ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ 40,000 ವರೆಗೆ ಕ್ಯಾಶ್‌ಬ್ಯಾಕ್ ಆಫರ್!
ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ನ ಹೊಸ 'ಪರ್ಫೆಕ್ಟ್ 10' ರಿಫರಲ್ ಯೋಜನೆಯ ಮೂಲಕ ಗ್ರಾಹಕರು ರೂ.40,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ. ಮಾರ್ಚ್ 31ರ ಒಳಗೆ ಆಫರ್ ಲಾಭ ಪಡೆಯಿರಿ.
- ಪ್ಯೂರ್ ಪರ್ಫೆಕ್ಟ್ 10 ಯೋಜನೆ ಮೂಲಕ ರೂ.40,000 ವರೆಗೆ ಕ್ಯಾಶ್‌ಬ್ಯಾಕ್
- ಮಾರ್ಚ್ 31ರವರೆಗೆ ಮಾತ್ರ ಆಫರ್ ಲಭ್ಯವಿದೆ
- ಪ್ರತಿ ರಿಫರಲ್‌ಗೆ ರೂ.4,000 ಕ್ಯಾಶ್‌ಬ್ಯಾಕ್ ವೋಚರ್
PURE Electric Scooter: ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಪರಿಸರ ಸಂರಕ್ಷಣೆ ಎಂಬ ಹೋರಾಟದಲ್ಲಿ ಇ-ವಾಹನಗಳು ದೊಡ್ಡ ಭೂಮಿಕೆಯನ್ನು ವಹಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ನ ಈ ಹೊಸ ಆಫರ್ (Big Cashback Offer) ಗ್ರಾಹಕರನ್ನು ಆಕರ್ಷಿಸುವುದು ಖಚಿತ.
“ಪ್ಯೂರ್ ಪರ್ಫೆಕ್ಟ್ 10” ಯೋಜನೆಯೊಂದಿಗೆ ಗ್ರಾಹಕರು ಕಡಿಮೆ ವೆಚ್ಚದಲ್ಲಿ ಈವಿಯನ್ನು (Electric Scooter) ಖರೀದಿಸುವ ಜೊತೆಗೆ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು.
ಇದನ್ನೂ ಓದಿ: ಆಕಾಶದೆತ್ತರಕ್ಕೆ ಜಿಗಿದಿದ್ದ ಚಿನ್ನದ ಬೆಲೆ ರಾತ್ರೋ-ರಾತ್ರಿ ಪಾತಾಳಕ್ಕೆ ಕುಸಿತ! ಬಂಪರ್ ಸುದ್ದಿ
ಈ ಆಫರ್ ಎಲ್ಲ ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ನ (Pure Electric) ಪ್ರಸ್ತುತ ಗ್ರಾಹಕರು ಮತ್ತು 2025ರ ಮಾರ್ಚ್ 31ರೊಳಗೆ ಪ್ಯೂರ್ ಈವಿ ಖರೀದಿಸುವ ಹೊಸ ಗ್ರಾಹಕರಿಗೆ ಲಭ್ಯವಿದೆ. ಸ್ಟಾಕ್ ಇರುವವರೆಗೆ ಮಾತ್ರ ಆಫರ್ ಪ್ರಸ್ತುತವಾಗಿರುವುದರಿಂದ ವೇಗವಾಗಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಇನ್ನು ಆಫರ್‌ನ ವಿಶೇಷತೆ ಏನೆಂದರೆ, ಪ್ರತಿ ಗ್ರಾಹಕರಿಗೆ ಅವರ ನೋಂದಾಯಿತ ವಾಟ್ಸಾಪ್ ಸಂಖ್ಯೆಗೆ 10 ರಿಫರಲ್ ಕೋಡ್‌ಗಳನ್ನು ನೀಡಲಾಗುತ್ತದೆ. ಪ್ರತಿ ಯಶಸ್ವಿ ರಿಫರಲ್‌ಗೆ ರೂ.4,000 ಕ್ಯಾಶ್‌ಬ್ಯಾಕ್ ವೋಚರ್ ಲಭ್ಯವಿದ್ದು, ಒಬ್ಬ ಗ್ರಾಹಕ ಗರಿಷ್ಠ 10 ಜನರ ವರೆಗೆ ರಿಫರ್ ಮಾಡಬಹುದು. ಇದರಿಂದ ಗ್ರಾಹಕರು ಒಟ್ಟು ರೂ.40,000 ವರೆಗೆ ಲಾಭ ಪಡೆಯಬಹುದು.
ಇದನ್ನೂ ಓದಿ: ಹೆಂಡತಿ ಹೆಸರಿನಲ್ಲಿ ಲೋನ್ ಪಡೆಯೋರಿಗೆ ಭಾರೀ ಬೆನಿಫಿಟ್ಸ್! ಬಂಪರ್ ಆಫರ್
ಪ್ಯೂರ್ ಸಹಸಂಸ್ಥಾಪಕರಾದ ರೋಹಿತ್ ವದೆರಾ ಮಾತನಾಡುತ್ತಾ, “ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದರ ಜೊತೆಗೆ ಗ್ರಾಹಕರು ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್‌ಗಳ ಲಾಭವನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಭಾರತದಾದ್ಯಂತ ಈವಿ ಬಳಕೆ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್‌ಬಿಐ ಅಕೌಂಟ್ ಇದ್ದೋರಿಗೆ 35 ಲಕ್ಷ ಲೋನ್ ಆಫರ್! ಬೇರೆ ಡಾಕ್ಯುಮೆಂಟ್ಸ್ ಬೇಕಿಲ್ಲ
ಹೀಗಾಗಿ, ಶಿವರಾತ್ರಿ, ಹೋಳಿ, ಉಗಾದಿ ಹಾಗೂ ರಂಜಾನ್ ಹಬ್ಬಗಳ ಸೀಸನ್‌ನಲ್ಲಿ ಪ್ಯೂರ್ ಆಫರ್ (Pure EV Offer) ನಿಮಗಾಗಿ ಸಿದ್ಧವಾಗಿದೆ. ಈ ಆಫರ್ ತಪ್ಪಿಸಿಕೊಳ್ಳಬೇಡಿ – ಇದೊಂದು ದುಬಾರಿಯ ಲಾಭದ ಅವಕಾಶ!
Our Whatsapp Channel is Live Now 👇