2016ರ ಇಸವಿಯ ನಂತರ ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ಅಪ್ಡೇಟ್!
ಆಧಾರ್ ಕಾರ್ಡ್ (Aadhaar Card) ಇಲ್ಲದೆ ನಾವು ನಮ್ಮನ್ನ ಎಲ್ಲಿಯೂ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ, ಅಷ್ಟು ಪ್ರಮುಖವಾಗಿರುವ ದಾಖಲೆ ಆಧಾರ್ ಕಾರ್ಡ್. ಆದರೆ ಈ ಆಧಾರ ಕಾರ್ಡ್ ವಿತರಣೆ ಮಾಡಿದ ನಂತರ ಭಾರತೀಯ ವಿಶಿಷ್ಟ ಗುರುತಿನ ಅಧಿಕಾರ ಯುಐಡಿಎಐ ಅದಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಪ್ರಮುಖ ನಿಯಮ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ.
ಇದೀಗ ಆಧಾರ್ ಕಾರ್ಡನ್ನು ಹೊಂದಿರುವವರಿಗೆ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದನ್ನು ಪಾಲನೆ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ನಿಷ್ಪ್ರಯೋಜಕ ಆಗಬಹುದು, ಯಾವ ಕೆಲಸಕ್ಕೂ ನಿಮ್ಮ ಆಧಾರ್ ಕಾರ್ಡ್ ಪ್ರಯೋಜನಕ್ಕೆ ಬಾರದೆ ಇರಬಹುದು.
ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ
ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದ್ದೀರಾ?
ಹೌದು, ಸಾಕಷ್ಟು ಜನ ಆಧಾರ್ ಕಾರ್ಡ್ ಆರಂಭವಾದ ಸಮಯದಲ್ಲಿ ಪಡೆದುಕೊಂಡಿರುವ ಕಾರ್ಡ್ ಈಗಲೂ ಬಳಕೆ ಮಾಡುತ್ತಾರೆ, ಅಂದರೆ 2013ರ ನಂತರ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ 10 ವರ್ಷ ಕಳೆದಿರುತ್ತದೆ. ಅದರಿಂದ ಅದನ್ನು ಅಪ್ಡೇಟ್ ಮಾಡಿ ಕೊಳ್ಳುವುದು ಬಹಳ ಮುಖ್ಯ.
ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ ಮೊದಲಾದವುಗಳ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಹೆಸರು ಹಾಗೂ ಮತ್ತಿತರ ವಿವರಗಳನ್ನು ನೀವು ಒಂದು ಅಥವಾ ಎರಡು ಬಾರಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ
ಆದರೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಅಡ್ರೆಸ್ ಬದಲಾವಣೆಗೆ ಮಿತಿ ಇಲ್ಲ. ನೀವು ಬೇರೆ ಬೇರೆ ಸ್ಥಳಕ್ಕೆ ಹೋಗಿ ವಾಸಿಸಲು ಆರಂಭಿಸಿದರೆ, ಅಡ್ರೆಸ್ ಬದಲಾಗುತ್ತದೆ ಹಾಗಾಗಿ ಆ ಅಡ್ರೆಸ್ ಅಥವಾ ವಿಳಾಸವನ್ನು ನೀವು ಆಧಾರ್ ಕಾರ್ಡ್ ನಲ್ಲಿ ಆಗಾಗ ಅಪ್ಡೇಟ್ ಮಾಡಿಕೊಳ್ಳಬಹುದು.
ಕೇವಲ 15 ಸಾವಿರ ಬಂಡವಾಳ ಹಾಕಿ ಸಾಕು, ಪ್ರತಿ ತಿಂಗಳು 50,000 ಆದಾಯ ಗ್ಯಾರಂಟಿ
ಆಧಾರ್ ಕಾರ್ಡ್ ಅಪ್ಡೇಟ್ ಗೆ ಲಾಸ್ಟ್ ಡೇಟ್ ಫಿಕ್ಸ್!
ಆಧಾರ್ ಕಾರ್ಡ್ ಅಪ್ಡೇಟ್ ಅಥವಾ ನವೀಕರಣ ಮಾಡಿಕೊಳ್ಳುವುದಕ್ಕೆ ಮಾರ್ಚ್ 14, 2024 ಕೊನೆಯ ದಿನಾಂಕ ಎಂದು ಘೋಷಣೆ ಮಾಡಲಾಗಿತ್ತು. ಇನ್ನು ಆಧಾರ್ ಕಾರ್ಡ್ ಅಪ್ಡೇಟ್ ಉಚಿತವಾಗಿದ್ದು ನೀವು ನಿಗದಿತ ಅವಧಿಯ ನಂತರ ಅಪ್ಡೇಟ್ ಮಾಡಿಕೊಂಡರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ
ಇದೀಗ ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ಜೂನ್ 14 2024 ವರೆಗೆ ಅವಕಾಶವಿದೆ. ಒಂದು ವೇಳೆ ಇದಕ್ಕಿಂತ ಮೊದಲು ಅಪ್ಡೇಟ್ ಮಾಡಿಕೊಳ್ಳದಿದ್ದರೆ, ಹೆಚ್ಚು ಶುಲ್ಕ ಪಾವತಿಸಬೇಕು. ಹಾಗೂ ಆನ್ಲೈನ್ ನಲ್ಲಿ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಈಗ ಕೇವಲ ರೂ.50ಗಳನ್ನ ಪಾವತಿ ಮಾಡಿ ಯಾವುದೇ ಸೈಬರ್ ಕೇಂದ್ರದಲ್ಲಿ ಅಥವಾ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ಆಧಾರ್ ಕಾರ್ಡ್ ಫೋಟೋ ಬದಲಾವಣೆ!
ಬಹಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ, ಅದರಲ್ಲಿ ಇರುವ ಫೋಟೋವನ್ನು ಕೂಡ ನೀವು ಬದಲಾಯಿಸಿಕೊಳ್ಳಲು ಅವಕಾಶ ಇದೆ. ಆದರೆ ಇದನ್ನು ನೀವು ಆನ್ಲೈನ್ ನಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ ಬಯೋಮೆಟ್ರಿಕ್ ಆಧಾರಿತ ಅಪ್ಡೇಟ್ ಇದಾಗಿದ್ದು, ನೀವು ಆಧಾರ್ ಕೇಂದ್ರಕ್ಕೆ ಹೋಗಿ ಫೋಟೋ ಬದಲಾಯಿಸಿಕೊಂಡು ಬರಬಹುದು.
ಬಡವರಿಗೆ ಸ್ವಂತ ಮನೆ ಯೋಜನೆ! ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಆಧಾರ್ ಕಾರ್ಡ್ ಆನ್ಲೈನ್ ಮೂಲಕ ನವೀಕರಿಸಿಕೊಳ್ಳುವುದು ಹೇಗೆ?
* ಮೊದಲನೇದಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವುದಕ್ಕೆ https://myaadhaar.uidai.gov.in/ ಈ ವೆಬ್ ಸೈಟ್‌ಗೆ ಹೋಗಿ ಲಾಗಿನ್ ಆಗಿ.
* ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಓಟಿಪಿಯನ್ನು ನಮೂದಿಸಬೇಕು ನಂತರ ಪಾಸ್ವರ್ಡ್ ಮಾಡಿದ್ರೆ ಮೈ ಆಧಾರ್ ಎನ್ನುವ ಆಯ್ಕೆ ಕಾಣಿಸುತ್ತದೆ.
* ಈಗ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂತೆ ಯಾವ ಬದಲಾವಣೆ ಮಾಡಿಕೊಳ್ಳಬೇಕು. ಎನ್ನುವುದನ್ನು ಆಯ್ಕೆ ಮಾಡಿ.
* ಅಗತ್ಯ ಇರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ನೀವು ಮಾಡಿದ ಬದಲಾವಣೆಗೆ ಸಂಬಂಧಪಟ್ಟ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಬೇಕಾಗುತ್ತದೆ.
* ಈ ಪ್ರಕ್ರಿಯೆ ಮುಗಿದ ನಂತರ ನಿಮಗೆ 14 ಸಂಖ್ಯೆಯ URN ಕೊಡಲಾಗುತ್ತಿದೆ.
* ಇದರಿಂದ ನೀವು ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆಯೋ ಇಲ್ಲವೋ ಎಂದು ಟ್ರ್ಯಾಕ್ ಮಾಡಬಹುದು.
ಈ ರೀತಿ ಸುಲಭವಾಗಿ ಮನೆಯಲ್ಲಿ ಕುಳಿತು ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡಿಕೊಳ್ಳಬಹುದು. ಜೂನ್ ಒಳಗೆ ಈ ಕೆಲಸ ಮಾಡಿ.
New update for all those who have done Aadhaar card after 2016