ಹೆಂಡತಿ ಹೆಸರಿನಲ್ಲಿ ಲೋನ್ ಪಡೆಯೋರಿಗೆ ಭಾರೀ ಬೆನಿಫಿಟ್ಸ್! ಬಂಪರ್ ಆಫರ್
Loan: ಹೆಂಡತಿ ಹೆಸರಿನಲ್ಲಿ ಲೋನ್ ತೆಗೆದುಕೊಂಡರೆ ಕಡಿಮೆ ಬಡ್ಡಿದರ ಮತ್ತು ಸ್ಟ್ಯಾಂಪ್ ಡ್ಯೂಟಿ ರಿಯಾಯಿತಿ ಪಡೆಯಬಹುದು. ಹೆಚ್ಚು ಹಣ ಉಳಿಸಲು ಈ ಉಪಾಯಗಳನ್ನು ಪ್ರಯೋಗಿಸಿ.
- ಹೆಂಡತಿ ಹೆಸರಿನಲ್ಲಿ ಲೋನ್ ಮೇಲೆ ಬಂಪರ್ ಆಫರ್
- ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದಲ್ಲಿ ವಿಶೇಷ ರಿಯಾಯಿತಿ
- ಗೃಹ ಸಾಲದ ಬಡ್ಡಿದರದ ಮೇಲೆ ಆಕರ್ಷಕ ರಿಯಾಯಿತಿ
Loan: ಲೋನ್ ತಗೊಳ್ಳುವ ಸಮಯದಲ್ಲಿ ಸಣ್ಣ ತಂತ್ರಗಳನ್ನು ಬಳಸಿದರೆ ಲಕ್ಷಾಂತರ ರೂಪಾಯಿ ಉಳಿಸಬಹುದು ಎಂಬುದು ನಿಮಗೆ ಗೊತ್ತೆ? ಹೌದು! ಹೆಂಡತಿ ಹೆಸರಿನಲ್ಲಿ ಲೋನ್ (Loan in Wife Name) ತೆಗೆದುಕೊಳ್ಳುವುದರಿಂದ ಎಷ್ಟೋ ಹಣವನ್ನು ಉಳಿಸಬಹುದು.
ಮೊದಲು ಶಿಕ್ಷಣ ಸಾಲದ (Education Loan) ಬಗ್ಗೆ ಮಾತನಾಡೋಣ. ಹೆಂಡತಿ ಹೆಸರಿನಲ್ಲಿ ಶಿಕ್ಷಣ ಸಾಲ ತೆಗೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಸೆಕ್ಷನ್ 80C ಅಡಿಯಲ್ಲಿ ಬಡ್ಡಿದರದ ಮೇಲೆ 8 ವರ್ಷಗಳ ಕಾಲ ತೆರಿಗೆ ವಿನಾಯಿತಿ ಪಡೆಯಬಹುದು. ಇದರಿಂದ ವಿದ್ಯಾಭ್ಯಾಸಕ್ಕಾಗಿ ಸಾಲ ತಗೊಳ್ಳುವವರು ಎಷ್ಟೋ ಹಣವನ್ನು ಉಳಿಸಬಹುದು.
ಇದನ್ನೂ ಓದಿ: ಎಸ್‌ಬಿಐ ಅಕೌಂಟ್ ಇದ್ದೋರಿಗೆ 35 ಲಕ್ಷ ಲೋನ್ ಆಫರ್! ಬೇರೆ ಡಾಕ್ಯುಮೆಂಟ್ಸ್ ಬೇಕಿಲ್ಲ
ಇನ್ನು ಗೃಹ ಸಾಲದ (Home Loan) ಬಗ್ಗೆ ಮಾತನಾಡುವುದಾದರೆ, ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಸಾಲ ತಗೊಳ್ಳುವುದರಿಂದ ರೂ.2 ಲಕ್ಷವರೆಗೆ ಬಡ್ಡಿದರದ ತೆರಿಗೆ ವಿನಾಯಿತಿ ಸಿಗುತ್ತದೆ. ಜೊತೆಗೆ, ರೂ.1.5 ಲಕ್ಷವರೆಗೆ ಪ್ರಾಥಮಿಕ ಸಾಲದ ಮೇಲಿನ ತೆರಿಗೆಯಲ್ಲಿ ಕೂಡ ವಿನಾಯಿತಿ ಪಡೆಯಬಹುದು. ಇದರಿಂದ ಪ್ರತಿ ವರ್ಷ ಸಾವಿರಾರು ರೂಪಾಯಿ ಉಳಿಯುತ್ತದೆ.
ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕದಲ್ಲಿಯೂ ಹೆಚ್ಚಿನ ರಿಯಾಯಿತಿ ದೊರೆಯುತ್ತದೆ. ಆದರೆ, ಆಸ್ತಿಯ ಸಹ-ಯಾಜಮಾನ್ಯದಲ್ಲಿ ಮಹಿಳೆಯ ಹೆಸರು ಇರಬೇಕು. ಈ ವಿಶೇಷ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ಹಣಕಾಸು ಯೋಜನೆಗಳಲ್ಲಿ ಉಳಿಸುವುದನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ: ಇಲ್ಲಿದೆ ಸಾವಿರದಿಂದ ಲಕ್ಷ ಲಕ್ಷ ದುಡ್ಡು ಮಾಡೋ ಸೀಕ್ರೆಟ್! ಯಾರಿಗೂ ಹೇಳಬೇಡಿ
ಆದ್ರೆ, ಎಲ್ಲಾ ಬ್ಯಾಂಕುಗಳಲ್ಲಿ ಇಲ್ಲವೇ ಎಲ್ಲಾ ಸಂಸ್ಥೆಗಳಲ್ಲಿ ಈ ಸೌಲಭ್ಯಗಳು ಲಭ್ಯವಿಲ್ಲ. ಸರ್ಕಾರಿ ಬ್ಯಾಂಕುಗಳು ಮತ್ತು ಸರ್ಕಾರದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಗಳಿಂದಲೇ ಲೋನ್ ಪಡೆಯುವುದು ಸೂಕ್ತ. ನೀವು ನೇರವಾಗಿ ಬ್ಯಾಂಕ್‌ಗೆ ಹೋಗಿ ಎಲ್ಲ ವಿವರಗಳನ್ನು ತಿಳಿದುಕೊಳ್ಳಬಹುದು.
ಹೀಗಾಗಿ, ನಿಮ್ಮ ಹೆಂಡತಿಯ ಹೆಸರಿನಲ್ಲಿ ಲೋನ್ ಪಡೆಯುವುದು ಮಾತ್ರವಲ್ಲ, ಹಣ ಉಳಿತಾಯವೂ ಮಾಡಿ. ಈ ಸ್ಮಾರ್ಟ್ ಉಪಾಯದಿಂದ ನಿಮ್ಮ ಕನಸಿನ ಮನೆ (Home Loan) ಅಥವಾ ಶಿಕ್ಷಣ ಸಾಲ (Education Loan) ಸುಲಭವಾಗಿ ಪಡೆಯಬಹುದು.
Save Big with Loans in Your Wife Name
Our Whatsapp Channel is Live Now 👇