ಈ ತಳಿಯ ಮೀನು ಸಾಕಾಣಿಕೆ ಮಾಡಿದ್ರಿ ಅನ್ಕೊಳ್ಳಿ; ತಿಂಗಳಿಗೆ 2 ಲಕ್ಷ ಆದಾಯ ಫಿಕ್ಸ್!

ರೈತರು (farmers) ತಮ್ಮ ಬೆಳೆಯ ಜೊತೆಗೆ ಕೆಲವು ಉಪಕಸುಬುಗಳನ್ನು ಕೂಡ ಮಾಡುತ್ತಾರೆ. ಹೈನುಗಾರಿಕೆ ಇರಬಹುದು, ಜೇನು ಸಾಕಾಣಿಕೆ, ಪಶು ಸಂಗೋಪನೆ, ಮೀನುಸಾಕಾಣಿಕೆ ಹೀಗೆ ಹಲವು ಬಗೆಯ ಉಪಕಸುಬುಗಳನ್ನು ಮಾಡುತ್ತಾರೆ.
ಅದರಲ್ಲೂ ಇತ್ತೀಚಿಗೆ ಮೀನುಗಾರಿಕೆ (fish farming) ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಯಾಕೆಂದರೆ ಕೆಲವೊಂದು ಬೇರೆಬೇರೆ ತಳಿಯ ಮೀನು ಸಾಕಾಣಿಕೆ (fishery) ಮಾಡಿದರೆ ಅಂತಹ ಮೀನುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಅವಕಾಶ! ವಿಶೇಷ ಸಾಲ ಸೌಲಭ್ಯ
ಹಾಗಾಗಿ ಇದರಿಂದ ಉತ್ತಮ ಆದಾಯವನ್ನು ಕೂಡ ಗಳಿಸಬಹುದು. ನೀವು ಮೀನು ಸಾಕಾಣಿಕೆ ಆರಂಭಿಸಬೇಕು ಅಂತ ಇದ್ದರೆ, ಅಥವಾ ಈಗಾಗಲೇ ಮೀನು ಸಾಕಾಣಿಕೆ ಮಾಡುತ್ತಿರುವವರಾಗಿದ್ರೆ ಇದೊಂದು ಬಗೆಯ ಮೀನು ಸಾಕಿ ಇದರಿಂದ ನೀವು ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ.
ಮೀನು ಕೃಷಿಗೆ ಸರ್ಕಾರದ ನೆರವು!
ಮೀನುಗಾರಿಕೆ ಮಾಡುವ ರೈತರು ಘಟಕ ಸ್ಥಾಪನೆ ಮಾಡಲು ಹಾಗೂ ಮೀನು ಸಾಕಾಣಿಕೆ ವೈಜ್ಞಾನಿಕವಾಗಿ ಮಾಡಲು ಸರ್ಕಾರ ನೆರವು ನೀಡುತ್ತದೆ. ಜೊತೆಗೆ ಸಬ್ಸಿಡಿ ಸಾಲ (Subsidy Loan) ಹಾಗೂ ತರಬೇತಿಯನ್ನು ಕೂಡ ನೀಡಲಾಗುವುದು. ಹಾಗಾಗಿ ಸರ್ಕಾರದ ಈ ಎಲ್ಲಾ ಸೌಲಭ್ಯಗಳ ಪ್ರಯೋಜನಗಳನ್ನು ಪಡೆದುಕೊಳ್ಳುವುದರ ಜೊತೆಗೆ ಮುರ್ರೆಲ್ ಮೀನು ಸಾಕಾಣಿಕೆ ಮಾಡಿದರೆ ಕೈ ತುಂಬಾ ಆದಾಯ ಫಿಕ್ಸ್ ಎನ್ನುತ್ತಾರೆ ಇದೇ ಕೃಷಿ ಮಾಡಿ ಸಕ್ಸಸ್ ಆದ ಕೃಷಿಕರೋಬ್ಬರು.
ಮುರ್ರೆಲ್ ಮೀನು ಸಾಕಾಣಿಕೆ!
ಈ ಕೃಷಿ ಮಾಡುವುದಕ್ಕೆ ಮೀನು ಉತ್ಪಾದನಾ ಕೇಂದ್ರದಿಂದ ಎರಡು ಇಂಚು, ನಾಲ್ಕು ಇಂಚು ಹೀಗೆ ಬೇರೆ ಬೇರೆ ಗಾತ್ರದ ಮುರ್ರೆಲ್ ಮೀನು ಮರಿಗಳನ್ನ ತಂದು ಸಾಕಾಣಿಕೆ ಮಾಡಬಹುದು. ಅಥವಾ ನಿಮಗೆ ಮೀನು ಸಾಕಾಣಿಕೆಯಲ್ಲಿ ಇನ್ನಷ್ಟು ಆಸಕ್ತಿ ಇದ್ದರೆ ಸರಿಯಾದ ತರಬೇತಿ (training) ಪಡೆದುಕೊಂಡು ನೀವೇ ಮೀನು ಉತ್ಪಾದನಾ ಘಟಕವನ್ನು ಕೂಡ ಸ್ಥಾಪನೆ ಮಾಡಬಹುದು. ಈ ರೀತಿ ಮಾಡಿದರೆ ನೀವು ಪ್ರತಿ ತಿಂಗಳು ಗಳಿಸುವ ಆದಾಯಕ್ಕೆ ಲೆಕ್ಕವೇ ಇಲ್ಲ ಎಂದು ಭಾವಿಸಿ. ಅಷ್ಟು ಉತ್ತಮ ಆದಾಯ ಇದರಿಂದ ಸಿಗುತ್ತದೆ.
ಬಡವರಿಗಾಗಿ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಸಾಲ
ಆರೋಗ್ಯಕ್ಕೆ ಅತಿ ಉತ್ತಮ ಮುರ್ರೆಲ್ ಮೀನು!
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಈ ಮೀನಿನ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ನೀವು ಮೀನು ಮರಿಗಳನ್ನು ಸಾಕಿ ಮಾರಾಟ ಮಾಡಬಹುದು. ಇದು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ, ಅಸ್ತಮಾ ಇರುವವರು ಈ ಮೀನನ್ನು ಸೇವಿಸಿದರೆ ಆರೋಗ್ಯ ಸುಧಾರಿಸುತ್ತದೆ.
ಈ ಮೀನಿನಲ್ಲಿ ಅತಿ ಹೆಚ್ಚು ಪ್ರೋಟೀನ್ ಇರುವುದರಿಂದ ದೇಹಕ್ಕೆ ಬೇಕಾದ ಪ್ರೋಟೀನ್ ಅನ್ನು ಇದೊಂದೇ ಮೀನಿನಿಂದ ಪಡೆದುಕೊಳ್ಳಲು ಸಾಧ್ಯವಿದೆ. ಈ ಮೀನಿನಲ್ಲಿ ಮುಳ್ಳು ಕಡಿಮೆ, ಗರ್ಭಿಣಿ ಸ್ತ್ರೀಯರು ಕೂಡ ಮೀನು ಸೇವನೆ ಮಾಡಬಹುದು. ತುಂಬಾನೇ ಒಳ್ಳೆಯದು. ಒಮೆಗಾ ತ್ರೀ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಮುರ್ರೆಲ್ ಮೀನು ಬೇಡಿಕೆ ಹೆಚ್ಚಾಗಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಈ ಬ್ಯಾಂಕುಗಳು ಕಡಿಮೆ ಬಡ್ಡಿಗೆ ನೀಡುತ್ತಿವೆ ಹೋಮ್ ಲೋನ್
ಸಾಮಾನ್ಯವಾಗಿ ಯಾವುದೇ ಬಗೆಯ ಮೀನನ್ನು ಮಾರುಕಟ್ಟೆಗೆ ತರುವಾಗ ಅದನ್ನು ಐಸ್ ನಲ್ಲಿ ಇಟ್ಟು ತರಲಾಗುತ್ತದೆ ಆದರೆ ಈ ಮೀನನ್ನು
ಮಾತ್ರ ಹಾಗೆ ಫ್ರೆಶ್ ಆಗಿ ಕೊಡಲಾಗುತ್ತದೆ. ಹಾಗಾಗಿ ಪೋಷಕಾಂಶಗಳ ಕೊರತೆಯೂ ಉಂಟಾಗುವುದಿಲ್ಲ. ಫ್ರೆಶ್ ಮೀನು ಸೇವನೆಯಿಂದ ಸಂಪೂರ್ಣ ಪೋಷಕಾಂಶ ದೇಹಕ್ಕೆ ಸೇರುತ್ತದೆ ಇದೇ ಕಾರಣಕ್ಕೆ ಮುರ್ರೆಲ್ ಮೀನು ಸಾಕಾಣಿಕೆ ಇಂದು ಹೆಚ್ಚು ಪ್ರಚಲಿತದಲ್ಲಿದೆ.
ಮುರ್ರೆಲ್ ಮೀನು ಕೃಷಿ ಲಾಭದಾಯಕ ಹೇಗೆ?
ಈ ನಾಲ್ಕು ಇಂಚಿನ ಮೀನನ್ನು 12 ರೂಪಾಯಿಗಳಿಗೆ ಖರೀದಿಸಿ ತಂದು ಒಂದು ತಿಂಗಳು ಸಾಕಾಣಿಕೆ ಮಾಡಿದರೆ ಪ್ರತಿ ಕೆಜಿಗೆ ರೂ.250 ಗಳಂತೆ ಮಾರಾಟ ಮಾಡಬಹುದು. 5000 ಲೀಟರ್ ನೀರು ಹಿಡಿಯುವ ಹೊಂಡದಲ್ಲಿ ಈ ಮೀನು ಸಾಕಾಣಿಕೆ ಮಾಡಿದರೆ ಪ್ರತಿ ತಿಂಗಳು 1.5 ಲಕ್ಷ ರೂಪಾಯಿಗಳಿಂದ ಎರಡು ಲಕ್ಷ ರೂಪಾಯಿಗಳನ್ನು ನಿಶ್ಚಿತ ಆದಾಯವಾಗಿ ಗಳಿಸಿಕೊಳ್ಳುತ್ತೀರಿ. ನೀವು ಕೂಡ ಮುರ್ರೆಲ್ ನೀನು ಕೃಷಿ ಮಾಡುದಿದ್ದರೆ ಮೀನುಗಾರಿಕಾ ಇಲಾಖೆಯಿಂದ ಮಾಹಿತಿ ಪಡೆಯಬಹುದು.
ಗೂಗಲ್ ಕಂಪನಿಯೇ ನೀಡ್ತಾ ಇದೆ 2 ಲಕ್ಷ ರೂಪಾಯಿ ಉಚಿತ ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
2 lakh income per month If You do this type of fish farming
ಆರೋಗ್ಯಕ್ಕೆ ಅತಿ ಉತ್ತಮ ಮುರ್ರೆಲ್ ಮೀನು!



