ಆಧಾರ್, ಪ್ಯಾನ್ ಕಾರ್ಡ್ ಇದ್ರೆ ನಿಮಿಷಗಳಲ್ಲೇ ಲೋನ್ ಸಿಗುತ್ತೆ! ಮೊಬೈಲ್‌ನಲ್ಲೇ - Personal Loan
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ನಿಂದ ಈಗ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯಬಹುದು. ಡಿಜಿಟಲ್ ಪ್ರಕ್ರಿಯೆ, ಕಡಿಮೆ ದಾಖಲೆ, ವೇಗದ ಮಂಜೂರು – ತುರ್ತು ಹಣಕಾಸಿಗೆ ಸುಲಭ ಪರಿಹಾರ.
- ಆಧಾರ್, ಪ್ಯಾನ್ ಮೂಲಕ ತಕ್ಷಣದ ವೈಯಕ್ತಿಕ ಸಾಲ
- ಕಡಿಮೆ ದಾಖಲೆ, ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ
- ತುರ್ತು ಹಣಕಾಸಿಗೆ ವೇಗದ ಮಂಜೂರು
Personal Loan : ಇದೀಗ ಬ್ಯಾಂಕ್ ಮುಂದೆ ಸಾಲಕ್ಕಾಗಿ ದಿನಗಟ್ಟಲೆ ಓಡಾಡುವ ದಿನಗಳು ಹಳೆಯ ಕಥೆ. ಕೇವಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇದ್ದರೆ ಸಾಕು – ಮೊಬೈಲ್‌ನಲ್ಲಿ ಕೆಲವೇ ಹಂತಗಳಲ್ಲಿ ಲೋನ್ ನಿಮ್ಮ ಖಾತೆಯಲ್ಲಿ ಇರುತ್ತೆ! (Instant Loan) ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅರ್ಜಿ ಸಲ್ಲಿಸಿದರೆ ಕೆಲವೊಮ್ಮೆ ಗಂಟೆಗಳಲ್ಲೇ ಹಣ ಜಮೆಯಾಗುತ್ತದೆ.
ಆಧಾರ್ ಕಾರ್ಡ್ ಮೂಲಕ e-KYC ತಕ್ಷಣ ಪೂರ್ಣಗೊಳ್ಳುತ್ತದೆ. OTP ಮೂಲಕ ನಿಮ್ಮ ಹೆಸರು, ವಿಳಾಸ ದೃಢೀಕರಣವಾಗುತ್ತದೆ. ಪ್ಯಾನ್ ಕಾರ್ಡ್ ಮೂಲಕ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಆರ್ಥಿಕ ಸ್ಥಿತಿ ಲೋನ್‌ದಾರರಿಗೆ ತಿಳಿಯುತ್ತದೆ.
ಇದನ್ನೂ ಓದಿ: 16 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಆಫರ್! ಡಿಸ್ಕೌಂಟ್ ಜೊತೆಗೆ ಕ್ಯಾಶ್‌ಬ್ಯಾಕ್
ಹೀಗಾಗಿ ಪರಿಶೀಲನೆ ವೇಗವಾಗಿ ನಡೆಯುತ್ತದೆ. ಕೆಲವೊಮ್ಮೆ ವೇತನ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಮಾತ್ರ ಬೇಕಾಗಬಹುದು, ಬೇರೇನು ದೊಡ್ಡ ದಾಖಲೆ ಬೇಡ.
ಈ ಸಾಲಕ್ಕೆ ಅರ್ಹರಾಗಲು ನೀವು ಭಾರತೀಯರಾಗಿರಬೇಕು, ವಯಸ್ಸು ಸಾಮಾನ್ಯವಾಗಿ 21ರಿಂದ 58 ವರ್ಷ ನಡುವೆ ಇರಬೇಕು. ತಿಂಗಳಿಗೆ ಕನಿಷ್ಠ ₹15,000-₹30,000 ಆದಾಯವಿದ್ದರೆ ಸಾಲ ಮಂಜೂರಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಕ್ರೆಡಿಟ್ ಸ್ಕೋರ್ (Credit Score) 700ಕ್ಕಿಂತ ಮೇಲಾಗಿದ್ದರೆ ಉತ್ತಮ, ಆದರೆ ಕೆಲವು ಡಿಜಿಟಲ್ ಲೋನ್ ಪ್ಲಾಟ್‌ಫಾರ್ಮ್‌ಗಳು (PhonePe, Google Pay ನಲ್ಲೂ ಸೌಲಭ್ಯವಿದೆ) ಕಡಿಮೆ ಸ್ಕೋರ್‌ನವರಿಗೂ ಅವಕಾಶ ಕೊಡುತ್ತವೆ.
ಇದನ್ನೂ ಓದಿ: 100 ಕಿ.ಮೀ ಮೈಲೇಜ್, ಬೆಲೆ ₹59 ಸಾವಿರಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ
ಅರ್ಜಿಯ ಪ್ರಕ್ರಿಯೆ ಸರಳ. ಲೋನ್‌ದಾರರ ವೆಬ್‌ಸೈಟ್ ಅಥವಾ ಆಪ್ ತೆರೆಯಿರಿ. ಹೆಸರು, ಮೊಬೈಲ್, ಇಮೇಲ್, ಆಧಾರ್, ಪಾನ್ ನಮೂದಿಸಿ. ಆಧಾರ್ OTP ಮೂಲಕ e-KYC ಮಾಡಿ. ಪಾನ್ ವಿವರಗಳನ್ನು ನೀಡಿದ ನಂತರ, ಎಷ್ಟು ಲೋನ್‌ಗೆ ಅರ್ಹರಾಗಿದ್ದೀರಿ ಎಂದು ಸಿಸ್ಟಮ್ ತೋರಿಸುತ್ತದೆ.
ಮೊತ್ತ ಮತ್ತು ಅವಧಿ ಆಯ್ಕೆಮಾಡಿ, ಷರತ್ತುಗಳನ್ನು ಡಿಜಿಟಲ್‌ನಲ್ಲಿ ಒಪ್ಪಿ. ಕೆಲವೇ ಗಂಟೆಗಳಲ್ಲಿ ಅಥವಾ 24 ಗಂಟೆಯೊಳಗೆ ಹಣ ಖಾತೆಗೆ ಬರುತ್ತದೆ. ತುರ್ತು ಅವಶ್ಯಕತೆಗಳಲ್ಲಿ, ಆಧಾರ್ ಮತ್ತು ಪಾನ್ ಕಾರ್ಡ್ ನಿಮ್ಮ ಆರ್ಥಿಕ ಜೀವ ರಕ್ಷಕವಾಗಬಹುದು. ಆದರೆ ತುರ್ತು ಸಂದರ್ಭ ಇರದ ಹೊರತು ಸಾಲಕ್ಕೆ ಮುಂದಾಗಬೇಡಿ, ಇದು ಎಂದಿದ್ದರೂ ಆರ್ಥಿಕ ಹೊರೆಯಾಗಬಹುದು.
Instant Loan with Aadhaar and PAN, No Hassle



