ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್! ಕಟ್ಟಾಗುತ್ತೆ ಹೆಚ್ಚು ಹಣ

UPI Transaction Limit : ನೀವು ಮಾಡುವ ಡಿಜಿಟಲ್ ಪಾವತಿಯ ಮಿತಿ ಎಷ್ಟು ಗೊತ್ತಾ? ಗೊತ್ತಿಲ್ದೆ ಹೆಚ್ಚು ಪಾವತಿ ಮಾಡಿದ್ರೆ ನಿಮ್ಮ ಖಾತೆಯಿಂದ ಕಟ್ಟಾಗುತ್ತೆ ಹಣ

UPI Transaction Limit : ಇತ್ತಿಚಿನ ದಿನಗಳಲ್ಲಿ ಡಿಜಿಟಲ್ ಕ್ಷೇತ್ರವು (digital field) ಸಿಕ್ಕಾಪಟ್ಟೆ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇದು ಎಲ್ಲ ಕ್ಷೇತ್ರವನ್ನು ಆವರಿಸಿಕೊಂಡಿದೆ. ಹಾಗಾಗಿ ಕೈಯಲ್ಲಿ ಮೊಬೈಲ್ (mobile) ಒಂದು ಇದ್ದರೆ ಯಾವುದೇ ಕೆಲಸವನ್ನಾದರೂ ಕುಳಿತಲ್ಲಿಯೇ ಮಾಡಬಹುದು.

ಇದು ಬ್ಯಾಂಕಿಂಗ್ ಕ್ಷೇತ್ರಕ್ಕೂ (banking field) ಹೊರತಾಗಿಲ್ಲ. ಡಿಜಿಟಲ್ ಪಾವತಿ (digital payment) ವಿಧಾನ ಬಂದಾಗಿನಿಂದ ಎಲ್ಲರೂ ಬ್ಯಾಂಕ್ ಖಾತೆ ಹೊಂದುತ್ತಿದ್ದಾರೆ. ಯುಪಿಐ ಬಳಕೆ (UPI usage) ಮಾಡಿ ನೇರ ನಗದು ವರ್ಗಾವಣೆ ಮಾಡುತ್ತಿದ್ದಾರೆ.

ಸ್ವಂತ ಮನೆ ಕಟ್ಟಿಕೊಳ್ಳಲು 6.5 ಲಕ್ಷ ರೂಪಾಯಿ ಸಹಾಯಧನ! ಆಸಕ್ತರು ಅರ್ಜಿ ಸಲ್ಲಿಸಿ

ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್! ಕಟ್ಟಾಗುತ್ತೆ ಹೆಚ್ಚು ಹಣ - Kannada News

ಯುಪಿಐ ಅಡಿಯಲ್ಲಿ ಹಲವು ಅಪ್ಲಿಕೇಶನ್ಗಳು ಈ ಸೇವೆಯನ್ನು ಒದಗಿಸುತ್ತಿದೆ. ಇದೀಗ ಈ ಸೇವೆಗಳ ಮೇಲೆ ಮಿತಿ ಹಾಗೂ ಕೆಲ ಬಳಕೆಗೆ ಶುಲ್ಕ ವಿಧಿಸಲಾಗುತ್ತಿದೆ. ಈಗ ಆ ವಿಚಾರದ ಕುರಿತು ತಿಳಿದುಕೊಳ್ಳೋಣ.

ಎನ್ಪಿಸಿಐ (NPCI) 2016 ರಲ್ಲಿ ಈ ಡಿಜಿಟಲ್ ಪಾವತಿ ವಿಧಾನವನ್ನು ಪರಿಚಯಿಸಿತು. ಸದ್ಯ ಎಲ್ಲೆಡೆ ಯುಪಿಐ ಪಾವತಿ ವಿಧಾನ ಚಾಲನೆಯಲ್ಲಿದೆ. ಯುಪಿಐನಿಂದ ಪಾವತಿ ವಿಧಾನವು ಅತ್ಯಂತ ಸರಳ ಹಾಗೂ ಜನಸ್ನೇಹಿ ಆಗಿರುವುದರಿಂದ ಬಹುಬೇಗ ಪ್ರಚಾರ ಪಡೆದುಕೊಂಡಿದೆ. ಗೂಗಲ್ ಪೇ (Gpay) , ಫೋನ್ ಪೇ (phonepe) ,ಪೇಟಿಎಂ, ಹೀಗೆ ಹಲವಾರು ಸಂಸ್ಥೆಗಳು ಈ ಸೇವೆಯನ್ನು ಒದಗಿಸುತ್ತಿವೆ.

ದಿನದ ಮಿತಿ ಎಷ್ಟು?: (limitation)

ಎನ್ಪಿಸಿಐ ಪ್ರಕಾರ ನೀವು ಒಂದು ದಿನಕ್ಕೆ ಯುಪಿಐ ಬಳಕೆ ಮಾಡಿ ಒಂದು ಲಕ್ಷ ರೂ. ವರೆಗೆ ವರ್ಗಾವಣೆ ಮಾಡಬಹುದಾಗಿದೆ. ಯುಪಿಐನ ದೈನಂದಿನ ಗರಿಷ್ಟ ವರ್ಗಾವಣೆ ಮಿತಿಯು ಬ್ಯಾಂಕ್ನಿಂದ ಬ್ಯಾಂಕ್ಗೆ ವರ್ಗಾವಣೆ ಮಾಡುವುದಾದರೆ 25 ಸಾವಿರ ರೂ. ವರ್ಗಾವಣೆ ಮಾಡಬಹುದಾಗಿದೆ. ಆದರೆ ಕೆಲವು ಬ್ಯಾಂಕ್ಗಳು ದಿನ ಬದಲಾಗಿ ತಿಂಗಳ ಮಿತಿ ನಿಗದಿ ಮಾಡಿವೆ.

ಸ್ವಂತ ಬಿಸಿನೆಸ್ ಮಾಡೋಕೆ ಲೋನ್ ಸಿಗ್ತಾಯಿಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು

UPI Paymentಆಸ್ಪತ್ರೆಯಲ್ಲಿನ ವೈದ್ಯಕೀಯ ಶುಲ್ಕಗಳು (medical fee), ಶಾಲಾ ಫೀ ತುಂಬಲು 5 ಲಕ್ಷ ರೂ.ಗಳ ಮಿತಿಯನ್ನು ಯುಪಿಐ ನಿಗದಿಪಡಿಸಿದೆ. ಎನ್ಪಿಸಿಐ ನಿರ್ಧಿಷ್ಟ ವ್ಯಾಪಾರಿ ವರ್ಗಕ್ಕೆ ಮಿತಿಯನ್ನು ಹೆಚ್ಚಿಸಲು ದೇಶದಲ್ಲಿರುವ ಎಲ್ಲ ಬ್ಯಾಂಕ್ಗಳು, ಯುಪಿಐ ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ಈಗಾಗಲೇ ನಿರ್ದೇಶನವನ್ನು ನೀಡಿದೆ.

ಪ್ರಪಂಚದಲ್ಲೇ ಹೆಚ್ಚು ಚಿನ್ನ ಯಾರ ಬಳಿ ಇದೆ ಗೊತ್ತಾ? ಇಲ್ಲಿದೆ ಬೆಚ್ಚಿಬೀಳುವ ಸಂಗತಿ

ಯುಪಿಐ ಇಂಟರ್ ಚೆಂಚ್ ಶುಲ್ಕ (UBI interchange charge)

ಯುಪಿಐ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ತನ್ನ ಸೇವೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಇದು ಜನರಿಗೆ ಹೊರೆಯಾಗಿದೆ. ಈ ವಿಚಾರವಾಗಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಬಳಕೆ ಅನಿವಾರ್ಯವಾದ ಕಾರಣ ಶಾಪ ಹಾಕಿಕೊಂಡು ಬಳಕೆ ಮಾಡುತ್ತಿದ್ದಾರೆ.

ಇಂಟರ್ ಚೆಂಜ್ ಶುಲ್ಕವು ವ್ಯಾಪಾರ ವಹಿವಾಟನ್ನು ಪ್ರಕ್ರಿಯೆಗೊಳಿಸುವಾಗ ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸಬೇಕಾದ ಶುಲ್ಕವಾಗಿದೆ. ವಿವಿಧ ಸೇವೆಗಳಲ್ಲಿ ಇಂಟರ್ ಚೆಂಜ್ ಶುಲ್ಕವು ಶೇ.೦.5ರಿಂದ ಶೇ. 1.1 ಮಿತಿಯಲ್ಲಿದೆ.

ಇಂಧನ ಪಾವತಿಗೆ ಶೇ.೦.5, ಅಂಚೆ ಕಚೇರಿ, ಟೆಲಿಕಾಂ ಉಪಯುಕ್ತತೆಗಳು, ಕೃಷಿ, ಶಿಕ್ಷಣಕ್ಕೆ ಶೇ.೦.7, ಸೂಪರ್ ಮಾರ್ಟ್ ಪಾವತಿಗೆ ಶೇ.೦.9, ವಿಮೆ (Insurance), ಮ್ಯೂಚುವಲ್ ಫಂಡ್ (mutual fund) ಗಳು, ಸರ್ಕಾರ, ರೈಲ್ವೆ ಪಾವತಿಗೆ ಶೇ.1 ರಷ್ಟು ಇಂಟರ್ ಚೆಂಜ್ ಶುಲ್ಕ ಅನ್ವಯಿಸುತ್ತದೆ. ಈ ಎಲ್ಲ ಇಂಟರ್ ಚೆಂಜ್ ಶುಲ್ಕಗಳು ಜನವರಿ 1 ರಿಂದ ಜಾರಿಗೆ ಬಂದಿವೆ.

ಎಸ್‌ಬಿಐ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

Know the UPI Transaction Limit Per Day on Phonepe, Google Pay

Follow us On

FaceBook Google News

Know the UPI Transaction Limit Per Day on Phonepe, Google Pay