ಎಸ್‌ಬಿಐ ಅಕೌಂಟ್ ಇದ್ದೋರಿಗೆ 35 ಲಕ್ಷ ಲೋನ್ ಆಫರ್! ಬೇರೆ ಡಾಕ್ಯುಮೆಂಟ್ಸ್ ಬೇಕಿಲ್ಲ
SBI Loan : ಎಸ್‌ಬಿಐ ಹೊಸದಾಗಿ ಪರಿಚಯಿಸಿದ "ಎಕ್ಸ್‌ಪ್ರೆಸ್ ಎಲೈಟ್" ಯೋಜನೆಯ ಮೂಲಕ ಕಡಿಮೆ ಬಡ್ಡಿದರದಲ್ಲಿ 35 ಲಕ್ಷವರೆಗೆ ಲೋನ್ ಪಡೆಯಬಹುದು, ಅದು ಕಡಿಮೆ ಡಾಕ್ಯುಮೆಂಟ್ ಮತ್ತು ಸುಲಭ ಪ್ರಕ್ರಿಯೆಯೊಂದಿಗೆ.
- 35 ಲಕ್ಷವರೆಗೆ ವೈಯಕ್ತಿಕ ಲೋನ್ ಅವಕಾಶ
- ಕಡಿಮೆ ಬಡ್ಡಿದರ ಮತ್ತು ಕಡಿಮೆ ಪ್ರಕ್ರಿಯೆ ಶುಲ್ಕ
- ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಅನುಕೂಲಕರ ಯೋಜನೆ
SBI Loan Offer : ನಿಮ್ಮ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ಹೆಚ್ಚಿನ ಹಣದ ಅವಶ್ಯಕತೆ ಇದೆಯೆ? ಹಾಗಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ನಿಮಗೆ ಅದ್ಭುತ ಆಫರ್ ನೀಡಿದೆ. ಕಡಿಮೆ ಡಾಕ್ಯುಮೆಂಟ್ ಹಾಗೂ ಸುಲಭ ಪ್ರಕ್ರಿಯೆಯೊಂದಿಗೆ 35 ಲಕ್ಷವರೆಗೆ ಲೋನ್ (SBI Bank Loan) ಪಡೆಯಬಹುದು.
“ಎಸ್‌ಬಿಐ ಎಕ್ಸ್‌ಪ್ರೆಸ್ ಎಲೈಟ್” ಆಫರ್‌ನ್ನು (SBI Xpress Elite) ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇದರಲ್ಲಿ ಕಡಿಮೆ ಬಡ್ಡಿದರ, ಮಿನಿಮಮ್ ಡಾಕ್ಯುಮೆಂಟ್ ಮತ್ತು ಕಡಿಮೆ ಪ್ರಾಸೆಸಿಂಗ್ ಫೀ ಇದೆ. ತಿಂಗಳಿಗೆ ಕನಿಷ್ಠ 1 ಲಕ್ಷ ವೇತನ ಹೊಂದಿರುವ ಸರ್ಕಾರಿ, ಖಾಸಗಿ ಉದ್ಯೋಗಿಗಳು ಈ ಆಫರ್‌ಗೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಲ್ಲಿ ಯಾರಾದ್ರೂ ಲೋನ್ ತಗೊಂಡಿದ್ದಾರಾ? ಚೆಕ್ ಮಾಡಿಕೊಳ್ಳಿ
ಹೌದು, ನೀವೂ ಸರ್ಕಾರಿ ಅಥವಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಎಕ್ಸ್‌ಪ್ರೆಸ್ ಎಲೈಟ್ ಯೋಜನೆಯ ಮೂಲಕ ಕೇವಲ 11.45% ರಿಂದ 11.95% ವರೆಗಿನ ಬಡ್ಡಿದರದಲ್ಲಿ ವೈಯಕ್ತಿಕ ಲೋನ್ (Personal Loan) ಪಡೆಯಬಹುದು. ಪ್ರಾಸೆಸಿಂಗ್ ಶುಲ್ಕವೂ ಕೇವಲ 1.5% ಮಾತ್ರ, ಇದರಲ್ಲಿ ರೂ.1000 ರಿಂದ ರೂ.15000 ವರೆಗೆ ಶುಲ್ಕ ಅನ್ವಯಿಸುತ್ತದೆ.
ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ಮದುವೆ, ಶಾಪಿಂಗ್, ಪ್ರವಾಸ ಮತ್ತು ತುರ್ತು ಅಗತ್ಯಗಳಿಗೆ ವೇಗವಾಗಿ ಲೋನ್ ನೀಡುವುದು. ಇನ್ನೂ ಹೆಚ್ಚು ವಿಶೇಷವೆಂದರೆ ರಕ್ಷಣಾ ಸಿಬ್ಬಂದಿಗೆ ಮುಂಗಡ ಪಾವತಿ ಶುಲ್ಕದಲ್ಲಿ ಶೇ.100 ರಷ್ಟು ರಿಯಾಯಿತಿ ದೊರೆಯುತ್ತದೆ.
ಇದನ್ನೂ ಓದಿ: ಇಲ್ಲಿದೆ ಸಾವಿರದಿಂದ ಲಕ್ಷ ಲಕ್ಷ ದುಡ್ಡು ಮಾಡೋ ಸೀಕ್ರೆಟ್! ಯಾರಿಗೂ ಹೇಳಬೇಡಿ
ಆದ್ರೆ, ಲೋನ್ ಪಾವತಿಯಲ್ಲಿ ವಿಳಂಬವಾದರೆ ಕೆಲವೊಂದು ಪೀನಾಲ್ಟಿ ಶುಲ್ಕಗಳನ್ನು ಕಟ್ಟಬೇಕಾಗುತ್ತದೆ. ಉದಾಹರಣೆಗೆ, 60 ದಿನಗಳ ಕಾಲ ಪಾವತಿ ಮಾಡದಿದ್ದರೆ ಶೇ.2.40 ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇನ್ನಷ್ಟು ವಿಳಂಬವಾದರೆ ಶೇ.5 ದಂಡ ವಿಧಿಸಲಾಗುವುದು.
ಕಡಿಮೆ ಬಡ್ಡಿದರದಲ್ಲಿ, ಹೆಚ್ಚು ಲಾಭಗಳೊಂದಿಗೆ ಬ್ಯಾಂಕಿನ ಆಫರ್ ಅನ್ನು ಉಪಯೋಗಿಸಿಕೊಳ್ಳಿ. ನೀವು ಕೂಡ ಸ್ಟೇಟ್ ಬ್ಯಾಂಕ್ (State Bank) ಗ್ರಾಹಕರಾಗಿದ್ದರೆ ಈ ಅವಕಾಶವನ್ನು ಬಿಟ್ಟುಕೊಡದೆ, ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ.
SBI Offers 35 Lakh Loan Without Documents
Our Whatsapp Channel is Live Now 👇