ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ
SBI Loan : ಸ್ಟೇಟ್ ಬ್ಯಾಂಕ್ ನಲ್ಲಿ ಸಿಗಲಿದೆ ವಿಶೇಷ ಸಾಲ ಸೌಲಭ್ಯ, ಅಗತ್ಯ ಇದ್ದವರು ತಕ್ಷಣ ಅಪ್ಲೈ ಮಾಡಿ!
SBI Loan : ನಮಗೆ ಹಣಕಾಸಿನ ಅವಶ್ಯಕತೆ ಇದ್ದಾಗ ಯಾರೂ ಬಂದು ಸಹಾಯ ಮಾಡುವುದಿಲ್ಲ. ಯಾರು ನಮ್ಮ ಜೊತೆಗೆ ಎಷ್ಟೇ ಚೆನ್ನಾಗಿದ್ದರೂ ಅಂತ ಪರಿಸ್ಥಿತಿಯಲ್ಲಿ ತಮ್ಮ ಬಳಿ ಹಣ ಇಲ್ಲ ಎಂದು ಹೇಳುತ್ತಾರೆ. ಅದಕ್ಕಾಗಿಯೇ ನಾವು ಹಣದ ಅಗತ್ಯ ಇದ್ದಾಗ ಬ್ಯಾಂಕ್ನಿಂದ ಸಾಲ (Bank Loan) ಸೌಲಭ್ಯ ಪಡೆಯುತ್ತೇವೆ.
ಬ್ಯಾಂಕ್ ನಲ್ಲಿ ನಮ್ಮ ಅನುಕೂಲತೆ ತಕ್ಕ ಹಾಗೆ ಬೇಕಾಗಿರುವ ಎಲ್ಲ ರೀತಿಯ ಸಾಲ ಸೌಲಭ್ಯ ಸಿಗುತ್ತದೆ, ಗೃಹ ಸಾಲ (Home loan) ಇರಬಹುದು. ವೈಯಕ್ತಿಕ ಸಾಲ (personal loan) ವಾಹನ ಸಾಲ (Vehicle Loan) ಚಿನ್ನದ ಮೇಲಿನ ಸಾಲ (Gold Loan) ಹೀಗೆ ಬೇರೆ ಬೇರೆ ರೀತಿಯ ಸಾಲಗಳನ್ನು ಪಡೆದುಕೊಳ್ಳಲು ಅವಕಾಶವಿದೆ.
ಇದೀಗ ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಈ ಬಗೆಯ ಸಾಲದ ಮೇಲೆ ಬಡ್ಡಿ ದರವನ್ನು ಕಡಿಮೆ ಮಾಡಿದೆ.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ
ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ಎಸ್ ಬಿ ಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದು ಬಹಳ ದೊಡ್ಡ ಪ್ರಮಾಣದ ಗ್ರಾಹಕರನ್ನ ಹೊಂದಿದೆ, ಇಲ್ಲಿಯವರೆಗೆ ಗ್ರಾಹಕರ ಮೆಚ್ಚುಗೆ ಗಳಿಸಿಕೊಂಡು ಬಂದಿರುವ ಈ ಬ್ಯಾಂಕ್ ಗ್ರಾಹಕರಿಗಾಗಿ ಸಾಕಷ್ಟು ಉತ್ತಮ ಸಾಲ ಸೌಲಭ್ಯಗಳನ್ನು ಜೊತೆಗೆ ಉಳಿತಾಯ ಯೋಜನೆಗಳನ್ನು ಘೋಷಿಸಿದೆ.
ಎಸ್ ಬಿ ಐ ನಲ್ಲಿ ವಯಕ್ತಿಕ ಸಾಲ ಪಡೆದುಕೊಳ್ಳುವವರಿಗೆ ವಿಶೇಷ ಬೆನಿಫಿಟ್!
ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಬ್ಯಾಂಕ್ ಸಾಲ ಮಾಡುವುದು ಅಷ್ಟು ಸುಲಭವಲ್ಲ ಅದಕ್ಕೆ ಸಾಕಷ್ಟು ಪ್ರೊಸೀಜರ್ ಇರುತ್ತದೆ. ಜೊತೆಗೆ ಶುಲ್ಕ ಪಾವತಿಸಬೇಕು.
ಆದರೆ ಈಗ ಎಸ್ ಬಿ ಐ ಫೆಸ್ಟಿವಲ್ ಧಮಾಕ ಅಭಿಯಾನ ಆರಂಭಿಸಿದ್ದು ಮಾರ್ಚ್ 31.2024ರ ಒಳಗೆ ವಯಕ್ತಿಕ ಸಾಲ ಪಡೆಯುವ ಗ್ರಾಹಕರಿಗೆ ಯಾವುದೇ ಪ್ರಕ್ರಿಯೆ ಶುಲ್ಕವನ್ನು ವಿಧಿಸುತ್ತಿಲ್ಲ. ಈ ಪ್ರಕ್ರಿಯೆ ಶುಲ್ಕ ಸಾಮಾನ್ಯವಾಗಿ 1.5% ಇರುತ್ತದೆ. ಆದರೆ ಈ ತಿಂಗಳು ನೀವು ವೈಯಕ್ತಿಕ ಸಾಲ ತೆಗೆದುಕೊಂಡರೆ ಯಾವುದೇ ಪ್ರೋಸೆಸಿಂಗ್ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಎಂದು ತಿಳಿಸಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
ಯಾರಿಗೆ ಸಿಗುತ್ತೆ ವೈಯಕ್ತಿಕ ಸಾಲದ ಬೆನಿಫಿಟ್ – Personal Loan
* 21 ವರ್ಷದಿಂದ 58 ವರ್ಷ ವಯಸ್ಸಿನವರು ಸಾಲ ಸೌಲಭ್ಯ ಪಡೆಯಬಹುದು
* ವೈಯಕ್ತಿಕ ಸಾಲ ಪಡೆಯಲು ಕನಿಷ್ಠ 15,000 ಮಾಸಿಕ ವೇತನ ಪಡೆದುಕೊಳ್ಳಬೇಕು
* ಯಾವುದೇ ಸರ್ಕಾರಿ ಅಥವಾ ಸರ್ಕಾರಿ ಇತರ ಖಾಸಗಿ ಕ್ಷೇತ್ರದಲ್ಲಿ ವೃತ್ತಿ ಅಥವಾ ಉದ್ಯಮದಲ್ಲಿ ತೊಡಗಿಕೊಂಡಿರಬೇಕು.
* ನೀವು ಕೆಲಸ ಮಾಡುವ ಸ್ಥಳದಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿರಬೇಕು.
ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ? ಕಾನೂನು ತಿಳಿಯಿರಿ
ಈ ಎಲ್ಲಾ ಅರ್ಹತೆಗಳು ನಿಮ್ಮ ಬಳಿ ಇದ್ದರೆ ಯಾವುದೇ ಸಂದರ್ಭದಲ್ಲಿ ಹಣಕಾಸಿನ ಅವಶ್ಯಕತೆ ಬಿದ್ದಾಗ ಎಸ್ ಬಿ ಐ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆಯಬಹುದು.
ಅದರಲ್ಲೂ ಈ ತಿಂಗಳು ನೀವು ವೈಯಕ್ತಿಕ ಸಾಲ ತೆಗೆದುಕೊಂಡರೆ ಹೆಚ್ಚಿನ ಬೆನಿಫಿಟ್ ಸಿಗಲಿದೆ, ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಅಥವಾ ಎಸ್ ಬಿ ಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
A bumper opportunity for those who have a State Bank account, Get Special loan facility