ಈ ಪೋಸ್ಟ್ ಆಫೀಸ್ ಸ್ಕೀಮ್‌ನಲ್ಲಿ ಗಂಡ-ಹೆಂಡತಿಗೆ ಸಿಗುತ್ತೆ 11,000 ಖಚಿತ ಆದಾಯ - Monthly Income Scheme

ಅಲ್ಪ ಜಮೆಯಿಂದ ಪ್ರಾರಂಭಿಸಿ, ವರ್ಷಕ್ಕೆ ಶೇಕಡಾ 7.4ರಷ್ಟು ಖಚಿತ ಲಾಭ. ಪತ್ನಿ-ಪತಿ ಸೇರಿ ₹18 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ₹11,100 ಲಾಭ ಸಿಗುವ ಬಂಪರ್ ಯೋಜನೆ.

  • ಪೋಸ್ಟ್‌ಆಫೀಸ್ ಮಾಸಿಕ ಆದಾಯ ಯೋಜನೆಗೆ (POMIS) 7.4% ಬಡ್ಡಿ
  • ₹18 ಲಕ್ಷ ಜಮೆ ಮಾಡಿದರೆ ತಿಂಗಳಿಗೆ ₹11,100 ಖಚಿತ ಆದಾಯ
  • ಸಿಂಪಲ್ ಪ್ರೊಸೆಸ್, ಸರ್ಕಾರದ ಗ್ಯಾರಂಟಿ ಇರುವ ಯೋಜನೆ

Savings Scheme : ಆದಾಯದ ಖಚಿತ ಮೂಲ ಬೇಕು, ಮಾರುಕಟ್ಟೆ ನಷ್ಟಗಳಿಂದ ದೂರ ಇರಬೇಕು ಅಂತ ಯೋಚಿಸುತ್ತಿದ್ದರೆ, ಪೋಸ್ಟ್‌ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme – POMIS) ನಿಮಗೆ ಸೂಕ್ತ ಆಯ್ಕೆ.

ಬಹುಮಂದಿಗೆ ಇದೊಂದು ಸ್ಥಿರ ಹಾಗೂ ಭದ್ರ ಹೂಡಿಕೆ ಮಾದರಿಯಾಗಿದ್ದು, ಸೀನಿಯರ್ ಸಿಟಿಜನ್‌, ನಿವೃತ್ತಿ ಪಡೆದವರು, ಗೃಹಿಣಿಯರು ಹಾಗೂ ಲೋ ರಿಸ್ಕ್ ಹೂಡಿಕೆ ಬಯಸುವವರನ್ನು ಗಮನದಲ್ಲಿಟ್ಟು ಈ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಯುಪಿಐ ಉಚಿತ ಸೇವೆ ಇಲ್ಲ, ಫೋನ್‌ಪೇ, ಗೂಗಲ್‌ಪೇ ಬಳಕೆದಾರರಿಗೆ ಶಾಕ್

ಈ ಯೋಜನೆಯು ವರ್ಷಕ್ಕೆ ಶೇಕಡಾ 7.4ರಷ್ಟು ಬಡ್ಡಿದರ ನೀಡುತ್ತದೆ. ಈ ಬಡ್ಡಿ ತಿಂಗಳಿಗೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಉದಾಹರಣೆಗೆ ಪತಿ-ಪತ್ನಿ ಸೇರಿ ₹18 ಲಕ್ಷ ಹೂಡಿಕೆ ಮಾಡಿದರೆ, ವರ್ಷಕ್ಕೆ ₹1,33,200 ಬಡ್ಡಿ ಲಭಿಸುತ್ತದೆ. ಇದನ್ನು ತಿಂಗಳಿಗೆ ಹಂಚಿದರೆ ₹11,100 ಖಚಿತ ಆದಾಯ ಬರುತ್ತದೆ – ಅದು ಸಹ ಸರ್ಕಾರದ ಭದ್ರತೆಗೆ ಒಳಪಟ್ಟಿದ್ದು, ಭರವಸೆ ಇರುವದಾಗಿದೆ.

ಹೂಡಿಕೆಗೆ ಕನಿಷ್ಠ ₹1000 ಬೇಕಾಗಿದ್ದು, ಒಬ್ಬ ವ್ಯಕ್ತಿಯ ಸಿಂಗಲ್ ಖಾತೆಗೆ ಗರಿಷ್ಠ ₹9 ಲಕ್ಷವರೆಗೆ ಹಾಗೂ ಜಾಯಿಂಟ್ ಖಾತೆಗೆ ₹18 ಲಕ್ಷವರೆಗೆ ಹೂಡಿಕೆ ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಪೋಷಕರು ಅಥವಾ ಗಾರ್ಡಿಯನ್ ಸಹ ನಿರ್ವಹಿಸಬಹುದು.

ಅಕೌಂಟ್ ತೆರೆಯುವುದು ಸುಲಭ. ಹತ್ತಿರದ ಪೋಸ್ಟ್‌ಆಫೀಸ್‌ಗೆ ಭೇಟಿ ನೀಡಿ, ಅರ್ಜಿ ನಮೂನೆ (POMIS form) ತುಂಬಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಫೋಟೋ ಹೀಗೆ ಬೇಕಾದ ದಾಖಲೆಗಳನ್ನು ಸಲ್ಲಿಸಿ.

ಇದನ್ನೂ ಓದಿ: ಕನ್ನಡ ಗೊತ್ತಿದ್ರೆ ಎಸ್‌ಬಿಐನಲ್ಲಿ ಭಾರೀ ಉದ್ಯೋಗಾವಕಾಶ! ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ

ಹಣವನ್ನು ನಗದು, ಚೆಕ್ ಅಥವಾ ಆನ್‌ಲೈನ್ ಮೂಲಕ ಠೇವಣಿ ಮಾಡಬಹುದು. ಖಾತೆ ಆಕ್ಟಿವ್ ಆದ ಬಳಿಕ, ತಿಂಗಳಿಗೆ ಬಡ್ಡಿ ನೇರವಾಗಿ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ (Bank Account) ಜಮೆಯಾಗುತ್ತದೆ.

ಇದು ಮಾರುಕಟ್ಟೆಯ ಅಸ್ಥಿರತೆಗಳಿಗೆ ಸಿಲುಕದೆ, ಗ್ಯಾರಂಟಿ ಇರುವ ಆದಾಯ ಬೇಕು ಅನ್ನುವವರಿಗೆ ಸೂಕ್ತವಾಗಿರುವ ಯೋಜನೆ. ಕಡಿಮೆ ಮೊತ್ತದಿಂದ ಆರಂಭಿಸಬಹುದಾದ ಈ ಯೋಜನೆಯು ಹೆಚ್ಚಿನ ಆಯ್ಕೆ ನೀಡುತ್ತದೆ.

ನಿತ್ಯದ ಅಪ್‌ಡೇಟ್ಸ್‌ಗಾಗಿ ಯಾವಾಗಲೂ Kannada News Today ತಪ್ಪದೆ ವೀಕ್ಷಿಸಿ.

Monthly Income with Post Office Scheme

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories