ಭಾರತೀಯ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂತಾ 350 ರೂಪಾಯಿ ನೋಟು?
ಸೋಶಿಯಲ್ ಮೀಡಿಯಾ ಎಷ್ಟು ಪವರ್ಫುಲ್ ಅಂತ ಎಲ್ಲರಿಗೂ ಗೊತ್ತು. ನಾವು ಯಾವುದೇ ವಿಚಾರದ ಬಗ್ಗೆ ಸುಲಭವಾಗಿ ಸಾಮಾಜಿಕ ಜಾಲತಾಣದಿಂದಲೇ ತಿಳಿದುಕೊಳ್ಳಬಹುದು. ಆದರೆ ಇದರಿಂದ ಸಾಕಷ್ಟು ಸಮಸ್ಯೆಗಳು ಕೂಡ ಇವೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಬರುವ ಎಲ್ಲಾ ಸುದ್ದಿಗಳನ್ನು ನಂಬಲು ಸಾಧ್ಯವಿಲ್ಲ ಸಾಕಷ್ಟು ವಿಷಯಗಳು ಫೇಕ್ ಆಗಿರುತ್ತದೆ.
ಆದರೆ ಸಾಮಾನ್ಯ ಜನರಿಗೆ ಇದರ ಅರಿವಿಲ್ಲದೆ ಸುಳ್ಳು ಸುದ್ದಿಗಳನ್ನು ನಂಬುತ್ತಾರೆ. ಅದರಲ್ಲೂ ಇತ್ತೀಚಿಗೆ ಕ ರೆನ್ಸಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಆರ್‌ಬಿಐ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ.
ಭಾರತೀಯ ಮಾರುಕಟ್ಟೆಯಲ್ಲಿ 350 ರೂಪಾಯಿ ಕರೆನ್ಸಿ!
2016ರಲ್ಲಿ ನೋಟುಗಳ ಅಮಾನ್ಯೀಕರಣ ಮಾಡಿದ್ದು ಎಲ್ಲರಿಗೂ ನೆನಪಿರಬಹುದು. ಹಳೆಯ 500 ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ ಹೊಸದಾಗಿ 500 ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ನಂತರ 2000 ರೂಪಾಯಿಗಳನ್ನು ಹಾಗೂ 200 ರೂಪಾಯಿಗಳನ್ನು ಕೂಡ ಬಿಡುಗಡೆ ಮಾಡಲಾಯಿತು.
ದುಡ್ಡು ಸುಮ್ಮನೆ ಬರಲ್ಲ! ಆಸ್ತಿ, ಜಮೀನು ಖರೀದಿಸುವುದಕ್ಕೂ ಮೊದಲು ಈ ವಿಷಯ ತಿಳಿದಿರಲಿ
ಭಾರತೀಯ ರಿಸರ್ವ್ ಬ್ಯಾಂಕ್ ಗೆ ಮಾತ್ರ ಕರೆನ್ಸಿ ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡುವ ಅಥವಾ ಬ್ಯಾನ್ ಮಾಡುವ ಅಧಿಕಾರ ಇರುತ್ತದೆ. 2023ರಲ್ಲಿ ಆರ್ ಬಿ ಐ ಹೊಸದಾಗಿ ಪರಿಚಯಿಸಿದ 2,000 ರೂಪಾಯಿಗಳ ನೋಟುಗಳನ್ನು ಕೂಡ ಬ್ಯಾನ್ ಮಾಡಿದ್ದು. ಇದೀಗ ದೇಶದಲ್ಲಿ 500 ರೂಪಾಯಿಯ ನೋಟು ಮಾತ್ರ ಅತಿ ಹೆಚ್ಚು ಮೌಲ್ಯ ಹೊಂದಿರುವ ಮುಖಬೆಲೆಯ ಕರೆನ್ಸಿ ಆಗಿದೆ.
ಇತ್ತೀಚಿಗೆ ಆರ್ ಬಿ ಐ ಎರಡು ಮತ್ತು ಐದು ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಿದ್ದರು ಕೂಡ ಮಾರುಕಟ್ಟೆಯಲ್ಲಿ ಈ ನೋಟುಗಳ ಚಲಾವಣೆ ಇದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ 350 ರೂಪಾಯಿ ನೋಟಿನ ಫೋಟೋ ಹರಿದಾಡುತ್ತಿದೆ.
20 ವರ್ಷಕ್ಕೆ 45 ಲಕ್ಷ ಹೋಮ್ ಲೋನ್ ಪಡೆದರೆ ತಿಂಗಳಿಗೆ ಎಷ್ಟು EMI ಪಾವತಿಸಬೇಕು?
ಆರ್ ಬಿ ಐ ಹೊಸದಾಗಿ 350 ರೂಪಾಯಿ ನೋಟನ್ನು ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಆದರೆ ಇದು ಕೇವಲ ವದಂತಿ ಅಷ್ಟೇ. ಆರ್ ಬಿ ಐ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಸದ್ಯಕ್ಕೆ ಯಾವುದೇ ಹೊಸ ಮುಖಬೆಲೆಯ ಕರೆನ್ಸಿಯನ್ನು ಮುದ್ರಣ ಮಾಡಲಾಗುತ್ತಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಪಾರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಯಾರು ನಂಬಬಾರದು ಮತ್ತು ನಂಬಿ ಮೋಸ ಹೋಗಬಾರದು ಎಂದು ಆರ್ ಬಿ ಐ ಸ್ಪಷ್ಟನೆ ನೀಡಿದೆ.
Is the Rupees 350 note launched in the Indian market