ಮಹಿಳೆಯರಿಗೆ ಒಂದು ರೂಪಾಯಿ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ
- ಮಹಿಳೆಯರಿಗೆ ಸಿಗುತ್ತೆ ಬಡ್ಡಿ ರಹಿತ ಸಾಲ
- 3 ಲಕ್ಷ ರೂಪಾಯಿವರೆಗೆ ಸಾಲಕ್ಕೆ 90% ಸಬ್ಸಿಡಿ
- ಸ್ವಂತ ಉದ್ಯಮ ಮಾಡುವ ಮಹಿಳೆಯರಿಗೆ ದಾಖಲೆ ರಹಿತ ಸಾಲ
Loan Scheme : ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು, ಆರ್ಥಿಕವಾಗಿ ಯಾರ ಸಹಾಯವಿಲ್ಲದೆ ತಾವೇ ದುಡಿದು ನೆಮ್ಮದಿಯ ಜೀವನ ನಡೆಸಲು ಇಂದು ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮಹಿಳೆಯರು ಸ್ವಂತ ವ್ಯಾಪಾರ (Own Business) ಆರಂಭಿಸುವುದಕ್ಕಾಗಿ ಲಕ್ಷಗಟ್ಟಲೆ ಸಾಲದ ನೆರವು ನೀಡುತ್ತಿದೆ.
ಒಂದು ಲಕ್ಷದಿಂದ 3 ಲಕ್ಷದವರೆಗೆ ಸಾಲ!
ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಾಲ ಸಿಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹಿಂದುಳಿದ ವರ್ಗದ ಮಹಿಳೆಯರು ಶೇಕಡ 50 ನಷ್ಟು ಸಹಾಯಧನವನ್ನು ಪಡೆದುಕೊಳ್ಳಬಹುದು.
ಇನ್ನು ಮಹಿಳೆಯರು ವಿಶೇಷ ವರ್ಗ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ ಮೂರು ಲಕ್ಷ ಸಾಲಕ್ಕೆ 90% ವರೆಗೂ ಸಬ್ಸಿಡಿ ಪಡೆದುಕೊಳ್ಳಬಹುದು. ಅಂದರೆ ಮೂರು ಲಕ್ಷಕ್ಕೆ ಕೇವಲ ಒಂದುವರೆ ಲಕ್ಷ ರೂಪಾಯಿಗಳನ್ನು ಮರುಪಾವತಿ ಮಾಡಿದರೆ ಸಾಕು. ಅದು ಅಲ್ಲದೆ ಮಹಿಳಾ ರೈತರು ಬಡ್ಡಿ ರಹಿತ ಸಾಲವನ್ನು ಕೂಡ ಪಡೆದುಕೊಳ್ಳಬಹುದು.
ಕೇವಲ 20 ಸಾವಿರ ಸಂಬಳ ಇದ್ರೂ ಈ ಬ್ಯಾಂಕ್ ನೀಡುತ್ತಿದೆ 5 ಲಕ್ಷ ರೂಪಾಯಿ ಸಾಲ
ಉದ್ಯೋಗಿನಿ ಯೋಜನೆ ಅಡಿಯಲ್ಲಿ ಬಡ್ಡಿ ರಹಿತ ಸಾಲ!
ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ನಲ್ಲಿ (Bank Loan) ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಇದಕ್ಕೆ ಯಾವುದೇ ಗ್ಯಾರಂಟಿ ದಾಖಲೆಯನ್ನು ಕೊಡಬೇಕಿಲ್ಲ. ಬಡ್ಡಿ ರಹಿತ ಸಾಲವನ್ನು ಸರ್ಕಾರ ಮಂಜೂರು ಮಾಡುತ್ತಿದೆ ಅದು ಅಲ್ಲದೆ ಒಂದು ಲಕ್ಷ ಸಾಲವನ್ನು ತೆಗೆದುಕೊಳ್ಳುವುದಕ್ಕೆ ಹೆಚ್ಚುವರಿ ದಾಖಲೆಗಳನ್ನು ಆಗಲಿ ಹೆಚ್ಚುವರಿ ಶುಲ್ಕವನ್ನಾಗಲಿ ಪಾವತಿಸುವ ಅಗತ್ಯವಿಲ್ಲ.
ಇನ್ನು ಮಹಿಳೆಯರು ತಮ್ಮ ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸಾಲ ಪಡೆದುಕೊಳ್ಳಬಹುದು. ಅದೇ ರೀತಿ ಒಂಟಿ ಮಹಿಳೆ ಹಾಗೂ ಅಂಗವೈಕಲ್ಯ ಹೊಂದಿರುವ ಮಹಿಳೆಗೆ ಆದಾಯದ ಮಿತಿ ಇಲ್ಲ. 18 ರಿಂದ 55 ವರ್ಷ ವಯಸ್ಸಿನ ನಡುವಿನ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
* ಜಾತಿ ಪ್ರಮಾಣ ಪತ್ರ
* ವಿಳಾಸದ ಪುರಾವೆ
* ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಪಾಸ್ಪೋರ್ಟ್ ಅಳತೆಯ ಫೋಟೋ
* ರೇಷನ್ ಕಾರ್ಡ್
ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಹೀಗೆ ಮಾಡಿ
ಮಹಿಳೆಯರು ಹತ್ತಿರದ ಬ್ಯಾಂಕಿಗೆ ಹೋಗಿ ಅಗತ್ಯ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿಯೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆ. ಸಣ್ಣ ಉದ್ಯೋಗವನ್ನಾದರೂ ಸರಿ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಪಡೆದುಕೊಂಡು ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಇದು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಲಿದೆ.
Loan Scheme up to Rs 3 lakh for women without any interest