ಮನೆಗಳನ್ನು ಬಾಡಿಗೆ ಕೊಟ್ಟ ಮನೆ ಓನರ್ ಗಳಿಗೆ ಬಿಗ್ ಅಲರ್ಟ್! ಹೊಸ ರೂಲ್ಸ್
"12 ವರ್ಷ ನಿಯಮ" ಪ್ರಕಾರ ನಿರ್ಲಕ್ಷ್ಯ ಮಾಡಿದರೆ, ಅಕ್ಕಪಕ್ಕದವರು ಸಹ ಆಸ್ತಿಯ ಹಕ್ಕುದಾರರಾಗಬಹುದಾದ ತೀವ್ರವಾದ ಕಾನೂನು ಸತ್ಯವಿದು.

- 12 ವರ್ಷ ನಿರಂತರ ವಾಸದಿಂದ ಆಸ್ತಿಗೆ ಹಕ್ಕು ಸಿಗುವ ಸಾಧ್ಯತೆ
- ಬಾಡಿಗೆ ಒಪ್ಪಂದ ಇಲ್ಲದಿದ್ದರೆ ಮಾಲೀಕತ್ವಕ್ಕೆ ಇತರರು ಪ್ರಯತ್ನಿಸಬಹುದು
- ಕಾನೂನಾಗಿ ರಕ್ಷಿಸಿಕೊಳ್ಳಲು ದಾಖಲೆ ಮತ್ತು ಪರಿಶೀಲನೆ ಅವಶ್ಯಕ
Rent House: ಬೇರೊಬ್ಬರಿಗೆ ಬಾಡಿಗೆ ಕೊಟ್ಟಿದ್ದ ನಿಮ್ಮ ಮನೆಯಲ್ಲಿ, 12 ವರ್ಷಗಳೂ ಬಾಡಿಗೆದಾರರು ಇದ್ದರೆ, ಆ ಮನೆ ಅವರಿಗೆ ಸ್ವಂತದ್ದಾಗಬಹುದಾ ಎಂಬ ಆಶ್ಚರ್ಯಕರ ಪ್ರಶ್ನೆ ಹಲವರಲ್ಲಿ ಮೂಡಬಹುದು. ಆದರೆ ಇದು ಕೇವಲ ಊಹೆಯಲ್ಲ. ಭಾರತೀಯ ಕಾನೂನಿನಲ್ಲಿ ಇದೆ ಸತ್ಯ. ‘ಪ್ರತಿಕೂಲ ಸ್ವಾಧೀನ’ (adverse possession) ನಿಯಮವೇ ಇದಕ್ಕೆ ಕಾರಣ.
ಹೌದು, ನಿಮ್ಮ ಅನುಮತಿ ಇಲ್ಲದೇ ಯಾರಾದರೂ ನಿಮ್ಮ ಆಸ್ತಿಯನ್ನು (Property) 12 ವರ್ಷ ನಿರಂತರವಾಗಿ, ಬಾಹ್ಯವಾಗಿ ಇಟ್ಟುಕೊಂಡರೆ, ಅವರು ಆ ಆಸ್ತಿಗೆ ಕಾನೂನುಬದ್ಧ ಹಕ್ಕು ಪಡೆಯುವ ಸಾಧ್ಯತೆ ಇದೆ. ನೀವು ಮಧ್ಯದಲ್ಲಿ ಪ್ರತಿರೋಧ ತೋರಿಸದೇ ಇದ್ದರೆ – ಇನ್ನೂ ಗಂಭೀರ.
ಇದನ್ನೂ ಓದಿ: ಪೋಸ್ಟ್ ಆಫೀಸ್ನಲ್ಲಿ ₹10,000 ಡೆಪಾಸಿಟ್ ಇಟ್ಟರೆ, ಎಷ್ಟು ಸಿಗುತ್ತೆ! ಇಲ್ಲಿದೆ ಪಕ್ಕಾ ಲೆಕ್ಕ
ಇದನ್ನು ಕೆಲವರು “12 ವರ್ಷದ ಕಾನೂನು” (12 year rule) ಅಂತ ಕರೆಯುತ್ತಾರೆ. 1963ರ Limitation Act ಪ್ರಕಾರ, ಖಾಸಗಿ ಆಸ್ತಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಸರ್ಕಾರಿ ಜಮೀನಿಗೆ (Government Property) ಇದು ಬೇರೆ, ಅಲ್ಲಿ 30 ವರ್ಷಗಳ ಕಾಲ ಇದ್ದರೂ ಕಾನೂನು ದೃಷ್ಟಿಯಿಂದ ಹಕ್ಕು ಸಿಗುವುದಿಲ್ಲ.
ಇದು ಕೇಳಲು ಆಶ್ಚರ್ಯಕರವಾಗಬಹುದು. ಆದರೆ ಭಾರತದಲ್ಲಿ ‘ಪ್ರತಿಕೂಲ ಸ್ವಾಧೀನ’ (adverse possession) ಎನ್ನುವ ಕಾನೂನು ಪ್ರಕಾರ, ನೀವು ನೋಡಿಕೊಳ್ಳದೆ ಇದ್ದ ನಿಮ್ಮದೇ ಆಸ್ತಿ ಮತ್ತೊಬ್ಬರ ಹೆಸರಿಗೆ ಜಾರಬಹುದು. 12 ವರ್ಷಗಳ ಕಾಲ ನಿರಂತರವಾಗಿ, ಬಾಹ್ಯವಾಗಿ, ನಿಮ್ಮ ಅನುಮತಿ ಇಲ್ಲದೇ ಯಾರಾದರೂ ಆಸ್ತಿಯನ್ನು ಹಿಡಿದಿಟ್ಟುಕೊಂಡರೆ – ಆ ಆಸ್ತಿ ಅವರಿಗೆ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಲೋನ್ ತಗೊಂಡ ವ್ಯಕ್ತಿ ಸತ್ತರೆ, ಬ್ಯಾಂಕ್ ಅವರ ಸಾಲ ಮನ್ನಾ ಮಾಡುತ್ತಾ?
ಈ ಕಾನೂನಿನಲ್ಲೇ twist ಏನೆಂದರೆ – ಕೆಲವೊಮ್ಮೆ ಬಾಡಿಗೆದಾರರು ಸಹ ಈ ನಿಯಮದ ಅಡಿಯಲ್ಲಿ ಮಾಲೀಕತ್ವದ ಹಕ್ಕಿಗೆ ಪ್ರಯತ್ನಿಸಬಹುದು. ನೀವು 11 ತಿಂಗಳ ಬಾಡಿಗೆ ಒಪ್ಪಂದ (rental agreement) ಇಲ್ಲದೇ ಮನೆ ಕೊಟ್ಟಿದ್ದರೆ, ಮತ್ತು ಅವರು 12 ವರ್ಷಗಳಿಂದ ನಿಮ್ಮ ಪ್ರತಿರೋಧವಿಲ್ಲದೇ ವಾಸವಿದ್ದರೆ, ಅವರೇ ಮಾಲೀಕರಂತೆ ಕಾನೂನು ಮೂಲಕ ದಾಖಲೆ ಮಾಡಿಕೊಳ್ಳಬಹುದು!
ಇದನ್ನು ತಡೆಯೋದು ಹೇಗೆ?
ಪ್ರತಿಯೊಬ್ಬ ಮಾಲೀಕರೂ ಕಲಿಯಬೇಕಾದ ಮೊದಲ ಪಾಠ – ಎಲ್ಲಾ ಬಾಡಿಗೆ ಒಪ್ಪಂದಗಳನ್ನು ರಿಜಿಸ್ಟರ್ ಮಾಡಿ. ಖಾಲಿ ಮನೆ, ಜಮೀನಿಗೆ fencing ಹಾಕಿ, Private Property – Trespassers will be Prosecuted ಬೋರ್ಡ್ ಇಡಿ. ನಿಯಮಿತವಾಗಿ ನಿಮ್ಮ ಆಸ್ತಿ ಪರಿಶೀಲಿಸಿ.
ಯಾರಾದರೂ ಜಮೀನನ್ನು (property) ಅಕ್ರಮವಾಗಿ ಪ್ರವೇಶಿಸಿದರೆ, ನೋಟಿಸ್ (legal notice) ನೀಡಿ. ಹಗುರವಾಗಿ ನೋಡಿದ್ರೆ ಬೇರೆ ಹಂಗಾಮಿ ವ್ಯಕ್ತಿ ನಿಮ್ಮ ಆಸ್ತಿಯನ್ನು documentation-ನೊಂದಿಗೆ ದಾವೆ ಹೂಡಬಹುದು.
ಇದನ್ನೂ ಓದಿ: ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್! ನಾಳೆಯಿಂದಲೇ ಹೊಸ ರೂಲ್ಸ್
ಸುಪ್ರೀಂ ಕೋರ್ಟ್ನ ಹಲವಾರು ತೀರ್ಪುಗಳಲ್ಲಿ ಈ ನಿಯಮದ ಜಟಿಲತೆ ಸಾಬೀತಾಗಿದೆ. ಹೌದು, 12 ವರ್ಷಗಳ ವಾಸ, ಮಾಲೀಕರ ವಿರೋಧವಿಲ್ಲದೇ ಇದ್ದಾಗ – ಹಕ್ಕು ಕಾನೂನಾತ್ಮಕವಾಗಬಹುದು.
ಅಂತಿಮವಾಗಿ, ನಿಮ್ಮ ಮನೆ ನಿಮ್ಮದೇ ಆಗಿರಲಿ ಎನ್ನುವುದಾದರೆ, ಕೇವಲ ಕಾಗದಗಳಲ್ಲ, ನಿಮ್ಮ ಪ್ರತಿಕ್ರಿಯೆಗಳಲ್ಲೂ ಹಕ್ಕು ತೋರಿಸಬೇಕು. ಇಲ್ಲದಿದ್ದರೆ ನಿಮ್ಮ ‘ಸೊತ್ತೇ’ ಇನ್ನೊಬ್ಬರಆಸ್ತಿ ಆಗಿಬಿಡಬಹುದು.
Lose Your House in 12 Years? Property Law You Must Know




