ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ
ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ
ಅದರಲ್ಲೂ ಇತ್ತೀಚಿನ ಕೆಲವು ನಿಶ್ಚಿತ ಠೇವಣಿ (fixed deposit) ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರ ನೀಡಲಾಗುತ್ತಿದೆ. ನೀವು ಎಫ್ ಡಿ (FD Scheme) ಇಟ್ಟರೆ ಹೆಚ್ಚಿನ ರಿಟರ್ನ್ ಪಡೆದುಕೊಳ್ಳಬಹುದು.
ಕೇವಲ 15 ಸಾವಿರ ಬಂಡವಾಳ ಹಾಕಿ ಸಾಕು, ಪ್ರತಿ ತಿಂಗಳು 50,000 ಆದಾಯ ಗ್ಯಾರಂಟಿ
ಎಸ್ ಬಿ ಐ ಸರ್ವೋತ್ತಮ ಎಫ್ ಡಿ ಸ್ಕೀಮ್! (SBI sarvottam FD scheme)
ಎಸ್ ಬಿ ಐ ಪರಿಚಯಿಸಿರುವ ಸರ್ವೋತ್ತಮ ಫಿಕ್ಸೆಡ್ ಡೆಪಾಸಿಟ್ ನಲ್ಲಿ (Fixed Deposit) ಹೂಡಿಕೆ ಮಾಡಿ ಅತ್ಯುತ್ತಮ ಲಾಭ ಗಳಿಸಿಕೊಳ್ಳಬಹುದು. ಇದು ಅಲ್ಪಾವಧಿಯ ಡಿಪಾಸಿಟ್ ಯೋಜನೆಯಾಗಿದ್ದು ಒಂದು ಅಥವಾ ಎರಡು ವರ್ಷಗಳ ಅವಧಿಗೆ ಡೆಪಾಸಿಟ್ ಇಡಬಹುದು.
ಎಷ್ಟು ಸಿಗುತ್ತೆ ಬಡ್ಡಿದರ! (Rate of interest)
ಎರಡು ವರ್ಷಗಳ ಅವಧಿಗೆ ಸಾಮಾನ್ಯರು ಹೂಡಿಕೆ ಮಾಡಿದರೆ 7.4% ಬಡ್ಡಿದರ ಅದೇ ಹಿರಿಯ ನಾಗರಿಕರು ಹೂಡಿಕೆ ಮಾಡಿದರೆ 7.9% ಬಡ್ಡಿ ದರ ಪಡೆಯಬಹುದು. ಇನ್ನು ಒಂದು ವರ್ಷದ ಠೇವಣಿಗೆ ಸಾಮಾನ್ಯರಿಗೆ 7.10% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ 7.60% ಬಡ್ಡಿ ಒದಗಿಸಲಾಗುವುದು.
ಪೋಸ್ಟ್ ಆಫೀಸ್ ನಲ್ಲಿ 60 ಸಾವಿರ ಇಟ್ಟರೆ 5 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
ಇದು ಏಕಕಾಲದ ಠೇವಣಿಯಾಗಿದ್ದು ಕನಿಷ್ಠ 15 ಲಕ್ಷ ರೂಪಾಯಿಯಿಂದ ಗರಿಷ್ಠ ಎರಡು ಕೋಟಿ ರೂಪಾಯಿಗಳ ವರೆಗೆ ಡೆಪಾಸಿಟ್ ಇಡಬಹುದು. ಎಸ್ ಬಿ ಐ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ಮಾತ್ರವಲ್ಲದೆ ಚಕ್ರ ಬಡ್ಡಿಯನ್ನು ಕೂಡ ಲೆಕ್ಕ ಹಾಕಿ, ಆದಾಯ ನೀಡಲಾಗುತ್ತದೆ
ಸಾಮಾನ್ಯವಾಗಿ ಹಿರಿಯ ನಾಗರಿಕರು ನಿವೃತ್ತಿಯ ನಂತರ ತಮ್ಮ ಹಣವನ್ನು ಸರ್ವೋತ್ತಮ ಎಫ್ ಡಿ ಯಲ್ಲಿ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ರಿಟರ್ನ್ ಪಡೆದುಕೊಳ್ಳಲು ಸಾಧ್ಯವಿದೆ. ಯೋಜನೆಯಲ್ಲಿ ಚಕ್ರ ಬಡ್ಡಿ ಸೇರಿ ವಾರ್ಷಿಕವಾಗಿ 8.14% ವರೆಗೆ ಬಡ್ಡಿ ಸಿಗುತ್ತದೆ.
ಬಡವರಿಗೆ ಸ್ವಂತ ಮನೆ ಯೋಜನೆ! ವಸತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಒಟ್ಟಿನಲ್ಲಿ ನಿವೃತ್ತಿಯ ನಂತರ ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡಿ ಕೇವಲ ಎರಡು ವರ್ಷಗಳಲ್ಲಿ ಹೆಚ್ಚಿನ ಲಾಭ ಗಳಿಸಲು ಈ ಯೋಜನೆ ಸೂಕ್ತವಾಗಿದೆ ಹೆಚ್ಚಿನ ಮಾಹಿತಿಗಾಗಿ SBI BANK ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.
Bumper Offer for State Bank Account Holders, New Scheme with with higher interest