ಕೇವಲ ಒಂದು ಲಕ್ಷ ಕೊಟ್ಟು ಮನೆಗೆ ತನ್ನಿ ಈ ಐಷಾರಾಮಿ ಕಾರನ್ನು! ಖರೀದಿಗೆ ಮುಗಿಬಿದ್ದ ಜನ

Maruti Baleno Car : ನಮ್ಮ ದೇಶದಲ್ಲಿ ಮೈಲೇಜ್ ಕೊಡುವ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಬಲೆನೋ (Maruti Baleno Car) ಜನರಿಗೆ ಹೆಚ್ಚು ಹತ್ತಿರವಾಗಿದೆ.

Bengaluru, Karnataka, India
Edited By: Satish Raj Goravigere

Maruti Baleno Car : ಅತ್ಯಂತ ವಿಶ್ವಾಸಾರ್ಹ ಕಂಪನಿಗಳಲ್ಲಿ ಮಾರುತಿ ಸುಜುಕಿ ಮೋಟಾರ್ (Maruti Suzuki motor company) ಕಂಪನಿ ಕೂಡ ಒಂದು. ಭಾರತೀಯ ಮಾರುಕಟ್ಟೆಯಲ್ಲಿ ಇವರಿಗೆ ಸಾಕಷ್ಟು ನಾಲ್ಕು ಚಕ್ರದ (four wheeler vehicles) ಹಾಗೂ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿರುವ ಮಾರುತಿ ಅತ್ಯುತ್ತಮ ಕಾರ್ಯಕ್ಷಮತೆ ಉಳ್ಳ ವಾಹನ ಬಿಡುಗಡೆ ಮಾಡುವಲ್ಲಿ ಹೆಸರುವಾಸಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾರುತಿಯ ಹಲವು ಕಾರುಗಳು ಅತಿ ಹೆಚ್ಚು ಮಾರಾಟ ಕಂಡಿದ್ದು ಅದರಲ್ಲಿಯೂ ಬಲೆನೋ ಕಾರಿನ ಮಾರಾಟ ದಾಖಲೆ ಸೃಷ್ಟಿಸಿದೆ.

Maruti Baleno Car On-Road Price, Mileage and Features

ತಗ್ಗಿದ ಚಿನ್ನದ ಬೆಲೆ! ಒಂದೇ ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಈ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು

ಮಾರುತಿ ಬಲೇನೋ ಸೃಷ್ಟಿಸಿದೆ ದಾಖಲೆ;

ಜನರು ಐಷಾರಾಮಿ ಕಾರುಗಳಿಗಿಂತ ಹೆಚ್ಚು ಕಾರ್ಯಕ್ಷಮತೆ ಹಾಗೂ ಮೈಲೇಜ್ (mileage Car) ಇರುವ ಕಾರು ಖರೀದಿಗೆ ಮುಂದಾಗುತ್ತಾರೆ. ನಮ್ಮ ದೇಶದಲ್ಲಿ ಮೈಲೇಜ್ ಕೊಡುವ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಬಲೆನೋ (Maruti Baleno Car) ಜನರಿಗೆ ಹೆಚ್ಚು ಹತ್ತಿರವಾಗಿದ್ದು. ದೂರದ ಪ್ರಯಾಣಕ್ಕೂ ಕೂಡ ಅನುಕೂಲವಾಗುವ ಬಲೆನೋ 30km ಕ್ಕೂ ಹೆಚ್ಚಿನ ಮೈಲೇಜ್ ನೀಡುತ್ತದೆ.

ಪವರ್ ಫುಲ್ ಎಂಜಿನ್

ಬಲೇನೂ ಅತ್ಯುತ್ತಮ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರ್ (premium hatchback car) ಆಗಿದ್ದು, 1.2 ಲೀಟರ್, ನ್ಯಾಚುರಲ್ ಆಸ್ಪರೇಟೆಡ್ ಪೆಟ್ರೋಲ್ ಎಂಜಿನ್ (engine) ಅಂದಿದ್ದು 90 ಬಿ ಎಚ್ ಪಿ ಪವರ್ ಪಡೆದುಕೊಳ್ಳುತ್ತದೆ.

5 ಸ್ಪೀಡ್ MT ಹಾಗೂ CVT ಎರಡು ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯಬಹುದು. ಇದರ ಜೊತೆಗೆ ಸಿಎನ್‌ಜಿ ಮಾದರಿಯ ಬಲೆನೋ ಕೂಡ ಲಭ್ಯವಿದ್ದು ಇದು 76 ಬಿ ಎಚ್ ಪಿ ಪವರ್ ಹೊಂದಿರುತ್ತದೆ. ಇದರಲ್ಲಿ ಮಾನವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆ ಪಡೆಯಬಹುದು.

ವ್ಯಕ್ತಿ ಮೃತಪಟ್ಟ ಮೇಲೆ ಆತನ ಬ್ಯಾಂಕ್ ಖಾತೆಯಲ್ಲಿರುವ ಹಣ ಏನಾಗುತ್ತದೆ ಗೊತ್ತಾ? ಮಹತ್ವದ ಮಾಹಿತಿ

ಮಾರುತಿ ಬಲೆನೊ ಫೀಚರ್ಸ್

Maruti Baleno Car9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಹಾಗೂ ಆಟೋ ಕಾರ್ ಪ್ಲೇ ವ್ಯವಸ್ಥೆ ಇದೆ. ಬ್ಲೂಟೂತ್ ಕನೆಕ್ಟಿವಿಟಿ, ಸೀಟ್ ಬೆಲ್ಟ್ ಎಚ್ಚರಿಕೆ ಕರೆ, ಚೈಲ್ಡ್ ಸೇಫ್ಟಿ ಬೆಲ್ಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಕೊಡಲಾಗಿದೆ.

ಇನ್ನು ಸುರಕ್ಷತೆಯ ದೃಷ್ಟಿಯಿಂದ ಆರು ಏರ್ ಬ್ಯಾಗ್ ಗಳನ್ನು ಕೊಡಲಾಗಿದ್ದು, ಎಬಿಎಸ್ ಜೊತೆಗೆ ಈಬಿಡಿ ಕೊಡಲಾಗಿದ್ದು, ಇಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 3 ಪಾಯಿಂಟ್ ಸೀಟ್ ಬೆಲ್ಟ್, ಸ್ಟಾರ್ಟ್ ಅಂಡ್ ಸ್ಟಾಪ್ ಪುಶ್ ಬಟನ್, ಈ ಲೆಸ್ ಎಂಟ್ರಿ ಮೊದಲದ ಸುಧಾರಿತ ಸುರಕ್ಷಿತ ವ್ಯವಸ್ಥೆಯನ್ನು ಕೊಡಲಾಗಿದೆ.

ಮಾರುತಿ ಆಲ್ಟೊ 800 ಹೊಸ ವರ್ಷನ್ ಖರೀದಿಸಲು ಮುಗಿಬಿದ್ದ ಜನ, ಬೆಲೆ ಕಡಿಮೆ ಅನ್ನೋದೆ ಹೈಲೈಟ್

ಮಾರುತಿ ಬಲೇನೋ ಮೈಲೇಜ್ ಮತ್ತು ಬೆಲೆ

ದೂರದ ಪ್ರಯಾಣಕ್ಕೂ ಅನುಕೂಲವಾಗುವಂತಹ ಬಲೆನೋದಲ್ಲಿ ಬೂಟ್ ಸ್ಪೇಸ್ ಕೂಡ ಉತ್ತಮವಾಗಿದೆ. ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ, ಪೆಟ್ರೋಲ್ ಎಂಜಿನ್ ನಲ್ಲಿ 22.94 ಕೆ ಎಮ್ ಪಿ ಎಲ್ ವರೆಗೆ ಮೈಲೇಜ್ ಪಡೆಯಬಹುದು. ಅದೇ ರೀತಿ ಸಿ ಎನ್ ಜಿ ಮಾದರಿಯಲ್ಲಿ 30km ಮೈಲೇಜ್ ಸಿಗುತ್ತದೆ.

ಮಾರುತಿ ಬಲೇನೋ ಐಷಾರಾಮಿ ಲುಕ್ ಹೊಂದಿದ್ದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಈ ಕಾರಿನ ಎಕ್ಸ್ ಶೋರೂಮ್ ಬೆಲೆ, 6.61 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. 9.98 ಲಕ್ಷ ರೂಪಾಯಿಗಳಿಗೆ ಹೈ ಎಂಡ್ ಮಾದರಿಯನ್ನು ಖರೀದಿಸಬಹುದು.

ಒಂದು ಲಕ್ಷ ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ Finance ಯೋಜನೆಯ ಮೂಲಕ EMI ಪಾವತಿ ಮಾಡಬಹುದು. ಒಟ್ಟಿನಲ್ಲಿ ಮಾರುತಿ ಬಲೇನೋ ಅತ್ಯುತ್ತಮ ಕಾರಾಗಿದ್ದು ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಖರೀದಿಸಬಹುದು.

Maruti Baleno Car On-Road Price, Mileage and Features