ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕ ಬದಲಿಸಲು ಸಾಧ್ಯವೇ? ನಿಯಮಗಳೇನು ಗೊತ್ತಾ?

How To Update Date Of Birth Aadhaar Card : ಆಧಾರ್ ಕಾರ್ಡ್ ಕರೆಕ್ಷನ್ ಬಗ್ಗೆ ಮಹತ್ವದ ಆದೇಶ; ಒಂದಕ್ಕಿಂತ ಹೆಚ್ಚು ಬಾರಿ ಜನ್ಮ ದಿನಾಂಕ ಬದಲಾಯಿಸಿದರೆ ಏನಾಗುತ್ತೆ ಗೊತ್ತಾ?

How To Update Date Of Birth Aadhaar Card : ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದು ಎಂದಾಗಿದ್ದರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಒಂದು ವೇಳೆ ಮಾಡಿಕೊಳ್ಳದೆ ಇದ್ದಲ್ಲಿ ಅಂತವರ ಆಧಾರ್ ಕಾರ್ಡ್ (Aadhaar Card) ಯಾವ ಪ್ರಯೋಜನಕ್ಕೂ ಬರುವುದಿಲ್ಲ ಜೊತೆಗೆ ಸರ್ಕಾರದ ಯೋಜನೆಗಳು ಕೂಡ ಸಿಗುವುದಿಲ್ಲ ಎಂದು ತಿಳಿಸಲಾಗಿದೆ.

ವೈಯಕ್ತಿಕ ದಾಖಲೆಗಳನ್ನು ಆಧಾರ್ ಕಾರ್ಡ್ (personal information in Aadhar card) ಹೊಂದಿರುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಹೀಗೆ ಮೊದಲಾದ ವಿವರಗಳನ್ನು ಆಧಾರ್ ಕಾರ್ಡ್ ನಲ್ಲಿ ನಮೂದಿಸಿರಲಾಗುತ್ತದೆ

ಆಧಾರ್ ಕಾರ್ಡ್​ನಲ್ಲಿ ಜನ್ಮದಿನಾಂಕ ಬದಲಿಸಲು ಸಾಧ್ಯವೇ? ನಿಯಮಗಳೇನು ಗೊತ್ತಾ? - Kannada News

ಕೇವಲ ₹7 ರೂಪಾಯಿ ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ

ಇದೇ ಕಾರಣಕ್ಕೆ ಆಧಾರ್ ಕಾರ್ಡ್ ಬಹಳ ಪ್ರಮುಖವಾಗಿರುವ ದಾಖಲೆ ಆಗಿದ್ದು ಈ ಕಾರ್ಡ್ ಅಪ್ಡೇಟ್ (Aadhaar Card update) ಆಗಿ ಇಟ್ಟುಕೊಳ್ಳುವುದು ಕೂಡ ಬಹಳ ಮುಖ್ಯ. ಡಿಸೆಂಬರ್ ತಿಂಗಳು ಮುಗಿಯುವುದರ ಒಳಗೆ ಹತ್ತು ವರ್ಷಕ್ಕಿಂತ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿರುವವರು ತಕ್ಷಣವೇ ತಿದ್ದುಪಡಿ ಮಾಡಿಕೊಳ್ಳಬೇಕು.

ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಜನ್ಮ, ದಿನಾಂಕ, ಲಿಂಗ ಫೋಟೋ ಈ ಎಲ್ಲಾ ಮಾಹಿತಿಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ, ಆನ್ಲೈನ್ ನಲ್ಲಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು. ಅಥವಾ ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸಿಕೊಳ್ಳಬಹುದು.

ಆಧಾರ್ ನಲ್ಲಿ ಜನ್ಮ ದಿನಾಂಕದ ಅಪ್ಡೇಟ್! (Birth date update in Aadhar card)

ಸಾಮಾನ್ಯವಾಗಿ ಹೆಸರಿನಲ್ಲಿ ಬದಲಾವಣೆ ಆಗಬಹುದು, ಅದರಲ್ಲೂ ಮದುವೆಯಾದ ಹೆಣ್ಣು ಬೇರೆ ಮನೆಗೆ ಹೋದ ನಂತರ ಗಂಡನ ಹೆಸರನ್ನು ತನ್ನ ಹೆಸರಿನ ಜೊತೆಗೆ ಸೇರಿಸಲು ಬಯಸುತ್ತಾಳೆ. ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಬೇಕು.

ಅದೇ ರೀತಿ ಒಬ್ಬ ವ್ಯಕ್ತಿ ಒಂದೇ ಸ್ಥಳದಲ್ಲಿ ವಾಸಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಆತ ಬೇರೆ ಸ್ಥಳಕ್ಕೆ ಹೋಗಿ ವಾಸಿಸಿದರೆ ಆಧಾರ್ ಕಾರ್ಡ್ ನಲ್ಲಿ ಹೊಸ ವಿಳಾಸದ ಅಪ್ಡೇಟ್ (address update) ಕೂಡ ಆಗಬೇಕು.

ಇನ್ನು ಆಧಾರ್ ಕಾರ್ಡ್ ಮಾಡಿಸುವಾಗ ಯಾವುದೋ ಗಡಿಬಿಡಿಯಲ್ಲಿ ನಿಮ್ಮ ಜನ್ಮ ದಿನಾಂಕವನ್ನೇ ನೀವು ತಪ್ಪಾಗಿ ಕೊಟ್ಟಿರಬಹುದು ಹೀಗೆನಾದ್ರು ಆಗಿದ್ರೆ ನೀವು ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿಕೊಳ್ಳಲು ಕೂಡ ಅವಕಾಶವಿದೆ

ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿ ಮಾಡಿಸಿಲ್ವಾ? ನಾಮಿನಿ ಇಲ್ಲದೆ ಇದ್ರೆ ಏನಾಗುತ್ತೆ ಗೊತ್ತಾ?

ಹಾಗಾದ್ರೆ ಜನ್ಮ ದಿನಾಂಕವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬೇಕು ಎಂದು ಪ್ರಶ್ನಿಸಿದರೆ ಕೇವಲ ಒಂದು ಬಾರಿ ಮಾತ್ರ ಜನ್ಮ ದಿನಾಂಕ ತಿದ್ದುಪಡಿಗೆ ಅವಕಾಶವಿದೆ. ಎರಡನೇ ಬಾರಿಯೂ ತಿದ್ದುಪಡಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದರೆ ಅದಕ್ಕೆ ವಿಶೇಷ ಪರವಾನಿಗೆ ಬೇಕಾಗುತ್ತದೆ

ನೀವು ಸೂಕ್ತವಾದ ಕಾರಣಗಳನ್ನು ತಿಳಿಸಿ ಆಧಾರ್ ಕೇಂದ್ರಗಳಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಶುಲ್ಕವನ್ನು ಕೂಡ ಪಾವತಿಸಬೇಕು ಎಂಬುದು ನೆನಪಿರಲಿ.

How To Update Date Of Birth Aadhaar Cardವಿಶೇಷ ಸಂದರ್ಭಗಳಲ್ಲಿ ಎಕ್ಸೆಪ್ಶನ್ ಪ್ರೋಸೆಸ್ (exception process) ಮೂಲಕ ಜನ್ಮ ದಿನಾಂಕವನ್ನು 2ನೇ ಬಾರಿ ಬದಲಾಯಿಸಲು ಅವಕಾಶವಿದೆ. ಕೆಲವು ಜನ್ಮ ದಿನಾಂಕದ ಪ್ರೂಫ್ ಇರುವ ಕೆಲವು ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ.

ಪಾಸ್ಪೋರ್ಟ್

ಸರ್ಕಾರಿ ಸೇವೆ ಸಲ್ಲಿಸಿದ್ದರೆ ಸರ್ವಿಸ್ ಫೋಟೋ

ಸರ್ಕಾರದಿಂದ ಸಿಕ್ಕ ಪಿಂಚಣಿ ಅಥವಾ ಫ್ರೀಡಂ ಫೈಟರ್ ಫೋಟೋ ID

ಜನನ ಪ್ರಮಾಣ ಪತ್ರ

ಕಾಲೇಜಿನಲ್ಲಿ ಅಧ್ಯಯನ ಮಾಡಿರುವುದಕ್ಕೆ ಮಾನ್ಯ ವಿಶ್ವವಿದ್ಯಾನಿಲಯದಿಂದ ಸಿಕ್ಕ ಮಾರ್ಕ್ಸ್ ಕಾರ್ಡ್.

ಹೀಗೆ ಜನ್ಮ ದಿನಾಂಕ ತಪ್ಪಾಗಿರುವುದನ್ನು ಆಧಾರ್ ಸೇವಾ ಕೇಂದ್ರ ಇಲ್ಲವೇ ಆನ್ಲೈನ್ ಮೂಲಕವೂ ಬದಲಾವಣೆ ಮಾಡಬಹುದು.

ವಿವಿಧ ಬ್ಯಾಂಕ್‌ಗಳಲ್ಲಿ ಎಜುಕೇಶನ್ ಲೋನ್ ಮೇಲಿನ ಬಡ್ಡಿ ದರಗಳ ಸಂಪೂರ್ಣ ಮಾಹಿತಿ

ಜನ್ಮದಿನಾಂಕ ತಿದ್ದುಪಡಿ ಹೇಗೆ? (How to do birth date correction)

ಆಧಾರ್ ಕಾರ್ಡ್ನಲ್ಲಿ ಒಮ್ಮೆ ಮಾತ್ರ ಜನ್ಮದಿನಾಂಕ ಬದಲಿಸಲು ಅವಕಾಶ ಮಾಡಿಕೊಡಲಾಗಿದೆ. ಎರಡನೇ ಬಾರಿಯೂ ಮಾಡಿಸಬಹುದು. ಆದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ನಲ್ಲಿ ಎರಡನೇ ಬಾರಿ ಜನ್ಮದಿನಾಂಕ ಬದಲಾವಣೆ ಮಾಡಬೇಕು ಎಂದಾದರೆ ವಿಶೇಷ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ.

ಇದರ ಜೊತೆ ಸೂಕ್ತವಾದ ಸಾಕ್ಷ್ಯಗಳನ್ನು ನೀವು ಒದಗಿಸಬೇಕಾಗುತ್ತದೆ. ಇದರ ಜೊತೆ ಬಿಬಿಎಂಪಿ ಅಥವಾ ಜಿಲ್ಲಾ ಪ್ರಾಧಿಕಾರ ನೀಡಿದ ಜನನ ಪ್ರಮಾಣ ಪತ್ರ, ಮತ್ತು ಸೆಲ್ಫ್ ಡಿಕ್ಲರೇಶನ್ (self declaration) ನೀಡಬೇಕಾಗುತ್ತದೆ.

ಇದಾದ ಬಳಿಕ ಯುಐಡಿಎಐ (UIDAI) ವೆಬ್ಸೈಟ್ಗೆ ಭೇಟಿ ನೀಡಿ ಎಕ್ಷೆಪಕ್ಷನ್ ಪ್ರೊಸೆಸ್ಗೆ ಮನವಿ ಮಾಡಬೇಕು. ಇಲ್ಲಿ ನಿಮ್ಮಲ್ಲಿರುವ ದಾಖಲೆಗಳನ್ನು ಒದಗಿಸಬೇಕು. ನೀವು ಮನವಿ ಸಲ್ಲಿಸಿದ ಬಳಿಕ ಪ್ರಾಧಿಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ.

ಚಿನ್ನದ ಬೆಲೆ ಇಳಿಕೆ, ರಾತ್ರೋರಾತ್ರಿ ಚಿನ್ನಾಭರಣ ದರಗಳು ಕುಸಿತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನೀವು ಮೊದಲ ಬಾರಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಯಾವುದೇ ವಿಶೇಷ ಪ್ರಕ್ರಿಯೆ ಅಗತ್ಯ ಇರುವುದಿಲ್ಲ. ನೀವು ನೇರವಾಗಿ ಅಂಚೆ ಕಚೇರಿ ಇಲ್ಲವೇ ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ಬದಲಾವಣೆ ಮಾಡಿಸಿಕೊಳ್ಳಬಹುದು.

Is it possible to change date of birth in Aadhaar card, Do you know the rules

Follow us On

FaceBook Google News

Is it possible to change date of birth in Aadhaar card, Do you know the rules