Business News

ದುಡ್ಡು ಸುಮ್ಮನೆ ಬರಲ್ಲ! ಆಸ್ತಿ, ಜಮೀನು ಖರೀದಿಸುವುದಕ್ಕೂ ಮೊದಲು ಈ ವಿಷಯ ತಿಳಿದಿರಲಿ

Buy Property : ಸಾಕಷ್ಟು ಜನರಿಗೆ ತಮ್ಮ ಜೀವನದಲ್ಲಿ ಒಂದಾದರೂ ಸ್ವಂತ ಆಸ್ತಿಯನ್ನು ಮಾಡಬೇಕು ಎನ್ನುವ ಕನಸು ಇರುತ್ತದೆ. ನಮ್ಮದೇ ಆಗಿರುವ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಅಥವಾ ನಿವೇಶನ ಖರೀದಿ ಮಾಡಬೇಕು ಎಂದು ಬಯಸುತ್ತಾರೆ. ಸಾಕಷ್ಟು ಜನ ಹಣವನ್ನ ಕೂಡಿಟ್ಟು ನಿವೇಶನ ಖರೀದಿ ಮಾಡುತ್ತಾರೆ.

ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದೇ. ಯಾಕಂದ್ರೆ ರಿಯಲ್ ಎಸ್ಟೇಟ್ ನಲ್ಲಿ (Real Estate) ಹೂಡಿಕೆ ಮಾಡಿದರೆ, ನೀವು ತೆಗೆದುಕೊಂಡ ಜಾಗವನ್ನು ದುಪ್ಪಟ್ಟು ಹಣಕ್ಕೆ ಸೇಲ್ ಮಾಡಬಹುದು. ಅಥವಾ ನಿಮ್ಮ ಸ್ವಂತಕ್ಕೆ ಇಟ್ಟುಕೊಳ್ಳಬಹುದು. ಆದರೆ ಯಾವುದೇ ನಿವೇಶನ ಖರೀದಿ ಮಾಡುವಾಗ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು.

ದುಡ್ಡು ಸುಮ್ಮನೆ ಬರಲ್ಲ! ಆಸ್ತಿ, ಜಮೀನು ಖರೀದಿಸುವುದಕ್ಕೂ ಮೊದಲು ಈ ವಿಷಯ ತಿಳಿದಿರಲಿ

ಮೊದಲನೇದಾಗಿ ಭೂಮಿ ಖರೀದಿಸುವಾಗ ಅದರ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವುದು ಮುಖ್ಯ. ನೀವು ಕಷ್ಟಪಟ್ಟು ದುಡಿದ ಹಣವನ್ನು ನಿವೇಶನಕ್ಕಾಗಿ ಸುರಿಯುತ್ತೀರಿ ಅಂದಮೇಲೆ ಮೋಸ ಆಗದೆ ಇರುವ ರೀತಿಯಲ್ಲಿಯೂ ನೋಡಿಕೊಳ್ಳಬೇಕು.

ಕಾನೂನು ಬದ್ಧವಾಗಿ ನೀವು ತೆಗೆದುಕೊಂಡು ಭೂಮಿ (Land) ಎಷ್ಟು ಸುರಕ್ಷಿತವಾಗಿದೆ ಎಂಬುದನ್ನ ಮೊದಲು ತಿಳಿದುಕೊಳ್ಳಿ. ನೀವು ಖರೀದಿಸಲು ಹೊರಟಿರುವ ಭೂಮಿ ಯಾವುದಾದರೂ ವಿವಾದದಲ್ಲಿ ಇದೆಯೇ ಅಥವಾ ಭೂಮಿಯ ಮೇಲೆ ಸಾಲ ಮಾಡಲಾಗಿದೆ ಎಂಬುದನ್ನು ನೋಡಿಕೊಳ್ಳಿ.

ಇನ್ನು ಆಸ್ತಿ ತೆರಿಗೆ, ಮಾರಾಟ ಮಾಡುತ್ತಿರುವ ಬಗ್ಗೆ ದಾಖಲೆಯನ್ನು ಪಡೆದುಕೊಳ್ಳಬೇಕು. ನೀವು ಪ್ರೀತಿಸುವ ಜಮೀನಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅನುಮಾನವಿದ್ದಲ್ಲಿ ವಕೀಲರನ್ನು ಸಂಪರ್ಕಿಸಿ. ಅವರಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟು ಸರಿಯಾಗಿದೆ ಎಂಬುದನ್ನ ಪರಿಶೀಲಿಸಿ.

20 ವರ್ಷಕ್ಕೆ 45 ಲಕ್ಷ ಹೋಮ್ ಲೋನ್ ಪಡೆದರೆ ತಿಂಗಳಿಗೆ ಎಷ್ಟು EMI ಪಾವತಿಸಬೇಕು?

ಯಾವುದೇ ನಿವೇಶನ ಅಥವಾ ಭೂಮಿಯನ್ನು ಖರೀದಿ ಮಾಡಲು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತೀರಿ ಹಾಗಾಗಿ ನಂಬಿಕಸ್ಥ ವ್ಯಕ್ತಿಯ ಜೊತೆಗೆ ವ್ಯವಹಾರ ಮಾಡಿ. ಇತ್ತೀಚಿಗೆ ಜಾಗ ಮಾರಾಟ ಮಾಡುವ ವಿಷಯದಲ್ಲಿ ವಂಚನೆಗಳು ಹೆಚ್ಚಾಗುತ್ತಿದೆ, ಹೀಗಾಗಿ ಬಹಳ ಮುತುವರ್ಜಿಯಿಂದ ವ್ಯವಹಾರ ನಡೆಸಬೇಕು.

ಭೂ ಮಾಲೀಕರಿಂದ ಭೂಮಿ ಖರೀದಿ (Buy Property) ಮಾಡುವುದಕ್ಕೂ ಮೊದಲು ಅವರ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಭೂ ದಾಖಲೆ ವಿಳಾಸ ಪುರಾವೆ ಮೊದಲಾದವುಗಳನ್ನು ಚೆಕ್ ಮಾಡಬೇಕು. ಅವರ ಹತ್ತಿರದಲ್ಲಿ ವಾಸಿಸುವ ಇತರರನ್ನು ಕೇಳಿ ಅವರ ಬಗ್ಗೆ ತಿಳಿದುಕೊಳ್ಳಬೇಕು.

ಅದೇ ರೀತಿ ಸಬ್ ರಿಜಿಸ್ಟರ್ ಕಚೇರಿಗೆ ಹೋಗಿ ಯಾವ ಭೂಮಿಯನ್ನು ಖರೀದಿ ಮಾಡಲು ಬಯಸುತ್ತಿರೋ ಆ ಭೂಮಿಯ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ.

ಹೊಸ ಮನೆ, ಹಳೆಯ ಮನೆ ರಿಪೇರಿ ಹಾಗೂ ಮನೆ ವಿಸ್ತರಣೆಗೂ ಸಿಗುತ್ತೆ ಹೋಮ್ ಲೋನ್

ಈ ರೀತಿ ಮುಂದುವರಿಸಿ ಇಂದ ನೀವು ಖರೀದಿ ಮಾಡಲು ಬಯಸುವ ಭೂಮಿಯ ಬಗ್ಗೆ ತಿಳಿದುಕೊಂಡರೆ ನಿಮಗೆ ಯಾವುದೇ ರೀತಿಯ ವಂಚನೆ ಆಗುವುದಿಲ್ಲ. ಇಲ್ಲವಾದರೆ ಭೂಮಿ ಮತ್ತು ಕೊಟ್ಟ ಹಣ ಎರಡನ್ನು ಕಳೆದುಕೊಳ್ಳಬೇಕಾಗಬಹುದು ಕಾನೂನಾತ್ಮಕವಾಗಿ ನಿಮ್ಮ ಹೆಸರಿನಲ್ಲಿ ಭೂಮಿ ರಿಜಿಸ್ಟರ್ ಆದರೆ ಮತ್ತೆ ನಿಮಗೆ ಯಾರು ವಂಚನೆ ಮಾಡಲು ಸಾಧ್ಯವಿಲ್ಲ.

Know this before buying property or land

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories