10ನೇ ತರಗತಿ, ಪಿಯುಸಿ ಪಾಸ್ ಆದ ಬಡ ವಿದ್ಯಾರ್ಥಿಗಳಿಗೆ ₹40,000 ವಿದ್ಯಾರ್ಥಿ ವೇತನ - Education Scholarship
10ನೇ ತರಗತಿ, ಪಿಯುಸಿ, ಡಿಪ್ಲೊಮಾ ಪಾಸ್ ಆದ ಬಡ ಪ್ರತಿಭಾವಂತರಿಗೆ LIC ಗೋಲ್ಡನ್ ಜೂಬಿಲಿ ವಿದ್ಯಾರ್ಥಿವೇತನ ಯೋಜನೆ ದೊಡ್ಡ ಸಹಾಯ. ಸೆಪ್ಟೆಂಬರ್ 22, 2025 ರವರೆಗೆ licindia.in ನಲ್ಲಿ ಅರ್ಜಿ ಸಲ್ಲಿಸಬಹುದು.

LIC Golden Jubilee Scholarship 2025 : ಭಾರತದ ಅತಿ ದೊಡ್ಡ ಇನ್ಷುರೆನ್ಸ್ ಸಂಸ್ಥೆ ಎಲ್ಐಸಿ (LIC) ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ಗೋಲ್ಡನ್ ಜೂಬಿಲಿ ವಿದ್ಯಾರ್ಥಿವೇತನ ಪ್ಲಾನ್ ಅನ್ನು ಮುಂದುವರಿಸಿದೆ. ಬಡತನದ ಹಿನ್ನೆಲೆಯಲ್ಲಿದ್ದರೂ ಉತ್ತಮ ಅಂಕಗಳನ್ನು ಗಳಿಸಿದವರಿಗೆ ಈ ಯೋಜನೆ ದೊಡ್ಡ ಬಲವಾಗಿದೆ.
ಈ ವಿದ್ಯಾರ್ಥಿವೇತನ ಯೋಜನೆಗೆ ಜನೆರಲ್ ವಿದ್ಯಾರ್ಥಿವೇತನ ಹಾಗೂ ಹುಡುಗಿಯರಿಗೆ ವಿಶೇಷ ವಿದ್ಯಾರ್ಥಿವೇತನ ಎಂಬ ಎರಡು ವಿಭಾಗಗಳಿವೆ. ವಿಶೇಷವಾಗಿ ಮೆಡಿಕಲ್ (MBBS, BDS, BAMS), ಇಂಜಿನಿಯರಿಂಗ್ (BE, B.Tech, B.Arch), ಡಿಗ್ರಿ, ಡಿಪ್ಲೊಮಾ ಹಾಗೂ ವೊಕೇಷನಲ್ ಕೋರ್ಸ್ ಓದುತ್ತಿರುವವರಿಗೆ ಇದು ಅನ್ವಯಿಸುತ್ತದೆ.
2022-23, 2023-24 ಅಥವಾ 2024-25ರಲ್ಲಿ 10ನೇ ಅಥವಾ 12ನೇ ತರಗತಿ 60% ಅಂಕಗಳೊಂದಿಗೆ ಪಾಸ್ ಆಗಿರಬೇಕು. ಪೋಷಕರ ವಾರ್ಷಿಕ ಆದಾಯ ₹4.5 ಲಕ್ಷ ಮೀರಬಾರದು ಎಂಬ ಷರತ್ತು ಕೂಡ ಇದೆ. ಐಟಿಐ, ವೊಕೇಷನಲ್ ಟ್ರೈನಿಂಗ್, ಡಿಪ್ಲೊಮಾ ಸೇರಿದಂತೆ ಮಾನ್ಯತೆ ಪಡೆದ ಯಾವುದೇ ಕೋರ್ಸ್ನಲ್ಲಿ ಪ್ರಥಮ ವರ್ಷ ಓದುತ್ತಿರುವವರು ಅರ್ಹರು.
ವಿಶೇಷವಾಗಿ ಹುಡುಗಿಯರಿಗಾಗಿ ರೂಪಿಸಿರುವ ವಿದ್ಯಾರ್ಥಿವೇತನ ಎರಡು ವರ್ಷಗಳವರೆಗೆ ಮಾನ್ಯ. 10ನೇ ತರಗತಿಯಲ್ಲಿ 60% ಅಂಕಗಳೊಂದಿಗೆ ಪಾಸ್ ಆಗಿ 2025-26 ಶೈಕ್ಷಣಿಕ ವರ್ಷದಲ್ಲಿ ಪಿಯುಸಿ, ಡಿಪ್ಲೊಮಾ ಅಥವಾ ಐಟಿಐ ಮೊದಲನೇ ವರ್ಷ ಓದುತ್ತಿರುವ ಹುಡುಗಿಯರು ಇದಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಸೆಪ್ಟೆಂಬರ್ 22, 2025 ರ ಒಳಗೆ licindia.in ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ತುಂಬಲು ಅಧಿಕೃತ ನೋಟಿಫಿಕೇಶನ್ ಹಾಗೂ ಮಾರ್ಗಸೂಚಿಗಳು ಸೈಟ್ನಲ್ಲಿ ಲಭ್ಯವಿದೆ.
ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ – ಅಧಿಕೃತ ವೆಬ್ಸೈಟ್ ತೆರೆಯಬೇಕು, LIC Golden Jubilee Scholarship 2025 ಲಿಂಕ್ ಕ್ಲಿಕ್ ಮಾಡಬೇಕು, ಬಳಿಕ “Apply Here” ಆಯ್ಕೆ ಮಾಡಿ ಅಗತ್ಯ ಮಾಹಿತಿಗಳನ್ನು ತುಂಬಿ ಫಾರ್ಮ್ ಸಲ್ಲಿಸಬೇಕು.
ಅರ್ಜಿಗೆ ಡೈರೆಕ್ಟ್ ಲಿಂಕ್: https://licindia.in/web/guest/golden-jubilee-foundation



