ಬ್ಯಾಂಕುಗಳೇ ಕರೆದು ಸಾಲ ಕೊಡುವ ಟ್ರಿಕ್ ಇದು, 5 ನಿಮಿಷಕ್ಕೆ ಲೋನ್ ಸಿಗುತ್ತೆ!

ಸಿಬಿಲ್ (CIBIL) ಸ್ಕೋರ್ ಕಡಿಮೆ ಇದ್ದರೆ ಲೋನ್ ಪಡೆಯುವುದು ತೊಂದರೆಯಾಗಬಹುದು! ಆದರೆ ಚಿಂತೆ ಬೇಡ, ಸರಿಯಾದ ಹಂತಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸುಲಭವಾಗಿ ಹೆಚ್ಚಿಸಬಹುದು.

  • ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೂ ಲೋನ್ ಪಡೆಯುವ ಮಾರ್ಗವಿದೆಯೇ?
  • ರೀಪೋರ್ಟ್ ಚೆಕ್ ಮಾಡಿ, ತಪ್ಪುಗಳಿದ್ದರೆ ತಕ್ಷಣ ತಿದ್ದಿಸಿ
  • ಈ ಟಿಪ್ಸ್ ಫಾಲೋ ಮಾಡಿದರೆ ಸ್ಕೋರ್ ಹೆಚ್ಚಾಗಿ ಲೋನ್ ಅಪ್ರೂವಲ್ ಖಚಿತ

ಇತ್ತೀಚಿನ ದಿನಗಳಲ್ಲಿ ಯಾವುದೇ ಲೋನ್ (Loan) ಅಥವಾ ಕ್ರೆಡಿಟ್ ಕಾರ್ಡ್ (Credit Card) ಪಡೆಯಲು ಸಿಬಿಲ್ ಸ್ಕೋರ್ (CIBIL Score) ಮುಖ್ಯ ಪಾತ್ರ ವಹಿಸುತ್ತಿದೆ. ನಿಮ್ಮ ಹಳೆಯ ಸಾಲದ ಪಾವತಿ, ಕ್ರೆಡಿಟ್ ಕಾರ್ಡ್ ಬಳಸುವ ಪರಿ ಇತ್ಯಾದಿಗಳನ್ನು ಆಧರಿಸಿ ಈ ಸಿಬಿಲ್ ಸ್ಕೋರ್ ಲೆಕ್ಕ ಹಾಕಲಾಗುತ್ತದೆ.

ಸಾಮಾನ್ಯವಾಗಿ 300 ರಿಂದ 900 ದಾಟಿ ಈ ಸ್ಕೋರ್ ಇರುತ್ತದೆ. 650+ ಸ್ಕೋರ್ ಇದ್ದರೆ ಮಾತ್ರ, ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಲೋನ್ ಮಂಜೂರು ಮಾಡುತ್ತವೆ. 400 ಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ಲೋನ್ ಸಿಗೋದು ಕಷ್ಟ.

ಇದನ್ನೂ ಓದಿ: ಕೇವಲ 250 ರೂಪಾಯಿಗೆ ಎಸ್‌ಬಿಐ ಕೊಡುತ್ತೆ ಲಕ್ಷಗಳಲ್ಲಿ ಆದಾಯ! ಬಂಪರ್ ಸ್ಕೀಮ್

ಸಿಬಿಲ್ ಸ್ಕೋರ್ ಕಡಿಮೆ ಆಯ್ತಾ?

ಸರಿಯಾಗಿ ಲೋನ್ ಮರು ಪಾವತಿ ಮಾಡದೆ ಹೋದಲ್ಲಿ, ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಿಸ್ ಮಾಡುತ್ತಿದ್ದರೆ, ನಿಮ್ಮ ಸಿಬಿಲ್ ಸ್ಕೋರ್ ಸ್ವಲ್ಪ ಸ್ವಲ್ಪವಾಗಿ ಕುಸಿಯುತ್ತದೆ. ಇದರಿಂದ ಮುಂದೆ ಯಾವುದೇ ಹೊಸ ಸಾಲ (New Loan) ಪಡೆಯಲು ಸಮಸ್ಯೆ ಉಂಟಾಗಬಹುದು.

ಆದ್ದರಿಂದ ನಿಮ್ಮ ಕ್ರೆಡಿಟ್ ರಿಪೋರ್ಟ್ (Credit Report) ಚೆಕ್ ಮಾಡಿ, ನೀವು ಮಾಡದ ಸಾಲಗಳು ನಿಮ್ಮ ಹೆಸರಿನಲ್ಲಿ ದಾಖಲಾಗಿದೆಯೇ ಎಂದು ಪರೀಕ್ಷಿಸಿ. ತಪ್ಪುಗಳಿದ್ದರೆ ಸಿಬಿಲ್ (CIBIL) ಗೆ ದೂರು ಕೊಡಿ.

ಇದನ್ನೂ ಓದಿ: ಕಿ.ಮೀ.ವರೆಗೆ ಜನರ ಕ್ಯೂ! 50 ಲಕ್ಷ ಹೋಮ್ ಲೋನ್ ಆಫರ್, EMI ಮೇಲೂ 2000 ಕಡಿತ

Credit Score

ನಿಮ್ಮ ಕ್ರೆಡಿಟ್ ಸ್ಕೋರ್ ಹೇಗೆ ಹೆಚ್ಚಿಸಬಹುದು?

  1. ಇಎಂಐ (EMI) ಮರು ಪಾವತಿಸಿ – ಯಾವುದೇ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ. ತಡವಾದರೆ ಸ್ಕೋರ್ ಕುಸಿಯಬಹುದು.
  2. ನೋ ಎಕ್ಸ್ಟ್ರಾ ಲೋನ್ – ಹಲವಾರು ಸಾಲಗಳನ್ನು ಏಕಕಾಲದಲ್ಲಿ ತೆಗೆದುಕೊಂಡರೆ, ಸ್ಕೋರ್ ಹಾನಿಯಾಗಬಹುದು.
  3. ಸುರಕ್ಷಿತ ಸಾಲ (Secured Loan) – ಗೋಲ್ಡ್ ಲೋನ್ ಅಥವಾ ಎಫ್ಡಿ (FD) ವಿರುದ್ಧ ಸಾಲ ಪಡೆದು, ಅವುಗಳನ್ನು ಸರಿಯಾಗಿ ತೀರಿಸಿ. ಇದರಿಂದ ಸಿಬಿಲ್ ಸ್ಕೋರ್ ನಿಧಾನವಾಗಿ ಸುಧಾರಿಸುತ್ತದೆ.
  4. ನಿಮ್ಮ ಪ್ರೊಫೈಲ್ – ಲೋನ್ ಗಾಗಿ ಬಾರಿ ಬಾರಿಯಾಗಿ ಅರ್ಜಿ ಸಲ್ಲಿಸದೇ ಇರಿ. ಪ್ರತೀ ಬಾರಿ ರಿಜೆಕ್ಟ್ ಆದಾಗ, ನಿಮ್ಮ ಕ್ರೆಡಿಟ್ ಪ್ರೊಫೈಲ್ ದುರ್ಬಲವಾಗುತ್ತದೆ.

ಇದನ್ನೂ ಓದಿ: ಆಕಾಶದೆತ್ತರಕ್ಕೆ ಜಿಗಿದಿದ್ದ ಚಿನ್ನದ ಬೆಲೆ ರಾತ್ರೋ-ರಾತ್ರಿ ಪಾತಾಳಕ್ಕೆ ಕುಸಿತ! ಬಂಪರ್ ಸುದ್ದಿ

ಈ ಟಿಪ್ಸ್ Follow ಮಾಡಿದರೆ, ಹೊಸ ಲೋನ್ ಖಚಿತ!

ಸಿಬಿಲ್ ಸ್ಕೋರ್ (Credit Score) ಏರಿಸಲು ಕಡಿಮೆ ಮೊತ್ತದ ಪರ್ಸನಲ್ ಲೋನ್ (Personal Loan) ತೆಗೆದುಕೊಳ್ಳಬಹುದು. ಆದರೆ ಇದನ್ನು ಸಮಯಕ್ಕೆ ಪಾವತಿ ಮಾಡುವುದು ಅತ್ಯಗತ್ಯ. ಎಷ್ಟು ಸರಿಯಾಗಿ ಇಎಂಐ ಪಾವತಿ ಮಾಡಿದರೆ, ಅಷ್ಟೂ ಬೇಗ ನಿಮ್ಮ ಸ್ಕೋರ್ ಸುಧಾರಿಸುತ್ತದೆ. ಕೆಲವು ತಿಂಗಳುಗಳ ನಂತರ ನಿಮ್ಮ ಹೊಸ ಸ್ಕೋರ್ ಚೆಕ್ ಮಾಡಿ, ಆಗ ನೀವು ಹೊಸ ಸಾಲಕ್ಕೂ ಅರ್ಜಿ ಹಾಕಬಹುದು.

How to Improve Credit Score and Get a Loan

Related Stories