ಹಳೆಯ 100 ರೂಪಾಯಿ ನೋಟುಗಳು ಬ್ಯಾನ್ ಆಗುತ್ತಾ? ಆರ್‌ಬಿಐ ಸ್ಪಷ್ಟನೆ ಇಲ್ಲಿದೆ!
ಆರ್ ಬಿ ಐ ಈ ಗಾಸಿಪ್ ಅನ್ನು ತಳ್ಳಿ ಹಾಕಿದೆ, ಇಂತಹ ಯಾವುದೇ ನಿರ್ಧಾರವನ್ನು ಕೇಂದ್ರ ಬ್ಯಾಂಕ್ (Bank) ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸೋಶಿಯಲ್ ಮೀಡಿಯಾ (social media) ದಲ್ಲಿ ಯಾವ ವ್ಯಕ್ತಿ ಬೇಕಾದರೂ ಬೆಳಗ್ಗೆಯಿಂದ ರಾತ್ರಿ ಆಗುವಷ್ಟರಲ್ಲಿ ಫೇಮಸ್ ಆಗಬಲ್ಲ. ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಹರಡುವ ಗಾಸಿಪ್ (gossip) ಗಳು.
ಅದರಲ್ಲೂ ಹಣಕಾಸಿನ ವಿಚಾರಕ್ಕೆ ಬಂದರೆ ಯಾವುದೇ ವಿಷಯ ಬಾಳ ಬೇಗ ವೈರಲ್ (viral news) ಆಗುತ್ತೆ, ಒಬ್ಬರಿಂದ ಒಬ್ಬರಿಗೆ ಈ ವಿಷಯ ರವಾನೆ ಆಗುತ್ತಲೆ ಇರುತ್ತದೆ.
ಈ ಯೋಜನೆ ಅಡಿ ಯಾವುದೇ ಬಡ್ಡಿ ಇಲ್ಲದೆ 2 ಲಕ್ಷ ರೂ. ಸಿಗುತ್ತೆ! ಈ ರೀತಿ ಅರ್ಜಿ ಸಲ್ಲಿಸಿ
ಇದೇ ರೀತಿ ವೈರಲ್ ನ್ಯೂಸ್ ನಿಮ್ಮ ಮೊಬೈಲ್ ಗೂ ಬಂದಿರಬಹುದು, ಹಳೆಯ ನೂರು ರೂಪಾಯಿಗಳ ನೋಟುಗಳನ್ನು ದೇಶಾದ್ಯಂತ ಆರ್ ಬಿ ಐ ಬ್ಯಾನ್ (old rs 100 currency ban) ಮಾಡಿದೆ ಎನ್ನುವ ವಿಚಾರ.
ನಿಮ್ಮ ಮೊಬೈಲ್ ಗೆ (Mobile) ಬರುತ್ತಿದ್ದಂತೆ ನೀವು ಕೂಡ ಸಾಕಷ್ಟು ಜನರಿಗೆ ಫಾರ್ವರ್ಡ್ ಮಾಡಿರುತ್ತೀರಿ. ಆದರೆ ಈ ಸುದ್ದಿ ನಿಜವೋ ಅಥವಾ ಸುಳ್ಳು ಅಂತ ತಿಳಿದುಕೊಳ್ಳುವುದು ಬಹಳ ಮುಖ್ಯ ಇದಕ್ಕಾಗಿ ಆರ್ ಬಿ ಐ ಸ್ಪಷ್ಟನೆಯನ್ನು ನೀಡಿದೆ.
ಹಳೆಯ ನೂರು ರೂಪಾಯಿ ನೋಟುಗಳು ಅಮಾನ್ಯವೇ?
ಕಳೆದ ಕೆಲವು ವರ್ಷಗಳ ಹಿಂದೆ ಡಿಮೋನಿಟೈಸ್ಸೇಷನ್ ಪ್ರಕ್ರಿಯೆ ಮೂಲಕ ನೋಟು ಬ್ಯಾನ್ ಮಾಡಲಾಗಿತ್ತು ಹಾಗೂ ಇದರಿಂದ ಸಾಕಷ್ಟು ಅಕ್ರಮ ವ್ಯವಹಾರಗಳಿಗು ಕೂಡ ಕಡಿವಾಣ ಹಾಕಲಾಗಿತ್ತು.
ಅಂದಿನಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ನೋಟ್ ಬ್ಯಾನ್ ಎನ್ನುವ ವಿಚಾರ ವೈರಲ್ ಆಗುತ್ತದೆ, ಆದರೆ ನಿಜಕ್ಕೂ ಆರ್ ಬಿ ಐ (Reserve Bank of India) ಅಥವಾ ಕೇಂದ್ರ ಸರ್ಕಾರ ಹೀಗೆ ಬೇಕಾಬಿಟ್ಟಿಯಾಗಿ ಯಾವಾಗ ಬೇಕು ಅನ್ನಿಸಿದರೆ ಅವಾಗ ನೋಟ್ ಬ್ಯಾನ್ ಮಾಡಲು ಸಾಧ್ಯವಿಲ್ಲ. ಅದಕ್ಕೂ ಕೂಡ ಅದರದ್ದೇ ಆದ ನೀತಿ ನಿಯಮಗಳು ಇರುತ್ತವೆ.
ಮಹಿಳೆಯರಿಗೆ ಸಿಗಲಿದೆ 11,000 ರೂಪಾಯಿ! ಮೋದಿಜಿ ಅವರಿಂದ ಬಂಪರ್ ಗಿಫ್ಟ್
ಆರ್‌ಬಿಐ ಹಳೆಯ 100 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದೆ. ನೋಟು ಬದಲಾವಣೆಗೆ ಮಾರ್ಚ್ 31.2024 ಕೊನೆಯ ದಿನಾಂಕ ಏಪ್ರಿಲ್ ಒಂದರಿಂದ ಈ ನೋಟು ಚಲಾವಣೆಯಲ್ಲಿ ಇರುವುದಿಲ್ಲ… ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಅಂಗಡಿಗಳಲ್ಲಿ ಅಥವಾ ಬೀದಿ ವ್ಯಾಪಾರ ಮಾಡುವವರು, ಟ್ಯಾಕ್ಸಿ ಆಟೋ ಡ್ರೈವರ್ ಗಳು ತಮ್ಮ ಗ್ರಾಹಕರಿಂದ ಹಳೆಯ 100 ರೂಪಾಯಿಗಳನ್ನು ಪಡೆದುಕೊಳ್ಳುತ್ತಿರಲಿಲ್ಲ.
ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!
ಹಾಗಾಗಿ ಗ್ರಾಹಕರು ಕೂಡ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆರ್ ಬಿ ಐ ಈ ಗಾಸಿಪ್ ಅನ್ನು ತಳ್ಳಿ ಹಾಕಿದೆ, ಇಂತಹ ಯಾವುದೇ ನಿರ್ಧಾರವನ್ನು ಕೇಂದ್ರ ಬ್ಯಾಂಕ್ (Bank) ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಆದ್ದರಿಂದ ಹಳೆಯ ನೂರು ರೂಪಾಯಿ ನೋಟುಗಳನ್ನು ನೀವು ಯಾರಿಗೆ ಬೇಕಾದರೂ ಕೊಡಬಹುದು ಅದೇ ರೀತಿ ಆ ಹಣವನ್ನು ಹಿಂಪಡೆದು ಹಣಕಾಸಿನ ವ್ಯವಹಾರ ಮುಂದುವರಿಸಬಹುದು.
Will old 100 rupee notes Will be banned, Here is the RBI clarification