ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಈ ರೀತಿ ಚೆಕ್ ಮಾಡಿಕೊಳ್ಳಿ
ಬ್ಯಾಂಕು ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಅಂತ ತಿಳಿದುಕೊಳ್ಳಬೇಕಾ ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್!
ನಿಮಗೆಲ್ಲಾ ಗೊತ್ತಿರುವ ಹಾಗೆ ಇವತ್ತಿನ ಗ್ಯಾರಂಟಿ ಯೋಜನೆ (guarantee schemes) ಗಳ ಲಾಭ ಪಡೆದುಕೊಳ್ಳಲು ಬ್ಯಾಂಕ್ ಖಾತೆಯನ್ನು (Bank Account) ಹೊಂದಿರುವುದು, ಹಾಗೂ ಆ ಖಾತೆ ಅಪ್ಡೇಟ್ ಆಗಿರುವುದು (bank account update) ಬಹಳ ಮುಖ್ಯ
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇದ್ದರೆ ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ DBT ಹಣ ನಿಮ್ಮ ಖಾತೆಯನ್ನು ತಲುಪುವುದಿಲ್ಲ. ಅದರಲ್ಲೂ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುವವರು ಆಧಾರ್ ಕಾರ್ಡ್ ಲಿಂಕ್ ಮಾಡಿ (Aadhaar Card link) ಕೊಳ್ಳುವುದು ಬಹಳ ಮುಖ್ಯ. ಇದರಿಂದ ನಿಮ್ಮ ಖಾತೆಯಲ್ಲಿ ಆಗುವ ವಂಚನೆಯನ್ನು ಕೂಡ ತಡೆಗಟ್ಟಬಹುದು.
₹48,000 ಕ್ಕಿಂತಲೂ ಕಡಿಮೆ ಬೆಲೆಗೆ ಮನೆಗೆ ತನ್ನಿ ರಾಯಲ್ ಎನ್ಫಿಲ್ಡ್ ಬುಲೆಟ್ ಬೈಕ್!
ರಾಜ್ಯ ಸರ್ಕಾರ ಈಗಾಗಲೇ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಪ್ರತಿ ಕೆಜಿಯ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಫಲಾನುಭವಿ ಜನರ ಖಾತೆಗೆ ವರ್ಗಾವಣೆ ಮಾಡುತ್ತಿದೆ.
ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಮಹಿಳೆಯರ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಿದೆ. ಅಷ್ಟೇ ಅಲ್ಲದೆ ಪಿಂಚಣಿ (pension) ಪಡೆದುಕೊಳ್ಳುವುದಕ್ಕೆ ಅಥವಾ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಬೆಳೆ ಪರಿಹಾರ ಪಡೆದುಕೊಳ್ಳುವುದಕ್ಕೆ ಪ್ರತಿಯೊಂದು ಹಣಕಾಸಿನ ವ್ಯವಹಾರಕ್ಕು ನಿಮ್ಮ ಬ್ಯಾಂಕ್ ಖಾತೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಅದನ್ನು ಆಧಾರ್ ಕಾರ್ಡ್ ನೊಂದಿಗೆ ಅಪ್ಡೇಟ್ ಮಾಡಿ ಇರಿಸಿಕೊಳ್ಳುವುದು ಬಹಳ ಮುಖ್ಯ.
2016ರ ಇಸವಿಯ ನಂತರ ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ಅಪ್ಡೇಟ್!
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಈ ರೀತಿ ಚೆಕ್ ಮಾಡಿ?
* uidai.gov.in ಈ ವೆಬ್ಸೈಟ್ಗೆ ಹೋಗಿ.
* ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ
* ನಂತರ ಚೆಕ್ ಆಧಾರ್ ಬ್ಯಾಂಕ್ ಸೀಡಿಂಗ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಯಾವುದೇ ಜಮೀನು ಖರೀದಿಗೂ ಮುನ್ನ ಈ ದಾಖಲೆ ಕಡ್ಡಾಯ! ಬಂತು ಹೊಸ ರೂಲ್ಸ್
* ಈಗ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
* ಬಳಿಕ ನಿಮ್ಮ ಮೊಬೈಲ್ಗೆ ಬರುವ ಓಟಿಪಿಯನ್ನು ಹಾಕಿ
* ಈ ರೀತಿ ಮಾಡಿದರೆ ನಿಮ್ಮ ಬ್ಯಾಂಕಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಲಭ್ಯವಾಗುತ್ತದೆ.
Is Aadhaar card linked to your bank account, Check like this