PhonePe ಮತ್ತು Google Pay ಬಳಸುವವರ ಮೇಲೆ ಐಟಿ ಇಲಾಖೆ ನಿಗಾ! ಬಿಗ್ ಅಪ್ಡೇಟ್
ದೇಶದಲ್ಲಿ ಡಿಜಿಟಲ್ ಪಾವತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಯಾಂಕ್ ಗಳಿಗೆ (Banks) ಹೋಗದೆ ಸ್ಮಾರ್ಟ್ ಫೋನ್ ಮೂಲಕವೇ ಹಣ ಪಾವತಿ ಮಾಡುವವರ ಸಂಖ್ಯೆ ಹೆಚ್ಚಿದೆ.
ಹಿಂದೊಮ್ಮೆ ಬೇರೆಯವರ ಖಾತೆಗೆ ಹಣ ಹಾಕಬೇಕೆಂದರೆ ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಚೀಟಿ ತುಂಬಬೇಕಾಗಿತ್ತು, ಆದರೆ ಈಗ ಎಲ್ಲವೂ ಬದಲಾಗಿದೆ. ಸೆಕೆಂಡುಗಳಲ್ಲಿ ಹಣವನ್ನು ಕಳುಹಿಸುವ ದಿನಗಳು ಬಂದಿವೆ.
ಈಗ ಹೆಚ್ಚಿನ ಡಿಜಿಟಲ್ ಪಾವತಿಗಳನ್ನು UPI ಮೂಲಕ ಮಾಡಲಾಗುತ್ತದೆ. GooglePay, PhonePe, Paytm ನಂತಹ ವಿವಿಧ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆ. ಆದರೆ ಯುಪಿಐ ಆಪ್ ಗಳ ಅತಿಯಾದ ಬಳಕೆಯಿಂದ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎನ್ನುತ್ತಾರೆ ಹಣಕಾಸು ತಜ್ಞರು. ಹೆಚ್ಚಿನ ಪ್ರಮಾಣದಲ್ಲಿ ಯುಪಿಐ ವಹಿವಾಟು ನಡೆಸುವವರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ಇರಿಸಿದೆ.
ಚಿನ್ನದ ಬೆಲೆ ಮತ್ತೆ ಏರಿಕೆ, ವಾರದಿಂದ ಕುಸಿತ ಕಂಡಿದ್ದ ಚಿನ್ನ ಧಿಡೀರ್ ಹೆಚ್ಚಾಯ್ತು
ದೇಶದ ಆದಾಯ ತೆರಿಗೆ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲಿ ಮಿತಿ ಮೀರಿದ ನಗದು ಠೇವಣಿ ಮತ್ತು ದೊಡ್ಡ ಮೊತ್ತದ ವಹಿವಾಟಿನ ಮೇಲೆ ನಿಗಾ ಇರಿಸಿದೆ. ಅಂತಹವರಿಗೆ ಆದಾಯ ತೆರಿಗೆ ನೋಟೀಸ್ ರವಾನೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ತೆರಿಗೆ ಹಾಗೂ ದಂಡ ಕಟ್ಟುವಂತೆ ಅಧಿಕಾರಿಗಳು ನೇರವಾಗಿ ಮನೆಗೆ ನೋಟಿಸ್ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆದಾಯ ತೆರಿಗೆಯು ದಿನನಿತ್ಯದ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುತ್ತಿದೆ. ಮಿತಿ ಮೀರಿ ವಹಿವಾಟು ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಸಾಮಾನ್ಯವಾಗಿ ಉಳಿತಾಯ ಖಾತೆಯಲ್ಲಿ ಒಂದು ವರ್ಷಕ್ಕೆ ರೂ. 10 ಲಕ್ಷದ ಮಿತಿ ಇರುತ್ತದೆ. ಈ ಮಿತಿಯನ್ನು ಮೀರಿದರೆ, ವಿವರಗಳು ತಕ್ಷಣವೇ ಆದಾಯ ತೆರಿಗೆ ಇಲಾಖೆಗೆ ಹೋಗುತ್ತವೆ.
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 285 ಬಿಎ ಅಡಿಯಲ್ಲಿ, ಬ್ಯಾಂಕ್ ಖಾತೆಗಳಲ್ಲಿ (Bank Account) ಹಣವನ್ನು ಜಮಾ ಮಾಡಲು ನಿರ್ಬಂಧವಿದೆ. ಅಲ್ಲದೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದ ಹಣದ ವಿವರಗಳು ಹೊಂದಾಣಿಕೆಯಾಗದಿದ್ದರೆ ಐಟಿ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ.
IT department keeping a close eye on PhonePe and Google Pay UPI Transaction
Our Whatsapp Channel is Live Now 👇