1000 ಯೂಟ್ಯೂಬ್ ವಿಡಿಯೋ ವೀಕ್ಷಣೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ? ಯೂಟ್ಯೂಬ್ ಚಾನೆಲ್ ಮಾಡಬೇಕು ಅನ್ನೋರಿಗೆ ಇಲ್ಲಿದೆ ಲೆಕ್ಕಾಚಾರ
ನಿಮ್ಮ ಯೂಟ್ಯೂಬ್ ವಿಡಿಯೋ 1000 ವೀಕ್ಷಣೆ ಪಡೆದರೆ ಸಿಗುತ್ತೆ ಒಳ್ಳೆಯ ಆದಾಯ, ಯೂಟ್ಯೂಬ್ ಚಾನೆಲ್ ಮೂಲಕವೇ ಒಳ್ಳೆಯ ಆದಾಯ ಗಳಿಸಿ!
Earnings From YouTube : ಈಗಿನ ಕಾಲದಲ್ಲಿ ಕಷ್ಟಪಟ್ಟು ಹಣಗಳಿಸಬೇಕು ಎನ್ನುವ ಆಯ್ಕೆಯಿಲ್ಲ. ಸುಲಭವಾದ ರೀತಿಯಲ್ಲಿ ನೀವು ಹಣ ಗಳಿಸಬಹುದು. ಈಗ ಹಣಗಳಿಕೆಗೆ (Earn Money) ಒಳ್ಳೆಯ ಮೂಲ ಯೂಟ್ಯೂಬ್ ಆಗಿದೆ. ಯೂಟ್ಯೂಬ್ ಚಾನೆಲ್ (YouTube Channel) ಶುರು ಮಾಡಿ, ಒಳ್ಳೆಯ ಕಂಟೆಂಟ್ ಕೊಡುವ ಮೂಲಕ ನೀವು ಕೈತುಂಬಾ ಹಣ ಗಳಿಸಬಹುದು.
ಸಾಕಷ್ಟು ಜನರು ಈಗ ಮನೆಯಲ್ಲೇ ಕುಳಿತು, ಯೂಟ್ಯೂಬ್ ಚಾನೆಲ್ ಶುರು ಮಾಡಿ, ವಿಡಿಯೋ ಮಾಡಿ, ಹಣ ಗಳಿಸುತ್ತಿದ್ದಾರೆ. ಯಾವುದೇ ಕಂಪನಿಗಳಲ್ಲಿ ನಿಮಗೆ ಸಂಬಳದ ರೂಪದಲ್ಲಿ ಸಿಗದಷ್ಟು ಹಣ ಯೂಟ್ಯೂಬ್ ಮೂಲಕ ಸಿಗುತ್ತದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.
ಆದರೆ ಇದು ನಿಜ.. ಯೂಟ್ಯೂಬ್ ಚಾನೆಲ್ ನಲ್ಲಿ ಜನರಿಗೆ ಇಷ್ಟ ಅಗುವಂಥ ಕಂಟೆಂಟ್ ಕೊಟ್ಟರೆ ನೀವು ಒಳ್ಳೆಯ ಆದಾಯ ಪಡೆಯಬಹುದು. ಯೂಟ್ಯೂಬ್ ಇಂದ ನಿಮಗೆ ಎಷ್ಟು ಆದಾಯ (Income) ಬರುತ್ತದೆ? ಎಷ್ಟು ವೀಕ್ಷಣೆಗೆ ಎಷ್ಟು ಹಣ ಸಿಗುತ್ತದೆ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ.
ನಿಮ್ಮ ಮನೆಯ ಮಹಡಿಯ ಮೇಲೆಯೇ ಮಾಡಿ ಈ ಬ್ಯುಸಿನೆಸ್! ಶುರು ಮಾಡಲು ದುಡ್ಡೇ ಬೇಕಿಲ್ಲ, ಕೈತುಂಬಾ ಹಣಗಳಿಸಿ
ಆ ಪ್ರಶ್ನೆಗೆ ಇಂದು ಉತ್ತರ ಕೊಡುತ್ತೇವೆ. ಬೇರೆ ಬೇರೆ ರೀತಿಯ ಕಂಟೆಂಟ್ ಕೊಡುವವರಿಗೆ ಯೂಟ್ಯೂಬ್ ಇಂದ ಬೇರೆ ಬೇರೆ ರೀತಿ ಪೇಮೆಂಟ್ ಬರುತ್ತದೆ. ನೀವು ಅಪ್ಲೋಡ್ ಮಾಡುವ ಕಂಟೆಂಟ್ ಕ್ವಾಲಿಟಿ, ಕ್ಯಾಟಗರಿ, ವೀಕ್ಷಣೆ ಇದೆಲ್ಲದರ ಮೇಲೆ ಯೂಟ್ಯೂಬ್ ಇಂದ ಬರುವ ದುಡ್ಡು ಡಿಪೆಂಡ್ ಆಗಿರುತ್ತದೆ. ಹಾಗಾದರೆ ನೀವು ಎಷ್ಟು ಹಣ ಗಳಿಸಬಹುದು ಎಂದು ತಿಳಿಸುತ್ತೇವೆ ನೋಡಿ..
ಅಮೆರಿಕಾದ ಯೂಟ್ಯೂಬರ್ ಗಳ ಗಳಿಕೆ ಬಗ್ಗೆ ನೋಡುವುದಾದರೆ, 2022ರ ಮಾಹಿತಿ ಪ್ರಕಾರ ಅವರೆಲ್ಲರೂ ತಿಂಗಳಿಗೆ $4,600 ಡಾಲರ್ಸ್ ಅಂದರೆ ₹3,77,234 ಲಕ್ಷ ರೂಪಾಯಿ ಗಳಿಸಿದ್ದಾರೆ. ಇದನ್ನು ಲೆಕ್ಕ ಹಾಕಿದರೆ, 1000 ವೀಕ್ಷಣೆಗೆ $18 ಡಾಲರ್ ಪಾವತಿ ಮಾಡಲಾಗಿದೆ.
ಅಣಬೆ ಕೃಷಿ ಮಾಡಿ ಲಕ್ಷಗಟ್ಟಲೇ ಆದಾಯ ಪಡೆಯಿರಿ! ಸರ್ಕಾರದ ಸಹಾಯ ಧನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ
ನೀವು ಕೊಡುವ ಕಂಟೆಂಟ್ ನ ವಿಷಯ ಯಾವುದು ಎನ್ನುವುದರ ಮೇಲೆ ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಜಾಹೀರಾತುಗಳು ಬರುತ್ತದೆ. ಜಾಹಿರಾತು ಕಂಪನಿಗಳ ಜೊತೆಗೆ ಯೂಟ್ಯೂಬ್ ಶೇರ್ ಪಡೆಯುತ್ತದೆ.
ಬೇರೆ ಬೇರೆ ಯೂಟ್ಯೂಬರ್ ಗಳಿಗೆ ಬೇರೆ ಬೇರೆ ರೀತಿಯ ಜಾಹೀರಾತುಗಳು ಬರಬಹುದು. ಯೂಟ್ಯೂಬ್ ಇಂದ ನಿಮಗೆ ಬರುವ ಹಣ ನಿಮ್ಮ ಕಂಟೆಂಟ್ ನ ವಿಷಯ, ನಿಮ್ಮ ಊರು, ಮತ್ತು ಇನ್ನಿತರ ವಿಚಾರಗಳ ಮೇಲೆ ಅವಲಂಬಿಸಿರುತ್ತದೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಯೂಟ್ಯೂಬರ್ ಗಳಿಗೆ ಜಾಹೀರಾತಿನಲ್ಲಿ 55% ಆದಾಯ ಬರುತ್ತದೆ.
ಯೂಟ್ಯೂಬ್ ಇಂದ ನೀವು ಇಷ್ಟೇ ಹಣ ಗಳಿಸುತ್ತೀರಿ ಎಂದು ಊಹೆ ಮಾಡಿ ಹೇಳಲು ಆಗೋದಿಲ್ಲ. ಏಕೆಂದರೆ ಯೂಟ್ಯೂಬ್ ಇಂದ ಹಣಗಳಿಕೆ ಸಾಮಾನ್ಯವಾಗಿ ನೀವು ಅಪ್ಲೋಡ್ ಮಾಡುವ ವಿಡಿಯೋ ಅನ್ನು ಎಷ್ಟು ಜನ ನೋಡುತ್ತಾರೆ? ಜಾಹೀರಾತುಗಳು ಹೇಗೆ ಬರುತ್ತಿದೆ ಇದೆಲ್ಲದರ ಮೇಲೆ ಡಿಪೆಂಡ್ ಆಗಿರುತ್ತದೆ. ಹಲವರು ಹೇಳುವುದು ಏನು ಎಂದರೆ, ನಿಮ್ಮ ಯೂಟ್ಯೂಬ್ ವಿಡಿಯೋ 1000 ವೀಕ್ಷಣೆ ಪಡೆದರೆ ₹1500 ರೂಪಾಯಿ ಬರುತ್ತದೆ ಎಂದು ಕೆಲವರು ಹೇಳಿದ್ದಾರೆ.
ಇನ್ನು ಕೆಲವರು 1000 ಬರುತ್ತದೆ ಎಂದು ಕೂಡ ಹೇಳಿದ್ದಾರೆ. ಆದರೆ ಯೂಟ್ಯೂಬ್ ಹಣಗಳಿಕೆ ಈ ರೀತಿ ಆಗುವುದಿಲ್ಲ, ಯೂಟ್ಯೂಬ್ ಹಣಗಳಿಕೆ ಡಿಪೆಂಡ್ ಆಗುವುದು ಜಾಹೀರಾತುಗಳ ಮೇಲೆ, ಹೆಚ್ಚಿನ ಜನರು ಜಾಹೀರಾತನ್ನು ವೀಕ್ಷಿಸಿಲ್ಲ ಎಂದರೆ, ಸ್ಕಿಪ್ ಮಾಡಿದ್ದರೆ, ಆಗ ಹಣಗಳಿಕೆ ಕೂಡ ಕಡಿಮೆ ಆಗುತ್ತದೆ.
ಒಂದು ವೇಳೆ ನೀವು ಅಪ್ಲೋಡ್ ಮಾಡುವ ವಿಡಿಯೋ ಗೆ 5000 ಅಥವಾ 2000 ವೀಕ್ಷಣೆ ಬಂದರೆ, ವಿಡಿಯೋದಲ್ಲಿರುವ ಜಾಹಿರಾತಿನಿಂದ ಗಳಿಕೆ ಕೂಡ ಜಾಸ್ತಿ ಇರುತ್ತದೆ. ನಿಮ್ಮ ವಿಡಿಯೋ ವೀಕ್ಷಣೆ ಮಾಡುವ ಎಲ್ಲರೂ ಜಾಹೀರಾತನ್ನು ನೋಡಿದ್ದರೆ ನಿಮಗೆ ಸಿಗುವ ಆದಾಯ (YouTube Income) ಕೂಡ ಜಾಸ್ತಿ ಆಗುತ್ತದೆ.
Know how much money you get for 1000 YouTube video views
Follow us On
Google News |