ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ! ಇನ್ಮುಂದೆ ನಿಮಗೆ ಸಿಗಲಿದೆ ಸರ್ಕಾರದ ಸಹಾಯ ಹಸ್ತ

Loan For Street Vendors : ತಮ್ಮ ಹೊಟ್ಟೆಪಾಡಿಗಾಗಿ ಬೆಳ್ಳಂಬೆಳಿಗ್ಗೆ ಬೀದಿ ಬದಿಗಳಲ್ಲಿ, ರಸ್ತೆಗಳಲ್ಲಿ ತರಕಾರಿ, ಹಣ್ಣು, ಹೂವು ಇದನ್ನೆಲ್ಲ ವ್ಯಾಪಾರ ಮಾಡುವುದನ್ನು ನೋಡಿರುತ್ತೇವೆ. ಆದರೆ ಎಷ್ಟೇ ಮಾಡಿದರು ಈ ಬೀದಿಬದಿ ವ್ಯಾಪಾರಿಗಳ (Street Vendors) ಜೀವನ ನಡೆಸುವುದು ಕೂಡ ಅಷ್ಟೇ ಕಷ್ಟ ಎನ್ನುವ ಹಾಗೆ ಆಗಿರುತ್ತದೆ. ಈ ರೀತಿ ಜೀವನ ನಡೆಸುವ ಬೀದಿಬದಿ ವ್ಯಾಪಾರಿಗಳಿಗೆ ಇದೀಗ ಸರ್ಕಾರದ ಕಡೆಯಿಂದ ಒಂದು ಒಳ್ಳೆಯ ಸುದ್ದಿ ಸಿಕ್ಕಿದೆ.

ಈ ವಿಚಾರದ ಬಗ್ಗೆ ಕೇಂದ್ರದ ರಾಜ್ಯ ಸಚಿವರಾಗಿರುವ ಭಗವತ್ ಕಿಶನ್ ರಾವ್ ಕರಾಡ್ ಅವರು ಮಾಹಿತಿ ನೀಡಿದ್ದು, ನಮ್ಮ ರಾಜ್ಯದಲ್ಲಿ ಸುಮಾರು 3,00,2000 ಪಿಎಮ್ ಯೋಜನೆಯ ಫಲಾನುಭವಿಗಳು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕಡಿಮೆ ಮೇವು ಸೇವಿಸಿ ಹೆಚ್ಚು ಹಾಲು ನೀಡುವ ಹಸು ತಳಿ ಇದು! ಖರ್ಚಿಲ್ಲದೆ ಹೆಚ್ಚು ಲಾಭ ನೀಡುವ ಹಸು

ಈ ಮೂಲಕ ಬೀದಿಬದಿ ವ್ಯಾಪಾರ ಮಾಡುವ, ಕಷ್ಟದಲ್ಲಿರುವ ಜನರಿಗೆ ಸಹಾಯ ಆಗುವ ಹಾಗೆ, ಸಾಲ ನೀಡಬೇಕು (Loan For Street Vendors) ಎಂದು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಕಿಶನ್ ರಾವ್ ಕರಾಡ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಣ್ಣದಾಗಿ ವ್ಯಾಪಾರ ಮಾಡುತ್ತಿರುವ ಜನರಿಗೆ ಸಾಲ ಸೌಲಭ್ಯ (Loan Facility) ನೀಡುವ ಮೂಲಕ ಅವರ ವ್ಯಾಪಾರಕ್ಕೆ ಉತ್ತೇಜನ ನೀಡಿ, ಸಹಾಯ ಮಾಡಿ, ಅವರ ವ್ಯಾಪಾರವನ್ನು ದೊಡ್ಡದಾಗಿ ವೃದ್ಧಿಗೊಳಿಸುವುದು ಸರ್ಕಾರದ ಉದ್ದೇಶ ಆಗಿದೆ.

ಇದಕ್ಕಾಗಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ (Business Loan) ನೀಡುವ ಸಹಾಯ ಮಾಡಲಿದೆ ಸರ್ಕಾರ. ಈ ಯೋಜನೆ ಮತ್ತು ಚಿಂತನೆಯನ್ನು ನಿಜವಾಗುವ ಹಾಗೆ ಮಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯ ಮಾಡಲು ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ..

ಬಿಗ್ ರಿಲೀಫ್! ಚಿನ್ನದ ಬೆಲೆ ಬಾರೀ ಕುಸಿತ, ಅಗ್ಗದ ಬೆಲೆಗೆ ಚಿನ್ನ ಬೆಳ್ಳಿ ಖರೀದಿಸುವ ಸುವರ್ಣ ಅವಕಾಶ

Loan For Street Vendorsಈ ಸಾಲಗಳನ್ನು ಕೆನರಾ ಬ್ಯಾಂಕ್ (Canara Bank Loan) ಇಂದ ಪಡೆಯುವ ಹಾಗೆ ಮಾಡಲು ಚಿಂತನೆ ಮತ್ತು ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳ (Loan From Private Banks) ಜೊತೆಗೂ ಮಾತುಕತೆ ನಡೆಸಿ, ಅವುಗಳ ಮೂಲಕ ಕೂಡ ಬೀದಿಬದಿ ವ್ಯಾಪಾರಿಗಳಿಗೆ ಸಹಾಯ ಆಗುವ ಸಾಲದ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಮಾಹಿತಿ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಎಲ್ಲರು ಕೂಡ ಶ್ರಮವಹಿಸಿ, ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿರುವ ಅವರು, ನಮ್ಮ ರಾಜ್ಯದಲ್ಲಿ ಈಗಾಗಲೇ 68% ಅಷ್ಟು ಈ ಯೋಜನೆ ಯಶಸ್ಸು ಕಂಡಿದೆ ಎಂದು ಕೂಡ ಹೇಳಿದ್ದಾರೆ.

ಭಾರತದಲ್ಲಿನ ಟಾಪ್ 5 ಮೋಟಾರ್‌ ಬೈಕ್​ಗಳು ಇವು! ಯಾವಾಗಲೂ ಗ್ರಾಹಕರ ಹಾರ್ಟ್ ಫೇವರೆಟ್

ಇಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡಲು ಅವರ CIBIL Score ಚೆಕ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಬುಧವಾರದ ದಿವಸ ಈ ಥರದ ವ್ಯಾಪಾರಿಗಳಿಗೆ ಸಹಾಯ ಆಗುವುದಕ್ಕೆ ಸಾಲ ಮೇಳ ಕೂಡ ಅರೇಂಜ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಭೆಯಲ್ಲಿ ನಮ್ಮ ರಾಜ್ಯದವರು ಮಾತ್ರವಲ್ಲ ಹೊರರಾಜ್ಯದ ಪ್ರತಿನಿಧಿಗಳು ಕೂಡ ಭಾಗವಹಿಸುವುದಾಗಿ ಹೇಳಿದ್ದಾರೆ.

ಈಗಿನ ದಿನಗಳಲ್ಲಿ ಬೀದಿಬದಿ ವ್ಯಾಪಾರಿಗಳು ಅನುಭವಿಸುತ್ತಿರುವ ಕಷ್ಟಕ್ಕೆ ಇದು ಒಳ್ಳೆಯ ನಿರ್ಧಾರವೇ ಎನ್ನುವ ಅಭಿಪ್ರಾಯವು ವ್ಯಕ್ತವಾಗುತ್ತಿದೆ.

Loan Facility for street vendors from the government through Canara Bank

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories