Fixed Deposit: ಕೊಟಕ್ ಮಹೀಂದ್ರಾ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದೆ!
Fixed Deposit: ಹಿರಿಯ ನಾಗರಿಕರು ಸಾಮಾನ್ಯ ಠೇವಣಿದಾರರಿಗಿಂತ 0.50% ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ.
Fixed Deposit: ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಸ್ಥಿರ ಠೇವಣಿಗಳ (Fixed Deposits) ಮೇಲಿನ ಬಡ್ಡಿದರವನ್ನು 10-25 ಮೂಲಾಂಕಗಳಷ್ಟು ಹೆಚ್ಚಿಸಿದೆ. ಈ ಹೆಚ್ಚಿದ ಬಡ್ಡಿ ದರಗಳು ಇಂದಿನಿಂದ (ಅಕ್ಟೋಬರ್ 19) ಜಾರಿಗೆ ಬರಲಿವೆ.
7 ದಿನಗಳಿಂದ 1 ವರ್ಷದ ಅವಧಿಯ FD ಗಳ ಮೇಲೆ ಬ್ಯಾಂಕ್ 2.50% ರಿಂದ 6.00% ವರೆಗಿನ ಬಡ್ಡಿ ದರಗಳನ್ನು ನೀಡುತ್ತದೆ. 1 ವರ್ಷ 25 ದಿನಗಳಿಂದ 5 ವರ್ಷಗಳ ಅವಧಿಯ FD ಗಳಲ್ಲಿ 6.10-6.20% ಬಡ್ಡಿ ಲಭ್ಯವಿದೆ.
ಹಿರಿಯ ನಾಗರಿಕರು ಎಲ್ಲಾ ಸಮಯ ಮಿತಿ ಠೇವಣಿಗಳ ಮೇಲಿನ ಸಾಮಾನ್ಯ ಠೇವಣಿದಾರರ ದರಕ್ಕಿಂತ 0.50% ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ. ಅವರು ಕನಿಷ್ಠ 3.00% ರಿಂದ ಗರಿಷ್ಠ 6.70% ಬಡ್ಡಿದರವನ್ನು ಪಡೆಯುತ್ತಾರೆ. ಈ ಬಡ್ಡಿದರಗಳು ರೂ. 2 ಕೋಟಿವರೆಗಿನ ಠೇವಣಿಗಳಿಗೆ ಅನ್ವಯಿಸುತ್ತದೆ.
Kotak Mahindra Bank increased interest rates on Fixed Deposits