ದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಅಗತ್ಯವಾಗಿರುವ ಆರ್ಥಿಕ ನೆರವು (financial support) ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗಾಗಿ ಒಂದು ಪ್ರಮುಖ ಯೋಜನೆ ಜಾರಿಗೆ ತರಲಾಗಿದ್ದು ಇದರಿಂದ ಮಹಿಳೆಯರ ಪೌಷ್ಟಿಕ ಆಹಾರ (nutrients food) ಹಾಗೂ ಮಗುವಿನ ಆಹಾರಕ್ಕೆ ಅನುಕೂಲವಾಗುವ ಆರ್ಥಿಕ ನೆರವು ಪಡೆದುಕೊಳ್ಳಬಹುದು.
ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!
ನಮಗೆಲ್ಲ ಗೊತ್ತಿರುವ ಹಾಗೆ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ಬಡವರಿಗೆ ಮಕ್ಕಳಿಗೆ ಸರಿಯಾಗಿ ಪೋಷಕಾಂಶ ಆಹಾರವನ್ನು ಒದಗಿಸಲು ಸಾಧ್ಯವಿಲ್ಲ, ಈ ರೀತಿ ಮಕ್ಕಳಿಗೆ ಅಥವಾ ಗರ್ಭಿಣಿಯಾಗಿದ್ದಾಗ ಸರಿಯಾಗಿ ಪೋಷಕಾಂಶಯುಕ್ತ ಆಹಾರ ಸಿಗದೇ ಇದ್ದಾಗ ದೇಶದಲ್ಲಿ ಅನಾರೋಗ್ಯ ಸಮಸ್ಯೆ ತಲೆದೂರುತ್ತದೆ.
ಇದನ್ನ ತಡೆಗಟ್ಟುವ ಸಲುವಾಗಿ ಸರ್ಕಾರ ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ ಜಾರಿಗೆ ತಂದಿತು. ಈ ಯೋಜನೆಯಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ 11,000ಗಳನ್ನು ಸರ್ಕಾರ ನೇರವಾಗಿ ಖಾತೆಗೆ (Bank Account) ಜಮಾ ಮಾಡುತ್ತದೆ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ
ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಹಣಕಾಸಿನ ಸಹಾಯ ನೀಡಲಾಗುವುದು. ಜೊತೆಗೆ ಪ್ರಸವ ಪೂರ್ವ ಮತ್ತು ಪುರಸಭಾ ನಂತರದ ಅವರ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಉಚಿತ ಔಷಧಿಗಳು ಮೊದಲ ಅವುಗಳನ್ನು ಸರ್ಕಾರ ಒದಗಿಸುತ್ತದೆ.
ಮಹಿಳೆ ಮೊದಲು ಬಾರಿಗೆ ತಾಯಿಯಾಗಿದ್ದರೆ 5,000 ಹಾಗೂ ಎರಡನೇ ಬಾರಿಗೆ ಹೆಣ್ಣು ಮಗುವನ್ನು ಹೊಡೆದರೆ 6,000ಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ಇದಕ್ಕಾಗಿ ಮಹಿಳೆಯರು ಮೊದಲು ಗರ್ಭಧಾರಣೆ ಆದ ನಂತರ ನೋಂದಣಿ ಮಾಡಿಕೊಳ್ಳಬೇಕು.
ಎಎನ್‌ಸಿ ಮಾಡಿದ ನಂತರ 2000 ಗಳು ಹಾಗೂ ಮಗು ಹುಟ್ಟಿದ ನಂತರ ಮೊದಲ ಲಸಿಕೆ ಹಾಕಿಸಿದ ಬಳಿಕ 3000 ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ
19 ವರ್ಷ ಮೀರಿದ ಮದುವೆಯಾದ ಮಹಿಳೆ ಈ ಯೋಜನೆಗೆ ಅರ್ಹರು. ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮೊದಲಾದವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
ಗರ್ಭಿಣಿ ದೃಢೀಕರಣ ಪ್ರಮಾಣ ಪತ್ರ
ಆಧಾರ್ ಕಾರ್ಡ್ (Aadhaar Card)
ರೇಷನ್ ಕಾರ್ಡ್ (Ration Card)
ಜಾತಿ ಪ್ರಮಾಣ ಪತ್ರ (Caste Certificate)
ಆದಾಯ ಪ್ರಮಾಣ ಪತ್ರ (Income Certificate)
ಹಣ ಬಿಡುಗಡೆ ಮಾಡಲು ಹಂತ ಹಂತದ ಗರ್ಭಿಣಿ ಸ್ತ್ರೀಯರ ಫೋಟೋವನ್ನು ಕೂಡ ಕೊಡಬೇಕಾಗುತ್ತದೆ.
ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ಪಡೆದು ಅಲ್ಲೇ ಅರ್ಜಿ ಸಲ್ಲಿಸಬಹುದು.