ಜಿಯೋ VS ಏರ್‌ಟೆಲ್, ಕಮ್ಮಿ ಬೆಲೆಯ ಸೂಪರ್ ರಿಚಾರ್ಜ್ ಯೋಜನೆಗಳು ಇವು - Jio vs Airtel, Best OTT Plans

₹500 ಒಳಗೆ ಜಿಯೋ, ಏರ್‌ಟೆಲ್ ಕಡೆಯಿಂದ ದೊರೆಯುವ OTT ಪ್ಲ್ಯಾನ್ಸ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ಸ್, ಹೈ-ಸ್ಪೀಡ್ ಡೇಟಾ ಮತ್ತು ಹಾಟ್‌ಸ್ಟಾರ್, ನೆಟ್ಫ್ಲಿಕ್ಸ್‌ ಸೇರಿದಂತೆ ಜನಪ್ರಿಯ OTT ಸಬ್‌ಸ್ಕ್ರಿಪ್ಶನ್‌ಗಳ ಬಂಪರ್ ಆಫರ್.

  • ಜಿಯೋ OTT ಪ್ಲ್ಯಾನ್ಸ್‌ನಲ್ಲಿ ಸೋನಿಲಿವ್, ZEE5, ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಲಾಭ
  • ಏರ್‌ಟೆಲ್ ಪ್ಲ್ಯಾನ್ಸ್‌ನಲ್ಲಿ 22+ OTTಗಳಿಗೆ ಎಕ್ಸ್‌ಸ್ಟ್ರೀಮ್ ಪ್ಲೇ ಮೂಲಕ ಪ್ರವೇಶ
  • ₹500 ಒಳಗೆ ಡೇಟಾ, ಕಾಲಿಂಗ್ ಮತ್ತು OTT ಬಂಡಲ್ ಆಫರ್‌ಗಳು

Jio vs Airtel, Best OTT Plans : ಟೆಲಿಕಾಂ ಗ್ರಾಹಕರಿಗೆ ಇದೀಗ ಮೊಬೈಲ್ ರೀಚಾರ್ಜ್ (Recharge Plans) ಅಂದ್ರೆ ಕೇವಲ ಕಾಲಿಂಗ್ ಅಥವಾ ಡೇಟಾ ಮಾತ್ರವಲ್ಲ, ಮನರಂಜನೆಯೂ ಸಿಗಬೇಕು ಅನ್ನೋದು ಮುಖ್ಯ.

OTT ಪ್ಲಾಟ್‌ಫಾರ್ಮ್‌ಗಳ ಕ್ರೇಜ್ ಏರಿದಂತೆ, ಜನರು ತಮ್ಮ ಪ್ಲ್ಯಾನ್‌ನಲ್ಲಿ (Prepaid Plans) ಹಾಟ್‌ಸ್ಟಾರ್, ನೆಟ್ಫ್ಲಿಕ್ಸ್‌ ಮುಂತಾದ ಸಬ್‌ಸ್ಕ್ರಿಪ್ಶನ್ ಬೇಕೆಂದು ಹುಡುಕುತ್ತಾರೆ.

ಇದನ್ನೂ ಓದಿ: 1 ರೂಪಾಯಿಗೆ ಬಿಎಸ್‌ಎನ್‌ಎಲ್ ಫ್ರೀಡಂ ಆಫರ್! ಅನ್ಲಿಮಿಟೆಡ್ ಕಾಲ್‌, ದಿನಕ್ಕೆ 2GB ಡೇಟಾ

ಈಗ ಜಿಯೋ ಮತ್ತು ಏರ್‌ಟೆಲ್ ಎರಡೂ ₹500 ಒಳಗೆ ಸಾಕಷ್ಟು ಆಕರ್ಷಕ OTT Plans ನೀಡುತ್ತಿವೆ. ಜಿಯೋದಲ್ಲಿ ಕೇವಲ ₹100ರಿಂದಲೇ OTT ಸಬ್‌ಸ್ಕ್ರಿಪ್ಶನ್‌ ಒಳಗೊಂಡ ಪ್ಲ್ಯಾನ್ಸ್ ಸಿಗುತ್ತವೆ.

₹175 ಪ್ಲ್ಯಾನ್‌ನಲ್ಲಿ ಸೋನಿಲಿವ್, ZEE5, ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ+ ಮುಂತಾದ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ; ₹445 ಪ್ಲ್ಯಾನ್‌ನಲ್ಲಿ ದಿನಕ್ಕೆ 2GB ಡೇಟಾ, ಅನ್‌ಲಿಮಿಟೆಡ್ ಕಾಲ್ಸ್ ಮತ್ತು ಹಲವಾರು OTT ಆಕ್ಸೆಸ್ ಲಭ್ಯ.

ಇದನ್ನೂ ಓದಿ: ಫೋನ್‌ಪೇ, ಗೂಗಲ್‌ಪೇ ಬಳಕೆದಾರರಿಗೆ ಶಾಕ್! ಇನ್ಮುಂದೆ ಈ ಸೇವೆಗಳು ಬಂದ್

ಅದಕ್ಕೆ ಹೋಲಿಸಿದರೆ, ಏರ್‌ಟೆಲ್ ಪ್ಲ್ಯಾನ್ಸ್‌ನಲ್ಲಿ OTT ಆಫರ್‌ಗಳು ಇನ್ನೂ ವೈವಿಧ್ಯಮಯ. ₹181 ಪ್ಲ್ಯಾನ್‌ನಲ್ಲಿ 22ಕ್ಕಿಂತ ಹೆಚ್ಚು OTTಗಳಿಗೆ ಎಕ್ಸ್‌ಸ್ಟ್ರೀಮ್ ಪ್ಲೇ ಮೂಲಕ ಪ್ರವೇಶ, ₹398 ಪ್ಲ್ಯಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್ಸ್ ಜೊತೆಗೆ ದಿನಕ್ಕೆ 2GB ಡೇಟಾ, ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್. ಡೇಟಾ ಹೆಚ್ಚಾಗಿ ಬಳಸುವ ಯೂಸರ್‌ಗಳಿಗೆ ₹440 ಪ್ಲ್ಯಾನ್ ಸೂಪರ್ – ದಿನಕ್ಕೆ 3GB ಡೇಟಾ ಹಾಗೂ 22+ OTT ಆಕ್ಸೆಸ್.

ಒಟ್ಟಾರೆ, ಹೆಚ್ಚು OTT ಪ್ಲಾಟ್‌ಫಾರ್ಮ್ ಬೇಕೆಂದರೆ ಏರ್‌ಟೆಲ್ ಪ್ಲ್ಯಾನ್ಸ್ ಸೂಕ್ತ, ಬಜೆಟ್ ಫ್ರೆಂಡ್ಲಿ ಹಾಗೂ ಒಂದೆರಡು OTT ಬೇಕೆಂದರೆ ಜಿಯೋ ಪ್ಲ್ಯಾನ್ಸ್ ಉತ್ತಮ ಆಯ್ಕೆ.

Jio vs Airtel, Best OTT Plans

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories