ಸ್ವಂತ ಮನೆ ಕಟ್ಟಿಕೊಳ್ಳಲು 6.5 ಲಕ್ಷ ರೂಪಾಯಿ ಸಹಾಯಧನ! ಆಸಕ್ತರು ಅರ್ಜಿ ಸಲ್ಲಿಸಿ

ಸ್ವಂತ ಸೂರು ನಿರ್ಮಾಣಕ್ಕೆ, ಕೇಂದ್ರ ಸರ್ಕಾರದ ಬೆಂಬಲ; ಸಿಗಲಿದೆ 6.5 ಲಕ್ಷ ರೂಪಾಯಿ ಸಹಾಯಧನ

Bengaluru, Karnataka, India
Edited By: Satish Raj Goravigere

ಪ್ರಧಾನ ಮಂತ್ರಿ ಅವರ ಆವಾಸ್ ಯೋಜನೆಯ ಅಡಿಯಲ್ಲಿ ದೇಶದಲ್ಲಿ ವಾಸಿಸುವ ಲಕ್ಷಾಂತರ ಜನರು ಈಗಾಗಲೇ ಗೃಹ ನಿರ್ಮಾಣ (own house) ಮಾಡಿಕೊಂಡಿದ್ದಾರೆ. ಗೃಹ ನಿರ್ಮಾಣಕ್ಕೆ ಇನ್ನೂ ಅವಕಾಶ ಇದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸಿ (apply for own house) ಸರ್ಕಾರದಿಂದ ಧನ ಸಹಾಯ ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

2022 ಮುಗಿಯುವುದರ ಒಳಗೆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಸ್ವಂತ ಸೂರು ಹೊಂದಬೇಕು ಎನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿಜಿ (pradhanmantri Narendra Modiji) ಅವರ ಕನಸಾಗಿತ್ತು. ಈ ಮನೆ ನಿರ್ಮಾಣದ ಪ್ರಕ್ರಿಯೆ ಇಂದಿಗೂ ಮುಂದುವರೆದಿದೆ.

Free housing Scheme for 3 crore poor people, apply for PM Awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಮನೆ ನಿರ್ಮಾಣ ಮಾಡಿಕೊಡುವ ಕನಸು ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಸ್ಯೆಯಿಂದಾಗಿ ಪೂರ್ಣಗೊಂಡಿಲ್ಲ. ಹಾಗಾಗಿ ಈಗ ಅಂದರೆ 2024ರಲ್ಲಿ ಈ ಕನಸು ಈಡೇರಿಸುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ.

ಸ್ವಂತ ಬಿಸಿನೆಸ್ ಮಾಡೋಕೆ ಲೋನ್ ಸಿಗ್ತಾಯಿಲ್ವಾ? ಹಾಗಾದ್ರೆ ಇಷ್ಟು ಮಾಡಿ ಸಾಕು

ರಾಜೀವ್ ಗಾಂಧಿ ವಸತಿ ಯೋಜನೆ! (Rajiv Gandhi aawas Yojana)

ಸರ್ಕಾರದಿಂದ ವಸತಿ ನಿರ್ಮಾಣಕ್ಕೆ ಅನುದಾನ ಸಿಗುವುದರ ಜೊತೆಗೆ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಸತಿ ಯೋಜನೆ ಅಡಿಯಲ್ಲಿ 7.5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Loan) ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆ ನಿರ್ಮಾಣವನ್ನು ರಾಜೀವ್ ಗಾಂಧಿ ವಸತಿ ಯೋಜನೆಯ ಮುಖೇನ ಮಾಡಲಾಗುತ್ತಿದ್ದು, ಈಗಾಗಲೇ 52,189 ಮನೆ ನಿರ್ಮಾಣ ಮಾಡಲಾಗಿದೆ. ಜನರಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳೋದಕ್ಕೆ ಕೇಂದ್ರ ಸರ್ಕಾರದಿಂದ 3.5 ಲಕ್ಷ ರೂಪಾಯಿಗಳು ಸಿಕ್ಕರೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳನ್ನು ಸಹಾಯಧನ (subsidy Loan) ವಾಗಿ ನೀಡಲಾಗುತ್ತದೆ.

ಅಂದ್ರೆ ಇಲ್ಲಿ ಕೇವಲ ಒಂದು ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಇಡುವುದರ ಮೂಲಕ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಳ್ಳಬಹುದು.

ಪ್ರಪಂಚದಲ್ಲೇ ಹೆಚ್ಚು ಚಿನ್ನ ಯಾರ ಬಳಿ ಇದೆ ಗೊತ್ತಾ? ಇಲ್ಲಿದೆ ಬೆಚ್ಚಿಬೀಳುವ ಸಂಗತಿ

housing schemeಅವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಸೂರು ನಿರ್ಮಿಸಿಕೊಳ್ಳಲು ಬೇಕಾಗಿರುವ ಅರ್ಹತೆಗಳು!

ಯೋಜನೆಯ ಅರ್ಜಿಯನ್ನು ಮಹಿಳೆಯರು ಮಾತ್ರ ಸಲ್ಲಿಸಬಹುದು. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರ ಪುರುಷರಾಗಿದ್ದರು ಅರ್ಜಿ ಸಲ್ಲಿಸಬಹುದು.

ಮಾಜಿ ಯೋಧರು, ವಿಶೇಷ ಚೇತನರು ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ 2011ರ ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಪಟ್ಟಿಯಲ್ಲಿ ಹೆಸರು ಇರಬೇಕು.

ಈ ಹಿಂದೆ ಆವಾಸ್ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರು ಅಥವಾ ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

ಕುಟುಂಬದ ವಾರ್ಷಿಕ ಆದಾಯ 3, ಮೀರಬಾರದು.

ಸ್ವಂತ ಮನೆ ಹೊಂದಿರುವ ಹಾಗಿಲ್ಲ. ಆದರೆ ಸ್ವಂತ ಮನೆ ನಿರ್ಮಾಣಕ್ಕೆ ಸ್ವಂತ ಜಮೀನು (Own Property) ಅಥವಾ ಜಾಗ ಹೊಂದಿರಬೇಕು. ಕನಿಷ್ಠ 450 ಚದರ ಮೀಟರ್ ಜಾಗ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಎಸ್‌ಬಿಐ ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to apply)

ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್

ರೇಷನ್ ಕಾರ್ಡ್

ಆದಾಯ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಅರ್ಜಿದಾರರು ಮಾಜಿ ಅಥವಾ ವಿಶೇಷ ಚೇತನರಾಗಿದ್ದರೆ ಸರಕಾರದಿಂದ ದೃಢೀಕರಣ ಪ್ರಮಾಣ ಪತ್ರ ನೀಡಬೇಕು.

ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for aavas yojana)

https://ashraya.karnataka.gov.in/ ಈ ವೆಬ್ ಸೈಟ್ ಗೆ ಹೋಗಿ, ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಅರ್ಜಿ ಫಾರಂನಲ್ಲಿ ಅಗತ್ಯ ಇರುವ ಮಾಹಿತಿಯನ್ನು ಪೂರೈಸಿ ಬಳಿಕ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು.

ನಿಮ್ಮ ಅರ್ಜಿ ಸಂದಾಯವಾಗಬೇಕಾದರೆ ಮುಂಗಡ ಹಣವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು. ಪಾವತಿ ಮಾಡಿದ ಬಳಿಕ ರಶೀದಿ ಪಡೆದುಕೊಳ್ಳುವುದನ್ನು ಮರೆಯಬೇಡಿ.

ಆವಾಸ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ರಾಜೀವ್ ಗಾಂಧಿ ವಸತಿ ನಿಗಮ ನಿ.
ಕಾವೇರಿ ಭವನ, 9ನೇ ಮಹಡಿ ಸಿ & ಎಫ್ ಬ್ಲಾಕ್, KG ರೋಡ್,
ಬೆಂಗಳೂರು 56009
ಸಂಪರ್ಕ ಸಂಖ್ಯೆ:- 91-080-22106888, 91-080-22247317

Get 6.5 lakh rupees subsidy to build own house, apply for the Scheme