ಕೇವಲ ಒಂದು ಫೋಟೋ ಕ್ಲಿಕ್ಕಿಸಿ ಕಳುಹಿಸಿ, ಕೇಂದ್ರ ಸರ್ಕಾರವೇ ಕೊಡುತ್ತೆ ಲಕ್ಷ ಹಣ! ಸರ್ಕಾರದ ಬಂಪರ್ ಆಫರ್

ನೀವು ಒಂದೇ ಒಂದು ಫೋಟೋ ತೆಗೆದು ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಅಪ್ಲೋಡ್ (Upload) ಮಾಡಿದ್ರೆ ಸಾಕು ಆಯ್ಕೆಯಲ್ಲಿ ನಿಮ್ಮ ಹೆಸರು ಕೂಡ ಬರಬಹುದು. ಯಾವ ಫೋಟೋ ತೆಗಿಬೇಕು ಯಾವ ರೀತಿಯ ಪ್ರಯೋಜನ ಇದೆ, ಈ ಯೋಜನೆ ಹೆಸರೇನು? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಕೇಂದ್ರ ಸರ್ಕಾರ (Central Government) ಸಾಮಾನ್ಯ ಜನರಿಗೆ ಅನುಕೂಲ ವಾಗುವಂತಹ ಸೂಪರ್ ಆಗಿರುವ ಯೋಜನೆ ಒಂದನ್ನು ಜಾರಿಗೆ ತಂದಿದೆ ಇದರಲ್ಲಿ ನೀವೇನಾದರೂ ಈ ಒಂದು ಕೆಲಸ ಮಾಡಿದರೆ ಲಕ್ಷ ಅಲ್ಲ ಕೋಟಿ ಹಣ ಕೂಡ ಗಳಿಸಬಹುದು.

ನೀವು ಒಂದೇ ಒಂದು ಫೋಟೋ ತೆಗೆದು ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಅಪ್ಲೋಡ್ (Upload) ಮಾಡಿದ್ರೆ ಸಾಕು ಆಯ್ಕೆಯಲ್ಲಿ ನಿಮ್ಮ ಹೆಸರು ಕೂಡ ಬರಬಹುದು. ಯಾವ ಫೋಟೋ ತೆಗಿಬೇಕು ಯಾವ ರೀತಿಯ ಪ್ರಯೋಜನ ಇದೆ, ಈ ಯೋಜನೆ ಹೆಸರೇನು? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಟೈಲಿಶ್ ಲುಕ್, ಸೂಪರ್ ಮೈಲೇಜ್! ಹೋಂಡಾದಿಂದ CB200X ಹೊಸ ಬೈಕ್ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

ಕೇವಲ ಒಂದು ಫೋಟೋ ಕ್ಲಿಕ್ಕಿಸಿ ಕಳುಹಿಸಿ, ಕೇಂದ್ರ ಸರ್ಕಾರವೇ ಕೊಡುತ್ತೆ ಲಕ್ಷ ಹಣ! ಸರ್ಕಾರದ ಬಂಪರ್ ಆಫರ್ - Kannada News

ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆ: (Mera Bill Mera adhikar)

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡ ಒಂದಲ್ಲ ಒಂದು ಅಂಗಡಿಗಳಲ್ಲಿ ಖರೀದಿ ಮಾಡುತ್ತಾರೆ, ಇನ್ನು ಈ ರೀತಿ ಖರೀದಿ ಮಾಡಿದಾಗ ಅಥವಾ ಹೋಟೆಲ್ನಲ್ಲಿ ಊಟ ಮಾಡಿದಾಗ ನಿಮಗೆ ಒಂದು ಬಿಲ್ (Bill) ಕೊಡುತ್ತಾರೆ ಅಲ್ವಾ ಈ ಬಿಲ್ ಅನ್ನು ಪಡೆದ ತಕ್ಷಣ ಅಲ್ಲಿಯೇ ಡಸ್ಟ್ ಬಿನ್ ನಲ್ಲಿ ಹಾಕುವ ಬದಲಿಗೆ ಒಂದು ಫೋಟೋ ಕ್ಲಿಕ್ಕಿಸಿ ಕೇಂದ್ರ ಸರ್ಕಾರದ ಈ ಆಪ್ ಅಥವಾ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿ.. ಇಷ್ಟು ಮಾಡಿದ್ರೆ ಸಾಕು, ನೀವು ಕೈ ತುಂಬಾ ಹಣ ಗಳಿಸಬಹುದು.

ಮೇರಾ ಬಿಲ್ ಮೇರಾ ಅಧಿಕಾರ ಗೆ ಅಪ್ಲೈ ಮಾಡುವುದು ಹೇಗೆ?

ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೇರಾ ಬಿಲ್ ಮೇರಾ ಅಧಿಕಾರ (Mera bill Mera Adhikar) ಎನ್ನುವ ಅಪ್ಲಿಕೇಶನ್ ಡೌನ್ಲೋಡ್ (Download App) ಮಾಡಿಕೊಳ್ಳಿ.
ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಬಳಿ ಇರುವ ಶಾಪಿಂಗ್ ಬಿಲ್ (Shopping Bill) ಅಥವಾ ರೆಸ್ಟೋರೆಂಟ್ ಗಳಲ್ಲಿ ಆಹಾರ ಸೇವಿಸಿ ಪಡೆದುಕೊಂಡ ನೀವು ಅಪ್ಲೋಡ್ ಮಾಡಬಹುದು. ಆದರೆ ಈ ಬಿಲ್ ನಲ್ಲಿ ಕಡ್ಡಾಯವಾಗಿ ಜಿಎಸ್‌ಟಿ ಸಂಖ್ಯೆ (GST NO.) ಇರಲೇಬೇಕು. ಈ ರೀತಿ ಅಪ್ಲೋಡ್ ಮಾಡಿದ್ರೆ ಸಾಕು. ನೀವು ಲಕ್ಕಿ ಡ್ರಾ ನಲ್ಲಿ ಪಾಲ್ಗೊಳ್ಳಬಹುದು.

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಎಲ್ಲರಿಗೂ ಹಬ್ಬದ ಭರ್ಜರಿ ಗಿಫ್ಟ್! ಒನ್ ಟು ಡಬಲ್ ಉಳಿತಾಯ

ಇದರಿಂದ ಏನು ಪ್ರಯೋಜನ?

Mera Bill Mera adhikarಪ್ರತಿ ತಿಂಗಳು 800 ಜನರನ್ನು ಆಯ್ಕೆ ಮಾಡಿ ಅವರಿಗೆ 10,000 ರೂ. ಪ್ರೈಸ್ ಕೊಡಲಾಗುತ್ತದೆ. ಅದೇ ರೀತಿ ಲಕ್ಕಿ ಡ್ರಾದಲ್ಲಿ ಆಯ್ಕೆಯಾದ 10 ಜನರಿಗೆ 10 ಲಕ್ಷ ರೂಪಾಯಿಗಳು ಕೂಡ ಬರುತ್ತದೆ. ಅಷ್ಟೇ ಅಲ್ಲ ಮೂರು ತಿಂಗಳಿಗೆ ಒಮ್ಮೆ ಬಂಪರ್ ಡ್ರಾ ಕೂಡ ಮಾಡಲಾಗುತ್ತಿದ್ದು ಆಯ್ಕೆಯಾದ ಇಬ್ಬರಿಗೆ ಒಂದು ಕೋಟಿ ರೂಪಾಯಿಗಳ ರಿವಾರ್ಡ್ ಕೂಡ ಕೊಡಲಾಗುತ್ತದೆ.

ಇನ್ನು ಈ ಲಕ್ಕಿ ಡ್ರಾದಲ್ಲಿ (Lucky Draw) ನಿಮ್ಮ ಹೆಸರು ಬರಬೇಕು ಅಂದ್ರೆ ಒಬ್ಬ ವ್ಯಕ್ತಿ ಒಂದು ತಿಂಗಳಿಗೆ ಗರಿಷ್ಠ 25 ಇನ್ ವಾಯ್ಸ್ ಅನ್ನು ಅಪ್ಲೋಡ್ ಮಾಡಬಹುದು. ಇನ್ನು ಅಪ್ಲೋಡ್ ಮಾಡಬೇಕಾಗಿರುವ ಬಿಲ್ ನ ಕನಿಷ್ಠ ಮೊತ್ತ 200 ರೂಪಾಯಿಗಳು.

ಬಿಪಿಎಲ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಆಫರ್! ಸರ್ಕಾರದಿಂದ ಸಿಗುತ್ತೆ 5 ಲಕ್ಷ

ಯೋಜನೆಯ ಉದ್ದೇಶ ಏನು?

ಕೇಂದ್ರ ಸರ್ಕಾರ ಪ್ರಾಯೋಗಿಕವಾಗಿ ಮೇರಾ ಬಿಲ್ ಮೇರಾ ಅಧಿಕಾರ್ ಎನ್ನುವ ಯೋಜನೆಯನ್ನು ಆರಂಭಿಸಿದೆ. ಸದ್ಯ ಗುಜರಾತ್, ಅಸ್ಸಾಂ, ಹರಿಯಾಣ, ಪಾಂಡಿಚೇರಿ, ದಮನ್ ಹಾಗೂ ದಿಯು ನಗರ ಹಾವೇಲಿ, ದಾದ್ರಾ ದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತದೆ

ಇದು ಸಕ್ಸಸ್ ಫುಲ್ ಆದರೆ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಕೂಡ ಜಾರಿಗೆ ಬರಲಿದೆ. ದೇಶದಲ್ಲಿ ಜಿಎಸ್‌ಟಿ ಯನ್ನು ಉತ್ತೇಜಿಸಲು ಹಾಗೂ ಫೇಕ್ ಜಿಎಸ್‌ಟಿ ಐಡಿ ಹೊಂದಿರುವವರನ್ನು ಗುರುತಿಸುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದೆ.

ಈಗಾಗಲೇ ಎಲೆಕ್ಟ್ರಿಕ್ ಇನ್ ವಾಯ್ಸ್ ಅನ್ನು ಪ್ರತಿಯೊಬ್ಬ ಗ್ರಾಹಕನಿಗೂ ಅಂಗಡಿ ಯವರು ಅಥವಾ ಮಾರಾಟಗಾರ ಕೊಡಬೇಕು ಎನ್ನುವ ಆದೇಶ ಕೂಡ ಬಂದಿದೆ. ಹಾಗಾಗಿ ಜಿಎಸ್‌ಟಿ ಸಂಖ್ಯೆ ಇಲ್ಲದೆ ಇರುವ ಬಿಲ್ ನಿಮ್ಮ ಕೈ ಸೇರಿದರೆ ಅದು ಫೇಕ್ ಎಂದು ನೀವು ದೂರು ಕೂಡ ದಾಖಲಿಸಬಹುದು.

ಕೇಂದ್ರ ಸರ್ಕಾರದ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಸದ್ಯದಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಆರಂಭವಾಗಬಹುದು ಹಾಗಾಗಿ ಇವತ್ತಿನಿಂದಲೇ ನಿಮ್ಮ ಖರೀದಿಯ ಬಿಲ್ ಅನ್ನು ಮಾರಾಟಗಾರರ ಬಳಿ ಕೇಳಿ ಪಡೆದುಕೊಳ್ಳಿ ಹಾಗೂ ಸಂಗ್ರಹಿಸಿಟ್ಟುಕೊಳ್ಳಿ.

Mera Bill Mera adhikar Lucky Draw Scheme Details

Follow us On

FaceBook Google News

Mera Bill Mera adhikar Lucky Draw Scheme Details