ಮಹಿಳೆಯರಿಗಾಗಿಯೇ ಮೀಸಲಿರುವ ಈ ಯೋಜನೆಗಳಲ್ಲಿ ಗಳಿಸಬಹುದು ಲಕ್ಷ ಲಕ್ಷ ಆದಾಯ
ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ಗಳು.. ಪೋಸ್ಟ್ ಆಫೀಸ್ನ ಆರ್‌ಡಿ ಯೋಜನೆಗಳು (Post Office RD Scheme), ಮ್ಯೂಚುವಲ್ ಫಂಡ್ (Mutual Fund) ಹಾಗೂ ಪಿಪಿಎಫ್ ಹೂಡಿಕೆ (PPF Investment)
ಇನ್ನು ಮುಂದೆ ಮಹಿಳೆಯರು ಅಡುಗೆ ಮನೆಯಲ್ಲಿ ಸಾಸಿವೆ ಡಬ್ಬದಲ್ಲಿಯೋ ಅಥವಾ ಅಕ್ಕಿ ಡಬ್ಬದಲ್ಲಿಯೋ ಹಣವನ್ನು ಇಟ್ಟು ಉಳಿತಾಯ ಮಾಡುವ ಅಗತ್ಯವಿಲ್ಲ ಯಾಕೆಂದರೆ ಹೀಗೆ ಹಣ ಇಟ್ಟರೆ ಅದು ಖಂಡಿತ ಡಬಲ್ ಆಗಲ್ಲ, ಅದರ ಬದಲು ನಾವು ಈಗ ಹೇಳುವ ಮಹಿಳೆಯರಿಗಾಗಿಯೇ ಮೀಸಲಿರುವ ಯೋಜನೆಗಳಲ್ಲಿ ಹೂಡಿಕೆ (Investment Schemes) ಮಾಡಿದರೆ, ಎಷ್ಟು ಹಣ ಹೂಡಿಕೆ ಮಾಡುತ್ತಿರೋ ಅದಕ್ಕಿಂತ ಹೆಚ್ಚು ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ ಮಹಿಳೆಯರು ಹಣವನ್ನು ವ್ಯರ್ಥ ಮಾಡುವುದಿಲ್ಲ ಅದರಲ್ಲೂ ಮನೆಯಲ್ಲಿಯೇ ಇರುವ ಗರ್ಭಿಣಿಯರು ತಮ್ಮ ಮನೆ ಖರ್ಚಿಗೆ ಕೊಡುವ ಅಲ್ಪ ಸ್ವಲ್ಪ ಹಣದಲ್ಲಿಯೂ ಉಳಿತಾಯ ಮಾಡುತ್ತಾರೆ. ಇಂತಹ ಮಹಿಳೆಯರಿಗಾಗಿ ಇರುವ ಬೆಸ್ಟ್ ಇನ್ವೆಸ್ಟ್ಮೆಂಟ್ ಪ್ಲಾನ್ ಗಳು.. ಪೋಸ್ಟ್ ಆಫೀಸ್ನ ಆರ್‌ಡಿ ಯೋಜನೆಗಳು (Post Office RD Scheme), ಮ್ಯೂಚುವಲ್ ಫಂಡ್ (Mutual Fund) ಹಾಗೂ ಪಿಪಿಎಫ್ ಹೂಡಿಕೆ (PPF Investment)!
ಟ್ರ್ಯಾಕ್ಟರ್ ಖರೀದಿಗೆ ಸರ್ಕಾರದಿಂದಲೇ ಸಿಗುತ್ತೆ 50% ನಷ್ಟು ಸಬ್ಸಿಡಿ ಹಣ; ಅರ್ಜಿ ಸಲ್ಲಿಸಿ
ಅಂಚೆ ಕಚೇರಿಯ ಆರ್ ಡಿ ಯೋಜನೆ (Recurring Deposit – RD)
ಆರ್ ಡಿ ಅಂದರೆ ಮರುಕಳಿಸುವ ಠೇವಣಿ (Recurring Deposit) ಖಾತರಿ ಆದಾಯವನ್ನು ನೀಡುವ ಯೋಜನೆಯಾಗಿದೆ. ಇದು ಸ್ಥಿರ ಲಾಭವನ್ನು ನೀಡುವುದರಿಂದ ಅಪಾಯ ಮುಕ್ತವಾಗಿದೆ.
ಅಂಚೆ ಕಚೇರಿಯ ಆರ್ ಡಿ ಯೋಜನೆಯಲ್ಲಿ 100 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ಪ್ರಸ್ತುತ 6.5% ನಷ್ಟು ಬಡ್ಡಿದರ ನಿಗದಿಪಡಿಸಲಾಗಿದ್ದು, ಐದು ವರ್ಷಗಳ ಅವಧಿಗೆ ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ ಒಟ್ಟು ಹೂಡಿಕೆ ಮೊತ್ತ 60 ಸಾವಿರ ರೂಪಾಯಿಗಳಾಗುತ್ತವೆ. ಖಾತೆ ಮುಕ್ತಾಯದ ಸಮಯದಲ್ಲಿ 70,989 ರೂಪಾಯಿಗಳನ್ನು ಹಿಂಪಡೆಯುತ್ತೀರಿ.
ಮಳೆಯಿಂದ ನಿಮ್ಮ ಕಾರ್ ಹಾನಿ ಆದ್ರೆ, ಇನ್ಸೂರೆನ್ಸ್ ಕ್ಲೈಮ್ ಮಾಡಬಹುದಾ? ಇಲ್ಲಿದೆ ಮಾಹಿತಿ
SIP ಹೂಡಿಕೆ!
ಎಸ್ಐ ಪಿ ಯಲ್ಲಿ ಹೂಡಿಕೆ (SIP investment) ಮಾಡಿದ್ರೆ ಅತಿ ಉತ್ತಮ ಲಾಭ ಗಳಿಸಬಹುದು. ಇಲ್ಲಿನ ಹೂಡಿಕೆಗೆ ಸಿಗುವ ಬಡ್ಡಿದರ 12% ಆದರೆ ಇಲ್ಲಿ ಬಡ್ಡಿ ಸ್ಥಿರವಾಗಿರುವುದಿಲ್ಲ ಮಾರುಕಟ್ಟೆಯ ದರಕ್ಕೆ ತಕ್ಕಂತೆ ಬದಲಾಗುತ್ತದೆ.
ಎಸ್ ಐ ಪಿ ಯಲ್ಲಿ 15 ವರ್ಷಗಳ ಅವಧಿಗೆ ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಆಗುವ ಹೂಡಿಕೆ ಮೊತ್ತ 1,80,000 ರೂ.ಗಳು. 15 ವರ್ಷಗಳಲ್ಲಿ 3,24,576 ರೂಪಾಯಿ ಬಡ್ಡಿಯೇ ಸಿಗುತ್ತದೆ. ಅಲ್ಲಿಗೆ ನೀವು 15 ವರ್ಷಗಳಲ್ಲಿ 5,04,576 ರಿಟರ್ನ್ ಪಡೆಯಬಹುದು.
ಮೊಲ ಸಾಕಾಣಿಕೆಯಿಂದ ಇದೆ ಭರ್ಜರಿ ಆದಾಯ! ಕಡಿಮೆ ಬಂಡವಾಳ, ಕೈತುಂಬಾ ಹಣ
PPF ಹೂಡಿಕೆ! (PPF investment)
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (public provident fund) ಕೂಡ ಅತ್ಯುತ್ತಮ ಉಳಿತಾಯ ಯೋಜನೆಯಾಗಿದ್ದು ಕನಿಷ್ಠ 500 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು.
ಸುಮಾರು 15 ವರ್ಷಗಳ ಅವಧಿಗೆ ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ ಆಗುವ ಹೂಡಿಕೆ ಮೊತ್ತ 1,80,000 ರೂ. ಪ್ರಸ್ತುತ 7.1% ಬಡ್ಡಿ ದರ (rate of interest) ದಲ್ಲಿ ಒಟ್ಟು ಸಿಗುವ ಬಡ್ಡಿ 1,45,457 ರೂ. ಅಲ್ಲಿಗೆ 15 ವರ್ಷಗಳಲ್ಲಿ ನಿಮಗೆ ಸಿಗುವ ಮೊತ್ತ 3,25,457 ರೂ. ಇಷ್ಟು ಸಣ್ಣ ಉಳಿತಾಯ ಮಾಡಲು ಆಯ್ಕೆ ಮಾಡಿಕೊಳ್ಳಬಹುದಾದ ಅತ್ಯುತ್ತಮ ಯೋಜನೆಗಳು.
ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!
Lakhs of income can be earned in these schemes for women