ಬಿಗ್ ಅಲರ್ಟ್! ಮಾರ್ಚ್ 1ರಿಂದ ಹೊಸ ಹೊಸ ನಿಯಮಗಳು, ಮಹತ್ವದ ಬದಲಾವಣೆ
ಮಾರ್ಚ್ 1ರಿಂದ ಹಲವು ಆರ್ಥಿಕ ಹಾಗೂ ದಿನನಿತ್ಯದ ನಿಯಮಗಳಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಬ್ಯಾಂಕುಗಳ ಎಫ್‌ಡಿ ಬಡ್ಡಿ ದರಗಳಿಂದ ಹಿಡಿದು ಎಲ್‌ಪಿಜಿ, ಸಿಎನ್‌ಜಿ ದರಗಳವರೆಗೆ ಹಲವು ನಿಯಮಗಳು ಮಾರ್ಪಡಿವೆ.
- ಎಫ್‌ಡಿ ಬಡ್ಡಿ ದರಗಳಲ್ಲಿ ಬದಲಾವಣೆ, ನಿಮ್ಮ ಹಣದ ಮೇಲೆ ಪ್ರಭಾವ
- ಎಲ್‌ಪಿಜಿ, ಸಿಎನ್‌ಜಿ ದರ ಪರಿಷ್ಕರಣೆ, ಹೊಸ ದರಗಳಿಗಾಗಿ ಸಿದ್ಧರಾಗಿ
- ಮ್ಯೂಚುವಲ್ ಫಂಡ್, ಡೀಮ್ಯಾಟ್ ಖಾತೆಗಳ ಹೊಸ ನಿಯಮಗಳು ಜಾರಿಗೆ
“ಒಂದು ದಿನದಲ್ಲಿ ಹೊಸ ತಿಂಗಳು ಪ್ರಾರಂಭ ಆಗ್ತಾ ಇದೆ! ಮಾರ್ಚ್ 1 ಬಂದರೆ ಸಾಕು, ನಮ್ಮ ಹಣಕಾಸು ಸಂಬಂಧಿತ ನಿಯಮಗಳಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳು ಆಗುತ್ತಿವೆ.
ಎಫ್‌ಡಿ ಬಡ್ಡಿ ದರಗಳಿಂದ ಹಿಡಿದು ಎಲ್‌ಪಿಜಿ ದರಗಳವರೆಗೆ ಹಲವು ನಿಯಮಗಳು ಪರಿಷ್ಕಾರಗೊಳ್ಳುತ್ತವೆ. ಈ ಬದಲಾವಣೆಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ? ಚಿಂತೆ ಬೇಡ, ಇಲ್ಲಿದೆ ಸಂಪೂರ್ಣ ಮಾಹಿತಿ!”
ಇದನ್ನೂ ಓದಿ: ಬ್ಯಾಂಕುಗಳೇ ಕರೆದು ಸಾಲ ಕೊಡುವ ಟ್ರಿಕ್ ಇದು, 5 ನಿಮಿಷಕ್ಕೆ ಲೋನ್ ಸಿಗುತ್ತೆ!
ಎಫ್‌ಡಿ (Fixed Deposit) ಹೊಸ ನಿಯಮಗಳು
ನೀವು ಎಫ್‌ಡಿ ಮಾಡಿರುವವರು ಅಥವಾ ಮುಂದಿನ ದಿನಗಳಲ್ಲಿ ಮಾಡುವ ಯೋಚನೆ ಇಟ್ಟಿದ್ದರೆ, ಈ ಹೊಸ ನಿಯಮಗಳನ್ನು ತಪ್ಪದೆ ಗಮನಿಸಬೇಕು. ಮಾರ್ಚ್ 2025 ರಿಂದ ಬ್ಯಾಂಕುಗಳ ಎಫ್‌ಡಿ ಬಡ್ಡಿ ದರಗಳಲ್ಲಿ (Interest Rate) ಬದಲಾವಣೆ ಆಗಲಿದೆ. ಇದು ನಿಮ್ಮ ಬಂಡವಾಳದ ಮೇಲಿನ ಲಾಭ ಹಾಗೂ ಟ್ಯಾಕ್ಸ್ (Tax) ಪಾಲಿಸಿಗಳ ಮೇಲೆ ಪರಿಣಾಮ ಬೀರುತ್ತದೆ.
ಹಿರಿಯ ನಾಗರಿಕರು ಅಥವಾ ಆಲ್ಪಾವಧಿಯ (5 ವರ್ಷ ಅಥವಾ ಕಡಿಮೆ) ಎಫ್‌ಡಿ ಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇದೆ. ಕೆಲ ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸಬಹುದು, ಕೆಲವೆಡೆ ಕಡಿಮೆಯಾಗಬಹುದು. ಹಾಗಾಗಿ ಹೊಸ ದರಗಳ ಬಗ್ಗೆ ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: ಕೇವಲ 250 ರೂಪಾಯಿಗೆ ಎಸ್‌ಬಿಐ ಕೊಡುತ್ತೆ ಲಕ್ಷಗಳಲ್ಲಿ ಆದಾಯ! ಬಂಪರ್ ಸ್ಕೀಮ್
ಎಲ್‌ಪಿಜಿ (LPG) ಹಾಗೂ ಇಂಧನ ದರ ಪರಿಷ್ಕರಣೆ
ಪ್ರತಿಯೊಂದು ತಿಂಗಳ ಮೊದಲ ದಿನ ಕಂಪನಿಗಳು ಎಲ್‌ಪಿಜಿ (LPG) ದರಗಳನ್ನು ಪರಿಷ್ಕರಿಸುತ್ತವೆ. ಈ ಬಾರಿ ಮಾರ್ಚ್ 1, 2025ರಿಂದ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಹೊಸ ದರಗಳು ಬೆಳಗ್ಗೆ 6 ಗಂಟೆಗೆ ಪ್ರಕಟವಾಗಬಹುದು.
ಇಷ್ಟೇ ಅಲ್ಲ, CNG-PNG (Compressed Natural Gas – Piped Natural Gas) ಹಾಗೂ ಎಯರ್ ಟರ್ಬೈನ್ ಫ್ಯುಯೆಲ್ (ATF) ದರಗಳೂ ಮಾರ್ಪಡಾಗಬಹುದು. ಸಾಮಾನ್ಯವಾಗಿ ಪ್ರತಿ ತಿಂಗಳ 1ನೇ ತಾರೀಖಿಗೆ ಈ ಇಂಧನ ದರಗಳನ್ನು ಪರಿಷ್ಕರಿಸಲಾಗುತ್ತದೆ. ಇದರಿಂದ ಪ್ರಯಾಣ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕಿ.ಮೀ.ವರೆಗೆ ಜನರ ಕ್ಯೂ! 50 ಲಕ್ಷ ಹೋಮ್ ಲೋನ್ ಆಫರ್, EMI ಮೇಲೂ 2000 ಕಡಿತ
ಮ್ಯೂಚುವಲ್ ಫಂಡ್, ಡೀಮ್ಯಾಟ್ ಖಾತೆಗಳ ಹೊಸ ನಿಯಮಗಳು
ಮ್ಯೂಚುವಲ್ ಫಂಡ್ ಅಥವಾ ಡೀಮ್ಯಾಟ್ ಖಾತೆ ಹೊಂದಿರುವ ಗ್ರಾಹಕರಿಗೆ ನಾಮಿನಿ (Nominee) ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲಿವೆ. SEBI (Securities and Exchange Board of India) ಹೊಸ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.
ಮಾರ್ಚ್ 1, 2025 ರಿಂದ, ನಾಮಿನಿ ಹೊಂದಿರುವುದು ಕಡ್ಡಾಯವಾಗಲಿದೆ. ಇದರಿಂದ ಖಾತೆದಾರರ ಅನಾರೋಗ್ಯ ಅಥವಾ ಮರಣದ ಸಂದರ್ಭದಲ್ಲಿ ಆಸ್ತಿ ವರ್ಗಾವಣೆಯು ಸುಗಮವಾಗಲಿದೆ.
Our Whatsapp Channel is Live Now 👇