ಮಾರುತಿ ಆಲ್ಟೊ 800 ಹೊಸ ವರ್ಷನ್ ಖರೀದಿಸಲು ಮುಗಿಬಿದ್ದ ಜನ, ಬೆಲೆ ಕಡಿಮೆ ಅನ್ನೋದೆ ಹೈಲೈಟ್

ಜನರ ಹಾಟ್ ಫೇವರೆಟ್ ಆಲ್ಟೋ 800 ಹೊಸ ಅವತಾರದೊಂದಿಗೆ (Maruti 800 new version) ಮಾರುಕಟ್ಟೆಗೆ ಬರಲಿದೆ.

ಮಾರುತಿ ಸುಜುಕಿ (Maruti Suzuki) ಕಂಪನಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಉತ್ತಮ ಕಾರ್ಯಕ್ಷಮತೆ ಹಾಗೂ ಅತಿ ಹೆಚ್ಚು ಮೈಲೇಜ್ (mileage) ನೀಡುವುದರಿಂದಾಗಿ ಮಾರುತಿ ಸುಜುಕಿಯ ವಾಹನಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ.

ಇತ್ತೀಚಿಗೆ ಎಲೆಕ್ಟ್ರಿಕ ವಾಹನಗಳ (Electric Vehicles) ತಯಾರಿಕೆಯಲ್ಲಿಯೂ ಕೂಡ ಮಾರುತಿ ತನ್ನ ಕೈಚಳಕ ತೋರಿಸುತ್ತಿದೆ. ಅಷ್ಟೇ ಅಲ್ಲದೆ ಮಾರುತಿ ಸುಜುಕಿ ಕಂಪನಿಯ ವಾಹನಗಳು ಜನರಿಗೆ ಕೈಕೆಟ್ಟುಕುವ ಬೆಲೆಯಲ್ಲಿ ಲಭ್ಯವಾಗುತ್ತದೆ. ಇದರಿಂದಾಗಿ ಈ ಕಂಪನಿ ಜನರ ಮನಸ್ಸಿನಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಕೇವಲ 60 ಸಾವಿರಕ್ಕೆ ಬರೋಬ್ಬರಿ 26 km ಮೈಲೇಜ್ ನೀಡುವ ಕಾರನ್ನು ಮನೆಗೆ ತನ್ನಿ! ಕಡಿಮೆ ಡೌನ್ ಪೇಮೆಂಟ್

ಮಾರುತಿ ಆಲ್ಟೊ 800 ಹೊಸ ವರ್ಷನ್ ಖರೀದಿಸಲು ಮುಗಿಬಿದ್ದ ಜನ, ಬೆಲೆ ಕಡಿಮೆ ಅನ್ನೋದೆ ಹೈಲೈಟ್ - Kannada News

ಮಾರುತಿ ಸುಜುಕಿ ಹೊಸ ಅವತಾರದ ಆಲ್ಟೋ 800 – Maruti Alto 800 Car

ಆಲ್ಟೊ 800 (Alto 800 Car) ಮಧ್ಯಮ ವರ್ಗದ ಕುಟುಂಬದವರಿಗಾಗಿಯೇ ತಯಾರು ಮಾಡಿದ ಕಾರ್ ಆಗಿತ್ತು. ಅತಿ ಕಡಿಮೆ ಬೆಲೆಯಲ್ಲಿ ಒಂದು ಒಳ್ಳೆಯ ಫ್ಯಾಮಿಲಿ ಕಾರ್ (family car) ಅನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಿ ಯಶಸ್ಸು ಗಳಿಸಿದ್ದು ಗೊತ್ತೇ ಇದೆ.

ಆದರೆ ಇತ್ತೀಚಿನ ದಿನಗಳಲ್ಲಿ ಆಲ್ಟೊ 800 ಉತ್ಪಾದನೆಯನ್ನು ಮಾರುತಿ ಸುಜುಕಿ ನಿಲ್ಲಿಸಿತ್ತು. ಈಗಾಗಲೇ ಉತ್ಪಾದಿಸಿದ ಯೂನಿಟ್ ಮಾರಾಟಕ್ಕಾಗಿ ಅತ್ಯುತ್ತಮ ಆಫರ್ ಕೂಡ ಘೋಷಣೆ ಮಾಡಿತು. ಈಗ ಮತ್ತೆ ಜನರ ಹಾಟ್ ಫೇವರೆಟ್ ಆಲ್ಟೋ 800 ಹೊಸ ಅವತಾರದೊಂದಿಗೆ (Maruti 800 new version) ಮಾರುಕಟ್ಟೆಗೆ ಬರಲಿದೆ.

ಮನೆಯಲ್ಲಿ ಬೈಕ್, ಕಾರ್ ಇಟ್ಟುಕೊಂಡಿರುವ ಪ್ರತಿಯೊಬ್ಬರಿಗೂ ಮಹತ್ವದ ಮಾಹಿತಿ! ಇದು ಕಡ್ಡಾಯ

ಮಾರುತಿ ಆಲ್ಟೊ 800 ವೈಶಿಷ್ಟ್ಯತೆಗಳು

Maruti Suzuki Alto 800ಹಗುರವಾದ ರಚನೆ ಹೊಂದಿರುವ ಮಾರುತಿ ಆಲ್ಟೊ 800 ಅವತಾರ ಹೊಸ ಲುಕ್ ಹೊಂದಿದ್ದು ಮಾರುತಿ ಎಸ್ ಪ್ರೆಸ್ಸೋ (Spresso) ಕಾರಿನ ವಿನ್ಯಾಸವನ್ನು ಹೋಲುತ್ತದೆ. ಈ ಕಾರಿನಲ್ಲಿ ನ್ಯಾಚುರಲ್ ಆಸ್ಪರೇಟೆಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ. 796 ಸಿಸಿ ಎಂಜಿನ್ ಹೊಂದಿದೆ. ಎಂಜಿನ್ 48 ಪಿ ಎಸ್ ಪವರ್ ಹಾಗೂ 69 ಎನ್ಎಂಪಿ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಾರುತಿ ಆಲ್ಟೊ 800 ಫೀಚರ್ಸ್

ಪವರ್ ವಿಂಡೋ ಅಳವಡಿಸಲಾಗಿದೆ. ಎಲ್ಇಡಿ ಲೈಟ್ ಗಳು ಮುಂಭಾಗದಲ್ಲಿ ಕೊಡಲಾಗಿದೆ. ಸುಲಭ ಸ್ಟಾರ್ಟ್ ಕೊಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬ್ಯಾಗ್, ಎಬಿಸಿ ಜೊತೆಗೆ ಇಬಿಡಿ ಕೂಡ ನೀಡಲಾಗಿದೆ. ತಕ್ಕಮಟ್ಟಿಗೆ ಬೂಟ್ ಸ್ಪೇಸ್ ಕೂಡ ನೀಡಲಾಗಿದೆ.

ಅಯ್ಯೋ ಇದು ಆಟಿಕೆ ಅಲ್ಲ! ಲೈಸೆನ್ಸ್ ಇಲ್ಲದೆ 14 ವರ್ಷದ ಮಕ್ಕಳೂ ಓಡಿಸಬಹುದಾದ ಮಿನಿ ಎಲೆಕ್ಟ್ರಿಕ್ ಕಾರ್

ಬೆಲೆ ಮತ್ತು ಮೈಲೇಜ್

ಮಾರುತಿ 800 ಈ ಹಿಂದೆಯೂ ಕೂಡ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ (budget friendly) ಕಾರ್ ಎನಿಸಿಕೊಂಡಿತ್ತು. ಈಗಲೂ ಟಾಟಾ ಪಂಚ್, ಕ್ವಿಡ್ ಮೊದಲ ಆರಂಭಿಕ ಕಾರುಗಳಿಗೆ ಪೈಪೋಟಿ ನೀಡಲು ಅತಿ ಕಡಿಮೆ ಬೆಲೆಗೆ ಮಾರುತಿ ಸುಜುಕಿ ಆಲ್ಟೊ 800 ಹೊಸ ವರ್ಷನ್ ಬಿಡುಗಡೆ ಮಾಡುತ್ತಿದೆ.

ಇದರ ಎಕ್ಸ್ ಶೋರೂಮ್ ಬೆಲೆ (X showroom) 5 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇನ್ನು ಮಾರುತಿ ಆಲ್ಟೊ 800 ಹೊಸ ವರ್ಷನ್ ನಲ್ಲಿ ಬೇರೆ ಬೇರೆ ಬಣ್ಣಗಳ ಆಯ್ಕೆಯನ್ನು ಕೂಡ ಕೊಡಲಾಗಿದೆ.

ಮೈಲೇಜ್ ವಿಚಾರಕ್ಕೆ ಬಂದರೆ ಆಟೋ 800 25 ರಿಂದ 30 ಕೆ ಎಮ್ ಪಿ ಎಲ್ ವರೆಗೆ ಮೈಲೇಜ್ ನೀಡಬಹುದು. ಒಟ್ಟಿನಲ್ಲಿ ಮಾಧ್ಯಮ ವರ್ಗದ ಕುಟುಂಬದ ಪ್ರಯಾಣಕ್ಕೆ ಕಡಿಮೆ ಬೆಲೆಯಲ್ಲಿ ಮಾರುತಿ ಆಲ್ಟೊ ಹೊಸ ಅವತಾರದಲ್ಲಿ ಮತ್ತೆ ಮಾರುಕಟ್ಟೆಗೆ ಬರಲಿದೆ.

Maruti Alto 800 Car New version

Follow us On

FaceBook Google News

Maruti Alto 800 Car New version