ತಿಂಗಳಿಗೆ ಬಡ್ಡಿನೇ 20 ಸಾವಿರ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ
ಪೋಸ್ಟ್ ಆಫೀಸ್ ಸ್ಕೀಮ್ ನ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಹೆಚ್ಚಿನ ಬಡ್ಡಿಯನ್ನು ನೀಡುವಂತಹ ಹಾಗೂ ಅತ್ಯಂತ ಸುರಕ್ಷಿತ ಯೋಜನೆಯಾಗಿದೆ.
- ಹಿರಿಯ ನಾಗರಿಕರಿಗೆ ಬೆಸ್ಟ್ ಹೂಡಿಕೆಯ ಯೋಜನೆ
- ಪೋಸ್ಟ್ ಆಫೀಸ್ ನೀಡ್ತಾ ಇದೆ ಹಿರಿಯ ನಾಗರಿಕರಿಗೆ ತಿಂಗಳಿಗೆ 20,500 ರೂಪಾಯಿ ಬಡ್ಡಿ
- ಈ ಯೋಜನೆಯಷ್ಟು ಹೆಚ್ಚಿನ ಬಡ್ಡಿ ಎಲ್ಲೂ ಸಿಗೋದಿಲ್ಲ
Post Office Scheme : ಭಾರತದಲ್ಲಿ ಒಳ್ಳೆ ರಿಟರ್ನ್ ಸಿಗಬೇಕು ಅಂತ ಅಂದ್ರೆ ನಿಮಗೆ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ಗಿಂತ ಒಳ್ಳೆ ಜಾಗ ಬೇರೆ ಇಲ್ಲ. ಅದರಲ್ಲೂ ಸ್ಪೆಷಲ್ ಆಗಿ ನಿವೃತ್ತಿ ಹೊಂದಿದ ನಂತರ ಹಿರಿಯ ನಾಗರಿಕರಿಗೆ ಮಾಸಿಕ ಆದಾಯ (Monthly Income) ಬರೋದಿಲ್ಲ.
ಹೀಗಾಗಿ ಅಂಥವರಿಗೆ ಪೋಸ್ಟ್ ಆಫೀಸ್ನ ಈ ವಿಶೇಷ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಬಡ್ಡಿ ಲೆಕ್ಕದಲ್ಲೇ ನಿಮಗೆ ಕೈತುಂಬ ಆದಾಯ ಸಿಗುತ್ತೆ.
ಮದುವೆಯಾದ ಮೇಲೂ ಕೂಡ ಅಪ್ಪನ ಆಸ್ತಿಯಲ್ಲಿ ಮಗಳಿಗೆ ಪಾಲು ಸಿಗುತ್ತಾ?
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್
ಹಿರಿಯ ನಾಗರಿಕರಿಗೆ (Senior Citizen Scheme) ಅಂತಾನೆ ವಿಶೇಷವಾಗಿ ಡಿಸೈನ್ ಮಾಡಲಾಗಿರುವಂತಹ ಈ ಯೋಜನೆಯ ಮೆಚುರಿಟಿ ಸಮಯ ಐದು ವರ್ಷ ಆಗಿರುತ್ತೆ. ಹೂಡಿಕೆಯ ಮೇಲೆ 8.2% ಬಡ್ಡಿ ಸಿಗುತ್ತೆ. ತಿಂಗಳಿಗೆ 20,000 ರೂಪಾಯಿ ಬಡ್ಡಿಯನ್ನೇ ಪಡೆದುಕೊಳ್ಳುವಂತಹ ಅವಕಾಶವೂ ಇದೆ.
60 ವರ್ಷ ಮೇಲ್ಪಟ್ಟ ಗ್ರಾಹಕರು ಅಂದರೆ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, 15 ಲಕ್ಷ ರೂಪಾಯಿ ಇದ್ದಂತಹ ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ ಲಿಮಿಟ್ ಅನ್ನು 30 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.
30 ಲಕ್ಷ ರೂಪಾಯಿ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ನಿಮಗೆ ಬಡ್ಡಿ ರೂಪದಲ್ಲಿಯೇ 2.46 ಲಕ್ಷ ರೂಪಾಯಿಗಳ ಬಡ್ಡಿ ಸಿಗುತ್ತೆ ಅಂದ್ರೆ ಅದನ್ನ ತಿಂಗಳಿಗೆ ಕನ್ವರ್ಟ್ ಮಾಡಿದರೆ 20,500 ರೂಪಾಯಿ ಆಗುತ್ತೆ.
55 ರಿಂದ 60 ವರ್ಷದ ನಡುವಿನ ಸ್ವಯಂ ನಿವೃತ್ತಿಯನ್ನು ಹೊಂದಿರುವಂತಹ ಹಿರಿಯ ನಾಗರಿಕರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದಕ್ಕಾಗಿ ನೀವು ನಿಮ್ಮ ಹತ್ತಿರ ಇರುವಂತಹ ಅಂಚೆ ಕಚೇರಿಗೆ ಭೇಟಿ ನೀಡಬೇಕಾಗಿದೆ.
ತಿಂಗಳಿಗೆ ಒಂದರಿಂದ ಎರಡು ಲಕ್ಷ ಆದಾಯ, ಮನೆಯಲ್ಲಿಯೇ ಮಾಡಿ ಈ ಬಿಸಿನೆಸ್
ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಹೆಚ್ಚಿನ ಬಡ್ಡಿಯನ್ನು ನೀಡುವಂತಹ ಹಾಗೂ ಅತ್ಯಂತ ಸುರಕ್ಷಿತ ಯೋಜನೆಯಾಗಿದೆ. ಯಾವುದೇ ಅಧಿಕೃತ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ನೀವು ಖಾತೆಯನ್ನು ತೆರೆಯುವ ಮೂಲಕ ಹೂಡಿಕೆಯನ್ನು ಪ್ರಾರಂಭ ಮಾಡಬಹುದು.
ಐದು ವರ್ಷಗಳಿಗೆ ಇರುವಂತಹ ಮೆಚುರಿಟಿ ಅವಧಿಯನ್ನು ಐದು ವರ್ಷಗಳ ನಂತರ ಮತ್ತೆ ಹೆಚ್ಚುವರಿ 3 ವರ್ಷಗಳಿಗೆ ವಿಸ್ತರಿಸಬಹುದಾಗಿದೆ. ಮೂರು ತಿಂಗಳಿಗೊಮ್ಮೆ ನಿಮಗೆ 61,500 ಬಡ್ಡಿ ಸಿಗುತ್ತೆ ಅಂದ್ರೆ ಅದನ್ನು ತಿಂಗಳಿಗೆ ಹೋಲಿಸಿದಾಗ 20,500 ರೂಪಾಯಿ ಆಗುತ್ತೆ.
ಐದು ವರ್ಷಗಳ ನಂತರ ನಿಮ್ಮ ಅಸಲು ಹಣವನ್ನು ನೀವು ತೆಗೆದುಕೊಳ್ಳಬಹುದಾಗಿದ್ದು ಅಷ್ಟರ ಒಳಗೆ ನೀವು ಕೇವಲ ಬಡ್ಡಿಯ ರೂಪದಲ್ಲಿ ಹೆಚ್ಚುವರಿ 12.30 ರೂಪಾಯಿಗಳನ್ನು ಸಂಪಾದನೆ ಮಾಡಿರುತ್ತೀರಿ. ಖಂಡಿತವಾಗಿ ಇದೊಂದು ಉತ್ತಮ ರಿಟೈರ್ಮೆಂಟ್ ಪ್ಲಾನ್ ಆಗಿದೆ.
Invest in This Post Office Scheme to Earn 20,000 Interest Every Month