಪಡೆದು, ನಂತರ ಪ್ರತಿ ತಿಂಗಳು ಇಷ್ಟು ಅಂತ EMI ಪಾವತಿ ಮಾಡಿದ್ರೆ ಆಯ್ತು. ಸುಮಾರು 15 ರಿಂದ 20 ವರ್ಷಗಳವರೆಗೆ ಸಾಲ ಮರುಪಾವತಿ ಮಾಡಲು ಅವಕಾಶವಿರುತ್ತದೆ.
ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ನೀವು ಬ್ಯಾಂಕ್ ನಲ್ಲಿ ಸಾಲ (Bank Loan) ಪಡೆದುಕೊಳ್ಳುವುದಿದ್ದರೆ, ಆ ಬ್ಯಾಂಕ್ ನಲ್ಲಿ ಎಷ್ಟಿದೆ ಬಡ್ದಿದರ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಅದರಲ್ಲೂ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ, ಅಂದರೆ 800-850 ಈ ರೀತಿ ಇದ್ರೆ ಗೃಹಸಾಲದ (Home Loan) ಮೇಲೆ ಬ್ಯಾಂಕ್ ಗಳು ಬೇಸಿಕ್ ಬಡ್ದಿದರದಲ್ಲಿ ಸಾಲ ನೀಡುತ್ತವೆ.
ಹಾಗಾದ್ರೆ ಬನ್ನಿ ಯಾವ ಯಾವ ಬ್ಯಾಂಕ್ ನಲ್ಲಿ ಬಡ್ಡಿದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.
ಬ್ಯಾಂಕ್ ಆಫ್ ಇಂಡಿಯಾ (Bank of India) – ಈ ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ತೆಗೆದುಕೊಂಡ್ರೆ, 15-25 ವರ್ಷ ಮರುಪಾವತಿಗೆ ಅವಕಾಶವಿರುತ್ತದೆ. ಆರಂಭಿಕ ಬಡ್ಡಿದರ 8.30% ಇರುತ್ತದೆ.
ಪಿಂಚಣಿ ನಿಯಮಗಳಲ್ಲಿ ಬದಲಾವಣೆ; ಏಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ!
ಪಂಜಾಬ್ ನ್ಯಾಶನಲ್ ಬ್ಯಾಂಕ್ (Panjab National Bank) – ಸಾಕಷ್ಟು ಗ್ರಾಹಕರನ್ನು ಹೊಂದಿರುವ ಈ ಬ್ಯಾಂಕ್, ಗ್ರಾಹಕರಿಗೆ ಅಗತ್ಯವಿರುವ ಹಲವು ಉತ್ತಮ ಸೌಲಭ್ಯವನ್ನು ಒದಗಿಸಿಕೊಡುತ್ತಿದೆ. ಅದರಲ್ಲಿ ಗೃಹಸಾಲವೂ ಕೂಡ ಒಂದು. ಈ ಬ್ಯಾಂಕ್ ನಲ್ಲಿ ಗೃಹಸಾಲದ ಬಡ್ಡಿದರ 8.45% – 10.5% ವರೆಗೆ ಇದೆ.
ಬ್ಯಾಂಕ್ ಆಫ್ ಬರೋಡ (Bank of Baroda) – ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಇತ್ತೀಚಿಗೆ ಗ್ರಾಹಕರಿಗೆ ಅನುಕೂಲವಾಗುವ ಬೇರೆ ಬೇರೆ ಸಾಲ ಸೌಲಭ್ಯಗಳನ್ನು ಕಡಿಮೆ ಬಡ್ಡಿದರದಲ್ಲಿ ನೀಡುತ್ತದೆ. 8.4 – 10.6% ಬಡ್ಡಿದರದಲ್ಲಿ ಗೃಹಸಾಲವನ್ನು ನೀಡುತ್ತದೆ.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ
ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) – ಖಾಸಗಿ ಬಲೆದು ಈ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದುಕೊಳ್ಳುವವರಿಗೆ ಉತ್ತಮ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಸಾಲ ಮರುಪಾವತಿ ಮಾಡಲು ಗರಿಷ್ಠ 30 ವರ್ಷಗಳ ಅವಧಿ ಇರುತ್ತದೆ. ಗೃಹ ಸಾಲಕ್ಕೆ 8.50% ನಿಂದ ಬಡ್ಡಿ ದರ ಆರಂಭವಾಗುತ್ತದೆ. ಇನ್ನು ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿ ಇದ್ರೆ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
ಈಗ ಈ ಬ್ಯಾಂಕ್ ಗಳಲ್ಲಿ ನಿಮಗೆ ಯಾವ ಬ್ಯಾಂಕ್ ಹೆಚ್ಚು ಸೂಕ್ತವಾದ ಸಾಲ ನೀಡುತ್ತದೆ ಎಂಬುದನ್ನು ಪರಿಶೀಲಿಸಿ, ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆದುಕೊಳ್ಳಿ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ
These banks are offering home loan at low interest to build own house