Business News : ಅನೇಕರು ಮನೆಯಿಂದಲೇ ಕುಳಿತು ಯಾವುದಾದರೂ ವ್ಯಾಪಾರ ಮಾಡಲು ಸಾಕಷ್ಟು ಯೋಚಿಸುತ್ತಿರುತ್ತಾರೆ. ಆದರೆ ಯಾವ ವ್ಯಾಪಾರ ಮಾಡಬೇಕು ಎನ್ನುವುದರ ಬಗ್ಗೆ ಅವರಿಗೆ ತಿಳುವಳಿಕೆ ಇರುವುದಿಲ್ಲ.
ಇನ್ನು ವ್ಯಾಪಾರ (Own Business) ಎಂದ ಕೂಡಲೇ ಎಲ್ಲರೂ ಹೂಡಿಕೆಯ (Investment) ಬಗ್ಗೆ ಚಿಂತಿಸುತ್ತಾರೆ. ಇಂದು ನಾವು ನಿಮಗೆ ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮನೆಯಿಂದಲೇ ಈ ವ್ಯಾಪಾರ (Business From Home) ಶುರು ಮಾಡಿ ಸಾಕಷ್ಟು ಹಣ ಗಳಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹೌದು ನಿಮ್ಮ ಮನೆಯ ಮಹಡಿಯ (House Terrace) ಮೇಲೆ ನೀವು ಸುಲಭವಾಗಿ ಈ ವ್ಯಾಪಾರವನ್ನು ಶುರು ಮಾಡಬಹುದು. ಅದು ಹೇಗೆ? ಯಾವ ವ್ಯಾಪಾರ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಬನ್ನಿ..
ಅಣಬೆ ಕೃಷಿ ಮಾಡಿ ಲಕ್ಷಗಟ್ಟಲೇ ಆದಾಯ ಪಡೆಯಿರಿ! ಸರ್ಕಾರದ ಸಹಾಯ ಧನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ
ನಿಮ್ಮ ಮನೆಯ ಟೆರೇಸ್ ಮೇಲೆ, ಟೆರೇಸ್ ಫಾರ್ಮಿಂಗ್( Terrace farming), ಸೋಲಾರ್ ಪ್ಯಾನೆಲ್ (Solar panel), ಹಾಗೂ ಮೊಬೈಲ್ ಟವರ್ (Mobile Tower) ನಂತಹಗಳಿಂದ ನೀವು ಕಡಿಮೆ ಹೂಡಿಕೆಯಲ್ಲಿ ಯಾವುದೇ ನಷ್ಟವಿಲ್ಲದೆ ಬಹಳ ಸುಲಭವಾಗಿ ಹಣ ಗಳಿಸಬಹುದಾಗಿದೆ.
ಹೌದು, ಅನೇಕ ನಗರಗಳಲ್ಲಿ ಹಾಗೆ ಪಟ್ಟಣಗಳಲ್ಲಿ ಈ ರೀತಿಯ ವ್ಯಾಪಾರ ಮಾಡುವ ಮೂಲಕ ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಅದು ಹೇಗೆ ಎನ್ನುವುದನ್ನು ತಿಳಿಯಲು ಮುಂದಕ್ಕೆ ಓದಿ…
ಟೆರೇಸ್ ಗಾರ್ಡನಿಂಗ್; ನಿಮ್ಮ ಮನೆಯ ಛಾವಣಿ ದೊಡ್ಡದಾಗಿದ್ದರೆ, ನೀವು ಸುಲಭವಾಗಿ ಟೆರೇಸ್ ಗಾರ್ಡನಿಂಗ್ ವ್ಯಾಪಾರವನ್ನು ಶುರು ಮಾಡಬಹುದು. ಇನ್ನು ನಿಮ್ಮ ಮನೆಯ ಮಹಡಿಯ ಮೇಲೆ ಪಾಲಿ ಬ್ಯಾಗ್ ಗಳಲ್ಲಿ ತರಕಾರಿ ಮತ್ತು ಹೂಗಳ ಗಿಡಗಳನ್ನು ನೆಟ್ಟು, ಅದರಿಂದ ನೀವು ಒಳ್ಳೆಯ ಹಣ ಗಳಿಸಬಹುದು. ಇನ್ನು ನೀವು ಈ ವೇಳೆ ಗಿಡಗಳ ಹಾಗೆ ಸೂರ್ಯನ ಬೆಳಕಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಸೋಲಾರ್ ಫಲಕಗಳು; ನೀವು ಈ ವ್ಯಾಪಾರಕ್ಕಾಗಿ ಸ್ವಲ್ಪ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಮನೆಯ ಛಾವಣಿಯ ಮೇಲೆ ಸೋಲಾರ್ ಫಲಕಗಳನ್ನು ಸ್ಥಾಪಿಸುವ ಮೂಲಕ ನೀವು ನಿಮ್ಮ ವ್ಯಾಪಾರ ಶುರು ಮಾಡಬಹುದು. ಈ ಮೂಲಕ ನೀವು ನಿಮ್ಮ ಮನೆಯ ವಿದ್ಯುತ್ ಬಳಕೆ ಕಡಿಮೆ ಮಾಡುವುದರ ಜೊತೆಗೆ ಒಳ್ಳೆಯ ಹಣವನ್ನು ಸಹ ಗಳಿಸಬಹುದಾಗಿದೆ.
ನಿಮ್ಮ ಹಣ ಡಬಲ್ ಆಗುವ ಪೋಸ್ಟ್ ಆಫೀಸ್ ಯೋಜನೆ! ಹೆಚ್ಚು ದುಡ್ಡು ಸಿಗುವ ಈ ಸ್ಕೀಮ್ ಗೆ ಈಗಲೇ ಅಪ್ಲೈ ಮಾಡಿ
ಮೊಬೈಲ್ ಟವರ್; ನೀವು ಕೆಲವು ಮೊಬೈಲ್ ಕಂಪನಿಗಳಿಗೆ ನಿಮ್ಮ ಮನೆಯ ಛಾವಣಿಯನ್ನು ಬಾಡಿಗೆಗೆ ನೀಡಬಹುದು. ಹೌದು ನಿಮ್ಮ ಮನೆಯ ಛಾವಣಿಯ ಮೇಲೆ ಮೊಬೈಲ್ ಟವರ್ ಗಳನ್ನು ಸ್ಥಾಪಿಸಿ, ಕಂಪನಿಯು ನಿಮಗೆ ಪ್ರತಿ ತಿಂಗಳಿಗೆ ಇಷ್ಟು ಎನ್ನುವಂತೆ ಹಣವನ್ನು ನೀಡುತ್ತದೆ. ಇದಕ್ಕಾಗಿ ನೀವು ಮೊದಲು ನಿಮ್ಮ ಸ್ಥಳೀಯ ಪುರಸಭೆಯಿಂದ ಅನುಮತಿಯನ್ನು ಪಡೆಯಬೇಕು.
ಬ್ಯಾನರ್ ಹಾಗೂ ಹೋರ್ಡಿಂಗ್ಸ್ ವ್ಯಾಪಾರ; ನಿಮ್ಮ ಮನೆ ರಸ್ತೆಗೆ ಹತ್ತಿರದಲ್ಲಿದ್ದರೆ, ಹಾಗೂ ದೊಡ್ಡ ಛಾವಣಿ ಇದ್ದರೆ, ನೀವು ಬ್ಯಾನರ್ ಗಳು ಮತ್ತು ಹೋರ್ಡಿಂಗ್ಸ್ ಗಳನ್ನು ನಿಮ್ಮ ಮನೆಯ ಮೇಲೆ ಸ್ಥಾಪಿಸುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಕೆಲವು ಏಜೆನ್ಸಿಗಳು ನೀವು ಸಂಪರ್ಕ ಮಾಡಿ, ಎಲ್ಲಾ ರೀತಿಯ ಅನುಮತಿ ಪಡೆದ ನಂತರ ಈ ವ್ಯಾಪಾರವನ್ನು ಸುಲಭವಾಗಿ ಶುರು ಮಾಡಬಹುದು.
Business Idea You Can Do on Your House Terrace
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.