ಕಿ.ಮೀ.ವರೆಗೆ ಜನರ ಕ್ಯೂ! 50 ಲಕ್ಷ ಹೋಮ್ ಲೋನ್ ಆಫರ್, EMI ಮೇಲೂ 2000 ಕಡಿತ
ಇತ್ತೀಚೆಗೆ ಹಲವಾರು ಬ್ಯಾಂಕುಗಳು ಗೃಹಸಾಲದ ಬಡ್ಡಿದರವನ್ನು ಕಡಿಮೆ ಮಾಡಿವೆ. ಕನಿಷ್ಟ ಈ 6 ಬ್ಯಾಂಕುಗಳು ಎಸ್‌ಬಿಐಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದ್ದು, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
- ಎಸ್‌ಬಿಐಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹರಿಣ ನೀಡುತ್ತಿರುವ 6 ಬ್ಯಾಂಕುಗಳು
- ಯೂನಿಯನ್ ಬ್ಯಾಂಕ್ 8.1% ಬಡ್ಡಿದರದಲ್ಲಿ ಗೃಹರಿಣ ನೀಡುತ್ತಿದೆ
- ಖರೀದಿದಾರರ ಕ್ರೆಡಿಟ್ ಸ್ಕೋರ್ ಆಧರಿಸಿ ಬಡ್ಡಿದರ ನಿರ್ಧಾರ
Home Loan : ಹೊಸ ಮನೆ ಕನಸು ನಿಜವಾಗಿಸಿಕೊಳ್ಳಲು ಬಂಪರ್ ಅವಕಾಶ, ನಿಮ್ಮ ಖುಷಿ ಹತ್ತು ಪಟ್ಟು ಹೆಚ್ಚಿಸುವ ಸುದ್ದಿ ಇದು! ಇತ್ತೀಚೆಗೆ ಹಲವಾರು ಬ್ಯಾಂಕುಗಳು ಗೃಹಸಾಲದ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಖರೀದಿದಾರರಿಗೆ ಉತ್ತಮ ಅವಕಾಶ ಒದಗಿಸುತ್ತಿದೆ.
ವಿಶೇಷವಾಗಿ, ಕನಿಷ್ಠ 6 ಸರ್ಕಾರಿ ಬ್ಯಾಂಕುಗಳು ಎಸ್‌ಬಿಐಗಿಂತ (SBI Bank) ಕಡಿಮೆ ಬಡ್ಡಿದರದಲ್ಲಿ ಗೃಹಸಾಲ (Home Loans) ನೀಡುತ್ತಿವೆ.
ಇದನ್ನೂ ಓದಿ: ಆಕಾಶದೆತ್ತರಕ್ಕೆ ಜಿಗಿದಿದ್ದ ಚಿನ್ನದ ಬೆಲೆ ರಾತ್ರೋ-ರಾತ್ರಿ ಪಾತಾಳಕ್ಕೆ ಕುಸಿತ! ಬಂಪರ್ ಸುದ್ದಿ
ಕೇಂದ್ರ ಬ್ಯಾಂಕ್ ರೆಪೋ ದರವನ್ನು 0.25% ಕಡಿಮೆ ಮಾಡಿದ ಬೆನ್ನಲ್ಲೇ, ಈ ಬ್ಯಾಂಕುಗಳು ತಮ್ಮ ಗೃಹಸಾಲದ ಬಡ್ಡಿದರವನ್ನು ತಗ್ಗಿಸಿವೆ. ಈ ಪಟ್ಟಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಪ್ರಮುಖ.
ಎಸ್‌ಬಿಐ ಈಗ 8.25% ಬಡ್ಡಿದರದಲ್ಲಿ ಗೃಹಸಾಲ (Home Loan Interest) ನೀಡುತ್ತಿದ್ದು, ಯೂನಿಯನ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 8.1% ದರದಲ್ಲಿ ಲೋನ್ ಒದಗಿಸುತ್ತಿವೆ. ಇನ್ನು ಇತರ ಸರ್ಕಾರಿ ಬ್ಯಾಂಕುಗಳು 8.15% ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದ್ದು, ಖರೀದಿದಾರರಿಗೆ ಇದು ದೊಡ್ಡ ಅವಕಾಶವಾಗಿದೆ.
ಇದನ್ನೂ ಓದಿ: ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ 40,000 ವರೆಗೆ ಕ್ಯಾಶ್‌ಬ್ಯಾಕ್ ಆಫರ್!
ಪ್ರೈವೇಟ್ ಬ್ಯಾಂಕುಗಳ ಬಡ್ಡಿದರ ಹೇಗಿದೆ?
ಪ್ರೈವೇಟ್ ಬ್ಯಾಂಕುಗಳ ಬಗ್ಗೆ ನೋಡುವುದಾದರೆ HDFC, ICICI, Kotak Mahindra, Axis Bank 8.75% ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿವೆ. ಉದಾಹರಣೆಗೆ, 20 ವರ್ಷಗಳ ಅವಧಿಗೆ ₹50 ಲಕ್ಷ ಗೃಹಸಾಲ ಪಡೆಯಲು ಪ್ರೈವೇಟ್ ಬ್ಯಾಂಕುಗಳಲ್ಲಿ ₹44,185 EMI ಪಾವತಿಸಬೇಕಾಗುತ್ತದೆ, ಆದರೆ ಯೂನಿಯನ್ ಬ್ಯಾಂಕ್‌ನಲ್ಲಿ (Banka) ಇದೇ ಲೋನ್‌ಗಾಗಿ ₹42,133 ಮಾತ್ರ EMI ಆಗುತ್ತದೆ.
ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಲೋನ್ ಪಡೆಯೋರಿಗೆ ಭಾರೀ ಬೆನಿಫಿಟ್ಸ್! ಬಂಪರ್ ಆಫರ್
ಹೀಗಾಗಿ, ಗೃಹಸಾಲ ಪಡೆಯಲು ಯೋಜಿಸುತ್ತಿರುವವರು ಬ್ಯಾಂಕುಗಳ ಬಡ್ಡಿದರಗಳನ್ನು ಹೋಲಿಸಿ, ಕಡಿಮೆ ದರದಲ್ಲಿ ಲೋನ್ ಪಡೆಯಲು ಮುಂದಾಗಬಹುದು. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ, ಮತ್ತಷ್ಟು ಕಡಿಮೆ ಬಡ್ಡಿದರ ಲಾಭ ಪಡೆಯುವ ಅವಕಾಶವೂ ಇದೆ!
Banks Offering Lower Interest Rates on Home Loan
Our Whatsapp Channel is Live Now 👇