Best Cars: ದೇಶದಲ್ಲಿ ಅತಿ ಕಮ್ಮಿ ಬೆಲೆಗೆ ಸಿಗುವ ಕಾರುಗಳು ಇವು; 33 ಕಿಮೀ ಮೈಲೇಜ್ ಕೊಡಲಿವೆ

Best Cars: ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಹುಡುಕುವ ಗ್ರಾಹಕರಿಗೆ ಮಾರುತಿ ಸುಜುಕಿಯ ಆಲ್ಟೋ K10 ಮತ್ತು ಎಸ್ ಪ್ರೆಸ್ಸೋ ಉತ್ತಮ ಆಯ್ಕೆಯಾಗಿದ್ದು ಲೀಟರ್‌ಗೆ 33 ಕಿಲೋಮೀಟರ್ ತನಕ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿವೆ

  • Best Cars: ಅಗ್ಗದ ಬೆಲೆಯ ಮಾರುತಿ ಕಾರುಗಳು
  • Alto K10 Mileage: 33 ಕಿಮೀ ತನಕ
  • S-Presso Price: ಕಡಿಮೆ ಬೆಲೆ, ಉತ್ತಮ ಫೀಚರ್

Best Cars: ಇಂಧನ ದರ ಏರಿಕೆಯ ಈ ಕಾಲದಲ್ಲಿ ಕಾರು ಖರೀದಿಸುವಾಗ ಬಹುತೇಕ ಜನರು ಮೊದಲಿಗೆ ನೋಡೋದು ಮೈಲೇಜ್. ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಕಾರುಗಳೇ ಸಾಮಾನ್ಯ ಕುಟುಂಬಗಳ ಮೆಚ್ಚುಗೆ ಪಡೆಯುತ್ತಿವೆ. ಈ ವಿಭಾಗದಲ್ಲಿ ಮಾರುತಿ ಸುಜುಕಿಯ ಆಲ್ಟೋ K10 ಮತ್ತು ಎಸ್-ಪ್ರೆಸ್ಸೋ ಮಾದರಿಗಳು ಮತ್ತೆ ಗಮನ ಸೆಳೆಯುತ್ತಿವೆ.

ದೇಶದ ಮಾರುಕಟ್ಟೆಯಲ್ಲಿ ಈ ಎರಡು ಹ್ಯಾಚ್‌ಬ್ಯಾಕ್‌ಗಳು ಅಗ್ಗದ ದರದಲ್ಲೇ ಲಭ್ಯ. ಆಲ್ಟೋ K10 ಆರಂಭಿಕ ಬೆಲೆ ಸುಮಾರು ₹3.50 ಲಕ್ಷ ಇದ್ದರೆ, ಎಸ್-ಪ್ರೆಸ್ಸೋ ₹3.70 ಲಕ್ಷದಿಂದ ಆರಂಭವಾಗುತ್ತದೆ. ಇವುಗಳ ಮಾರಾಟವೂ ಸ್ಥಿರವಾಗಿ ಹೆಚ್ಚುತ್ತಿದ್ದು, ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ಆಯ್ಕೆಯಾಗಿದೆ.

ಇದನ್ನೂ ಓದಿ: ಅಮೆಜಾನ್‌ನಲ್ಲಿ ಗೂಗಲ್ ಪಿಕ್ಸೆಲ್ 10 ಸ್ಮಾರ್ಟ್‌ಫೋನ್ ಮೇಲೆ 10,000 ರಿಯಾಯಿತಿ

ಆಲ್ಟೋ K10ನಲ್ಲಿ 1.0 ಲೀಟರ್ K-ಸಿರೀಸ್ ಎಂಜಿನ್, ಉತ್ತಮ ಪವರ್ ಹಾಗೂ ಇಂಧನ ಉಳಿತಾಯದ ತಂತ್ರಜ್ಞಾನ ನೀಡಲಾಗಿದೆ. ಪೆಟ್ರೋಲ್ ಮಾದರಿಯಲ್ಲಿ 24 ಕಿಮೀ ಮೈಲೇಜ್ ಸಿಗುತ್ತದೆಯಾದರೆ, CNG ಮಾದರಿಯಲ್ಲಿ ಲೀಟರ್‌ಗೆ 33 ಕಿಮೀಗೂ ಹೆಚ್ಚು ಮೈಲೇಜ್ ಸಿಗುತ್ತದೆ. ಜೊತೆಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಏರ್‌ಬ್ಯಾಗ್‌ಗಳು ಮತ್ತು ಸುರಕ್ಷತಾ ಸೌಲಭ್ಯಗಳೂ ಲಭ್ಯ.

ಎಸ್-ಪ್ರೆಸ್ಸೋ ಕೂಡ ಸಮಾನ ಸಾಮರ್ಥ್ಯ ಹೊಂದಿದ್ದು, ಪೆಟ್ರೋಲ್ ಮತ್ತು CNG ಎರಡೂ ಆಯ್ಕೆಗಳಿವೆ. ಡಿಜಿಟಲ್ ಡ್ಯಾಶ್‌ಬೋರ್ಡ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಪವರ್ ವಿಂಡೋಸ್ ಸೇರಿದಂತೆ ಹಲವು ಫೀಚರ್‌ಗಳಿವೆ. ಕಡಿಮೆ ಖರ್ಚಿನಲ್ಲಿ ಹೊಸ ಕಾರು ಬೇಕೆಂದಿರುವವರಿಗೆ ಈ ಎರಡು ಮಾದರಿಗಳು ಒಳ್ಳೆಯ ಆಯ್ಕೆ ಎಂದು ತಜ್ಞರು ಸಲಹೆ ನೀಡುತ್ತಾರೆ.

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories