ಇಲ್ಲಿದೆ ಸಾವಿರದಿಂದ ಲಕ್ಷ ಲಕ್ಷ ದುಡ್ಡು ಮಾಡೋ ಸೀಕ್ರೆಟ್! ಯಾರಿಗೂ ಹೇಳಬೇಡಿ
ಪ್ರತಿ ತಿಂಗಳು ಕೇವಲ ₹1,000 ಹೂಡಿಕೆಯಿಂದ 15 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಪಡೆಯಬಹುದು. ಪಿಪಿಎಫ್ ಯೋಜನೆಯ ಲಾಭಗಳು, ಬಡ್ಡಿದರ ವಿವರಗಳು ಹಾಗೂ ಹಣ ಹೇಗೆ ಹೆಚ್ಚಿಸಬಹುದು ಎಂಬ ಬಗ್ಗೆ ತಿಳಿದುಕೊಳ್ಳಿ.
- ಪಿಪಿಎಫ್‌ನಲ್ಲಿ ಹೂಡಿಕೆ ಮೂಲಕ ಭವಿಷ್ಯದಲ್ಲಿ ಭದ್ರತೆ
- ಪ್ರತಿ ತಿಂಗಳು ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಲಾಭ
- ಪಿಪಿಎಫ್ ಖಾತೆ ತೆರೆಯಲು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಆಯ್ಕೆ
ನೀವು ತಿಂಗಳಿಗೆ ಕೇವಲ ₹1,000 ಹೂಡಿಕೆಯನ್ನು ಪ್ರಾರಂಭಿಸಿದರೆ, 15 ವರ್ಷಗಳಲ್ಲಿ ₹3.25 ಲಕ್ಷ ಪಡೆಯಬಹುದು ಅಂದ್ರೆ ನಂಬುತ್ತೀರಾ? ಹೌದು! ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಯೋಜನೆಯಿಂದ ಇದು ಸಾಧ್ಯ. ಇದೊಂದು ಸುರಕ್ಷಿತ ಹೂಡಿಕೆ ಆಯ್ಕೆ ಮಾತ್ರವಲ್ಲದೆ, ಸ್ಥಿರವಾದ ಬಡ್ಡಿ ಮತ್ತು ತೆರಿಗೆ ರಹಿತ ಲಾಭಗಳನ್ನು ನೀಡುತ್ತದೆ.
ಇನ್ನು ಪಿಪಿಎಫ್ ಯೋಜನೆಯ (PPF Scheme) ಬಡ್ಡಿದರವನ್ನು ಸರ್ಕಾರ ತ್ರೈಮಾಸಿಕವಾಗಿ ಪರಿಷೀಲಿಸುತ್ತದೆ. ಪ್ರಸ್ತುತ ಇದು ವರ್ಷಕ್ಕೆ 7.1% ಬಡ್ಡಿಯನ್ನು ನೀಡುತ್ತಿದೆ. ವಿಶೇಷವೆಂದರೆ, ಈ ಬಡ್ಡಿದರ ಸಂಯುಕ್ತ ಬಡ್ಡಿಯಾಗಿ ಲೆಕ್ಕ ಹಾಕಲಾಗುತ್ತದೆ, ಅದರಿಂದ ನಿಮ್ಮ ಹಣ ಹೆಚ್ಚು ವೇಗದಲ್ಲಿ ಬೆಳೆಯುತ್ತದೆ. ಪ್ರತಿವರ್ಷ ಕನಿಷ್ಠ ₹500 ರಿಂದ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ: ಬ್ಯಾಂಕುಗಳಲ್ಲಿ ಚಿನ್ನಾಭರಣ ಗಿರವಿ ಇಡುವುದಕ್ಕೆ ಕಠಿಣ ನಿಯಮ, ಬಡವರಿಗೆ ಆತಂಕ
ಹೂಡಿಕೆಯಿಂದ (Investment) ಲಾಭ ಎಷ್ಟು? ಪ್ರತಿ ತಿಂಗಳು ₹5,000 ಹೂಡಿಸಿದರೆ, 15 ವರ್ಷಗಳಲ್ಲಿ ₹16.27 ಲಕ್ಷ ಹಣ ನಿಮ್ಮ ಖಾತೆಯಲ್ಲಿ ಇರಲಿದೆ. ₹10,000 ಹೂಡಿಸಿದರೆ, ₹32.54 ಲಕ್ಷದಷ್ಟು ಹಣ ನಿಮ್ಮದಾಗಲಿದೆ. ಇದು ಹೂಡಿಕೆಗೆ ಬಡ್ಡಿ ಸೇರಿದ್ದಾಗಿ ಲೆಕ್ಕ ಹಾಕಿದಷ್ಟು ಮೊತ್ತ.
ಇನ್ನೂ ಹೆಚ್ಚು ಹಣ ಸಂಗ್ರಹಿಸಲು ಪಿಪಿಎಫ್ ಅತ್ಯುತ್ತಮ ಆಯ್ಕೆ ಅಂತಲೇ ಹೇಳಬಹುದು. ಏಕೆಂದರೆ ಈ ಯೋಜನೆಯ ಲಾಭ ಮಾತ್ರವಲ್ಲದೆ, ಹೂಡಿಕೆಯ ಮೇಲೆ ಪೂರ್ತಿಯಾಗಿ ತೆರಿಗೆ ರಹಿತ ವ್ಯವಸ್ಥೆಯೂ ಇದೆ. ಹೆಚ್ಚುವರಿ ಲಾಭವೇನೆಂದರೆ, ಮೇಚ್ಯೂರಿಟಿ ನಂತರ ಹಣವನ್ನು ಸಂಪೂರ್ಣವಾಗಿ ತೆರಿಗೆಯಿಂದ ಮುಕ್ತವಾಗಿ ಪಡೆಯಬಹುದು.
ಇದನ್ನೂ ಓದಿ: ಕಡಿಮೆ ಬಂಡವಾಳ ಹೈ ಪ್ರಾಫಿಟ್! ಎಳನೀರು ವ್ಯಾಪಾರದ ಲೆಕ್ಕಾಚಾರ ಗೊತ್ತಾ?
ಪಿಪಿಎಫ್ ಖಾತೆ ತೆರೆಯಲು ಬ್ಯಾಂಕ್ (Bank) ಅಥವಾ ಪೋಸ್ಟ್ ಆಫೀಸ್ (Post Office) ಕಚೇರಿಗೆ ಹೋಗಬಹುದು. ಎಲ್ಲ ನಿಯಮಗಳು ಒಂದೇ ಇರುತ್ತದೆ. ಆನ್‌ಲೈನ್ ಆಕ್ಸೆಸ್ ಬೇಕಾದರೆ ಬ್ಯಾಂಕ್ ಉತ್ತಮ ಆಯ್ಕೆ. ಗ್ರಾಮೀಣ ಪ್ರದೇಶದಲ್ಲಿ ಇದ್ದರೆ, ಅಂಚೆ ಕಚೇರಿಯು ಉತ್ತಮ ಆಯ್ಕೆ. ಸರಳವಾಗಿ ಹೇಳಬೇಕಾದರೆ, ನಿಮ್ಮ ಸೌಕರ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ.
ಹೀಗೆ, ಪಿಪಿಎಫ್ ಹೂಡಿಕೆ ನಿಮ್ಮ ನಿವೃತ್ತಿ ದಿನಗಳನ್ನು ಸುಖಕರವಾಗಿಸಲು ಉತ್ತಮ ಮಾರ್ಗವಾಗಿದೆ. ನಿಮಗೂ ಭದ್ರ ಭವಿಷ್ಯ ಬೇಕಾದ್ರೆ, ಇಂದೇ ಪಿಪಿಎಫ್ ಖಾತೆ ತೆರೆಯಿರಿ!
Turn 1000 Monthly into Lakhs with PPF
Our Whatsapp Channel is Live Now 👇