ಬಸ್ ಟಿಕೆಟ್ ಬೆಲೆಗೆ ಫ್ಲೈಟ್ ಟಿಕೆಟ್! ಬರಿ ₹1499ಕ್ಕೆ ವಿಮಾನ ಪ್ರಯಾಣಕ್ಕೆ ಅವಕಾಶ

ಇಂಡಿಗೋ ಮಾನ್ಸೂನ್ ಸೇಲ್‌ನಲ್ಲಿ ಆಕರ್ಷಕ ಆಫರ್ ಘೋಷಿಸಲಾಗಿದೆ. ದೇಶೀಯ ವಿಮಾನ ಟಿಕೆಟ್ ₹1,499ಕ್ಕೆ, ಅಂತಾರಾಷ್ಟ್ರೀಯ ಟಿಕೆಟ್ ₹4,399 ರಿಂದ ಆರಂಭ. ಜುಲೈ 15 ರಿಂದ ಜುಲೈ 18ರವರೆಗೆ ಮಾತ್ರ ಲಭ್ಯ.

  • ದೇಶೀಯ ಟಿಕೆಟ್ ₹1,499, ಅಂತಾರಾಷ್ಟ್ರೀಯ ಟಿಕೆಟ್ ₹4,399 ಕ್ಕೆ ಆರಂಭ
  • ಜುಲೈ 22ರಿಂದ ಸೆಪ್ಟೆಂಬರ್ 21ರ ಒಳಗೆ ಪ್ರಯಾಣ ಸಾಧ್ಯ
  • ವೆಬ್‌ಸೈಟ್, ಮೊಬೈಲ್ ಆಪ್‌ ಮೂಲಕ ಬುಕಿಂಗ್ ಅವಕಾಶ

ಪ್ರತಿಯೊಬ್ಬರಿಗೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಇರುತ್ತದೆ. ಆದರೆ ಹೆಚ್ಚಿನ ಟಿಕೆಟ್ ದರಗಳು ಆ ಕನಸು ನೆರವೇರಿಸದಂತಾಗುತ್ತವೆ. ಅಂಥವರಿಗಾಗಿ ಇಂಡಿಗೋ (IndiGo) ಸಂಸ್ಥೆ ಹೊಸತೊಂದು ಬಂಪರ್ ಆಫರ್ ತಂದಿದೆ.

ಮಾನ್ಸೂನ್ ಸೀಸನ್‌ ಭಾಗವಾಗಿ, ಸಂಸ್ಥೆ ‘IndiGo Monsoon Sale’ ಅನ್ನು ಘೋಷಿಸಿದ್ದು, ಈ ಸೇಲ್‌ನಲ್ಲಿ ಟಿಕೆಟ್‌ (Flight Tickets) ದರಗಳು ನಿಜಕ್ಕೂ ಆಕರ್ಷಕವಾಗಿವೆ.

ದೇಶೀಯ ವಿಮಾನ ಪ್ರಯಾಣಕ್ಕಾಗಿ ಟಿಕೆಟ್ ಕೇವಲ ₹1,499ರಿಂದ ಆರಂಭವಾಗುತ್ತಿದ್ದು, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಟಿಕೆಟ್‌ ದರ ₹4,399ರಿಂದ ಆರಂಭವಾಗುತ್ತದೆ. ಈ ಮೂಲಕ ಕನಿಷ್ಠ ಬಸ್‌ ಚಾರ್ಜ್ ದರದಲ್ಲೇ ಹಾರಾಟ ಮಾಡಬಹುದಾದ ಅವಕಾಶವನ್ನು ಇಂಡಿಗೋ ನೀಡುತ್ತಿದೆ. ಮಾನ್‌ಸೂನ್ ಆಫರ್ ಮೂಲಕ ಹೆಚ್ಚು ಪ್ರಯಾಣಿಕರನ್ನು ಸೆಳೆಯುವುದು ಸಂಸ್ಥೆಯ ಉದ್ದೇಶ.

ಇದನ್ನೂ ಓದಿ: ರೈತರಿಗೆ 5 ಲಕ್ಷ ಕೃಷಿ ಸಾಲ, ಯಾವುದೇ ಅಡಮಾನ ಬೇಕಿಲ್ಲ! ಮೋದಿಜಿ ಸಿಹಿಸುದ್ದಿ

ಜುಲೈ 15ರಿಂದ 18ರವರೆಗೆ ಈ ಸೇಲ್ ಲಭ್ಯವಿದ್ದು, ಈ ಅವಧಿಯಲ್ಲಿ ಬುಕ್ ಮಾಡಲಾದ ಟಿಕೆಟ್‌ಗಳ (Flight Ticket Booking) ಮೂಲಕ ಜುಲೈ 22ರಿಂದ ಸೆಪ್ಟೆಂಬರ್ 21ರ ವರೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಮಾಡಲು ಅವಕಾಶವಿದೆ.

ಇಷ್ಟೇ ಅಲ್ಲದೆ, ಈ ಬಂಪರ್ ಡೀಲ್‌ನೊಂದಿಗೆ ಇತರ ಆಫರ್‌ಗಳೂ ಲಭ್ಯವಿದ್ದು, ಪ್ಯಾಸೆಂಜರ್‌ಗಳಿಗೆ ಹೆಚ್ಚು ಅನುಕೂಲವನ್ನೇ ನೀಡಲಿದೆ.

Indigo flight

ಪ್ರಯಾಣಿಕರಿಗೆ ಹೆಚ್ಚುವರಿ ಲೆಗ್ ರೂಮ್ (extra legroom) ಬೇಕಾದರೆ ‘IndiGo Stretch’ ಸೇವೆಯನ್ನು ₹9,999 ರಿಂದ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಅಲ್ಲದೇ ಡೊಮೆಸ್ಟಿಕ್ ಮತ್ತು ಇಂಟರ್‌ನ್ಯಾಷನಲ್ ಸೆಗ್ಮೆಂಟ್‌ನಲ್ಲಿ 50% ರಿಯಾಯಿತಿ ಬೆಲೆಯಲ್ಲಿ ಎಕ್ಸ್‌ಟ್ರಾ ಲಗೇಜ್ ಸೇವೆ ಕೂಡ ಲಭ್ಯ.

ಇಂಡಿಗೋ ತನ್ನ ಅಧಿಕೃತ ವೆಬ್‌ಸೈಟ್ (website), ಮೊಬೈಲ್ ಆಪ್ (mobile app), ಹಾಗೂ ಟಿಕೆಟ್ ಕೌಂಟರ್‌ಗಳ ಮೂಲಕ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಕೆಲವೊಂದು ಮಾರ್ಗಗಳಲ್ಲಿ 6E ಸೀಟ್‌ಗಳಿಗೆ ಮತ್ತು 6E ಪ್ರೈಮ್ ಸೇವೆಗಳಿಗೆ 30%ರಷ್ಟು ರಿಯಾಯಿತಿ ಕೂಡ ಲಭ್ಯವಿದೆ.

ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್, ಕೋಟಕ್‌ ಬ್ಯಾಂಕ್ ಸೇವೆಗಳು ಸ್ಥಗಿತ, ಗ್ರಾಹಕರಿಗೆ ಬಿಗ್ ಅಲರ್ಟ್

ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಕಡಿಮೆ ಬಜೆಟ್‌ನಲ್ಲಿ ವಿಮಾನಯಾನ ಅನುಭವಿಸಬಹುದಾದ ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ಇಂಡಿಗೋ ಗ್ರಾಹಕರಿಗೆ ಮನವಿ ಮಾಡಿದೆ. ಇಂತಹ ಆಫರ್‌ಗಳು ಸಣ್ಣ ಕುಟುಂಬಗಳಿಗೆ ಹಾಗೂ ವ್ಯವಹಾರ ಪ್ರಯಾಣಿಕರಿಗೆ ನೆರವಾಗಲಿವೆ.

IndiGo Monsoon Sale, Flight Tickets from Just 1,499

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories