ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಲ್ಲಿ ಯಾರಾದ್ರೂ ಲೋನ್ ತಗೊಂಡಿದ್ದಾರಾ? ಚೆಕ್ ಮಾಡಿಕೊಳ್ಳಿ
ನಿಮ್ಮ ಹೆಸರಿನಲ್ಲಿ ನಕಲಿ ಸಾಲ ನಡೆಯುತ್ತಿದೆಯೇ? ಸರಳ ಆನ್‌ಲೈನ್ ಹಾಗೂ ಆಫ್‌ಲೈನ್ ವಿಧಾನಗಳಿಂದ ಪರಿಶೀಲನೆ ಮಾಡಿ, ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮವನ್ನು ತಪ್ಪಿಸಿ ಮತ್ತು ಭವಿಷ್ಯದ ಸಾಲದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಿ.
- ಸಿಬಿಲ್ ಸ್ಕೋರ್ ಮತ್ತು ಪಾನ್ ಕಾರ್ಡ್ ಬಳಸಿ ಸಾಲ ಪರಿಶೀಲನೆ
- ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು SMS ಎಚ್ಚರಿಕೆಗಳ ನಿಯಮಿತ ಪರಿಶೀಲನೆ
- ನಕಲಿ ಸಾಲ ಪತ್ತೆಯಾದರೆ ತಕ್ಷಣದ ದೂರು ಪ್ರಕ್ರಿಯೆಗಳು
ನಿಮ್ಮ ಹೆಸರಿನಲ್ಲಿ ಯಾರಾದ್ರೂ ಸಾಲ (Loan) ತಗೊಂಡಿದ್ದಾರಾ! ಎಂಬ ಅನುಮಾನ ಇದಿಯಾ? ಹೌದು, ಈ ನಡುವೆ ಈ ರೀತಿ ಸಾಲ ಮೋಸ ಪ್ರಕರಣಗಳು (Fake Loan) ವೇಗವಾಗಿ ಹೆಚ್ಚುತ್ತಿವೆ.
ನಿಮ್ಮ ಪ್ಯಾನ್ ಕಾರ್ಡ್ (Pan Card) ಅಥವಾ ಆಧಾರ್ ಸಂಖ್ಯೆಯನ್ನು (Aadhaar Card) ದುರ್ಬಳಕೆ ಮಾಡಿ ಯಾರೋ ಸಾಲ (Bank Loan) ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಕುಸಿಯಬಹುದು, ಭವಿಷ್ಯದಲ್ಲಿ ಕಷ್ಟಪಟ್ಟು ಸಾಲ ಪಡೆಯಬೇಕಾದ ಸ್ಥಿತಿಯತ್ತ ತಳ್ಳಬಹುದು.
ಮೊದಲು ನೀವು ಮಾಡಬೇಕಾದದ್ದು ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸುವುದು. ಸಿಬಿಲ್ ವೆಬ್‌ಸೈಟ್‌ಗೆ ಭೇಟಿ ನೀಡಿ, ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ಸೃಷ್ಟಿಸಿ. ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು ಕ್ರೆಡಿಟ್ ರಿಪೋರ್ಟ್ ಡೌನ್‌ಲೋಡ್ (Download Credit Report) ಮಾಡಿ. ನೀವು ತೆಗೆದುಕೊಳ್ಳದ ಸಾಲದ ವಿವರಗಳು ಇದ್ದರೆ, ತಕ್ಷಣವೇ ಬ್ಯಾಂಕ್ ಅನ್ನು ಸಂಪರ್ಕಿಸಿ.
ಇದನ್ನೂ ಓದಿ: ಇಲ್ಲಿದೆ ಸಾವಿರದಿಂದ ಲಕ್ಷ ಲಕ್ಷ ದುಡ್ಡು ಮಾಡೋ ಸೀಕ್ರೆಟ್! ಯಾರಿಗೂ ಹೇಳಬೇಡಿ
ಇನ್ನೊಂದು ಮುಖ್ಯ ಹಂತವೆಂದರೆ ಪ್ಯಾನ್ ಕಾರ್ಡ್ ಬಳಸಿ ಸಾಲವನ್ನು ಪರಿಶೀಲಿಸುವುದು. CIBIL ಅಥವಾ Experian ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ, PAN ಸಂಖ್ಯೆಯನ್ನು ನಮೂದಿಸಿ ಮತ್ತು ಕ್ರೆಡಿಟ್ ರಿಪೋರ್ಟ್ ನೋಡಿ. ಆಧಾರ್ ಕಾರ್ಡ್ ಮೂಲಕವೂ ಪರಿಶೀಲನೆ ಮಾಡಬಹುದು.
ಕೆಲ ಬ್ಯಾಂಕುಗಳು ಮತ್ತು NBFC ಸಂಸ್ಥೆಗಳು ಆಧಾರ್ ಬಳಸಿ ಸಾಲದ ಮಾಹಿತಿಯನ್ನು ಒದಗಿಸುತ್ತವೆ. ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಣ ಮಾಡಿ.
ಅಷ್ಟೇ ಅಲ್ಲ, ನೀವು ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ SMS ಎಚ್ಚರಿಕೆಗಳನ್ನು ಗಮನವಿಟ್ಟು ಪರಿಶೀಲಿಸಬೇಕು. ಅಪರಿಚಿತ EMI ಬಗ್ಗೆ ಪರಿಶೀಲಿಸಬೇಕು. ಅದರ ಹೊರತಾಗಿ, ನೀವು ಕ್ರೆಡಿಟ್ ಕಾರ್ಡ್ (Credit Card) ಹೊಂದಿದ್ದರೆ, ಅದರ ಸ್ಟೇಟ್ಮೆಂಟ್‌ಗಳನ್ನೂ ಸಹ ಪರಿಶೀಲಿಸಿ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಮೂಲಕವೂ ಅಪರಿಚಿತ ಸಾಲ ತೆಗೆದುಕೊಳ್ಳಲಾಗಬಹುದು.
ಇದನ್ನೂ ಓದಿ: ಬ್ಯಾಂಕುಗಳಲ್ಲಿ ಚಿನ್ನಾಭರಣ ಗಿರವಿ ಇಡುವುದಕ್ಕೆ ಕಠಿಣ ನಿಯಮ, ಬಡವರಿಗೆ ಆತಂಕ
ಈಗಾಗಲೇ ನಿಮ್ಮ ಹೆಸರಲ್ಲಿ ನಕಲಿ ಸಲ ಪಡೆಯಲಾಗಿದೆಯೇ?
ತಕ್ಷಣ ಬ್ಯಾಂಕ್‌ಗೆ ಫೋನ್ ಮಾಡಿ ಅಥವಾ ಹೋಗಿ ದೂರು ಸಲ್ಲಿಸಿ. ನಂತರ ಕ್ರೆಡಿಟ್ ಬ್ಯೂರೋಗೆ ನಿಮ್ಮ ವರದಿಯನ್ನು ತಿದ್ದಲು ತಿಳಿಸಿ. ಹೆಚ್ಚಿನ ಸಮಸ್ಯೆಗಳನ್ನು ತಪ್ಪಿಸಲು ಸ್ಥಳೀಯ ಪೊಲೀಸ್ ಠಾಣೆಗೆ FIR ದಾಖಲಿಸುವುದೂ ಅವಶ್ಯಕ.
ನಿಮ್ಮ ಹಣಕಾಸಿನ ಸುರಕ್ಷತೆ ನಿಮ್ಮ ಕೈಯಲ್ಲಿದೆ. ಈಗಲೇ ಪರಿಶೀಲಿಸಿ ಮತ್ತು ನಕಲಿ ಸಾಲದ ಜಾಲದಲ್ಲಿ ಸಿಲುಕದಿರಿ!
Fake Loan Alert, Check If Your Name Is Misused
Our Whatsapp Channel is Live Now 👇