ಹಿರಿಯ ನಾಗರೀಕರಿಗೆ ಕೇಂದ್ರದಿಂದ ಸಿಹಿ ಸುದ್ದಿ, ತಿಂಗಳಿಗೆ ಸಿಗುತ್ತೆ ₹3000! ಈ ಯೋಜನೆ ಬಗ್ಗೆ ನಿಮಗೆ ಗೊತ್ತಾ?

Pension Scheme : ಇದೀಗ ಹಿರಿಯರಿಗಾಗಿ ಕೇಂದ್ರ ಸರ್ಕಾರ ಒಂದು ಹೊಸ ಪೆನ್ಶನ್ ಸ್ಕೀಮ್ ತಂದಿದ್ದು, ಈ ಸ್ಕೀಮ್ ಮೂಲಕ ಹಿರಿಯರು ಪ್ರತಿ ತಿಂಗಳು ಪೆನ್ಶನ್ ಪಡೆಯಬಹುದು.

Pension Scheme : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿರುವ ಬಡವರಿಗೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳಿಂದ ಬಡವರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಅವರು ಮುಂದುವರಿಯಬೇಕು ಎನ್ನುವ ಉದ್ದೇಶವಿದೆ.

ಬಡವರಿಗೆ ಮಾತ್ರವಲ್ಲದೆ ದೇಶದಲ್ಲಿ ಹಿರಿಯ ನಾಗರೀಕರು (Senior Citizen) ತಮ್ಮ ವಯಸ್ಸಾದ ಕಾಲದಲ್ಲಿ ಕಷ್ಟ ಪಡಬಾರದು ಎಂದು ಅವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

Pension

ಇದೀಗ ಹಿರಿಯರಿಗಾಗಿ ಕೇಂದ್ರ ಸರ್ಕಾರ ಒಂದು ಹೊಸ ಪೆನ್ಶನ್ ಸ್ಕೀಮ್ (Pension Scheme) ತಂದಿದ್ದು, ಈ ಸ್ಕೀಮ್ ಮೂಲಕ ಹಿರಿಯರು ಪ್ರತಿ ತಿಂಗಳು ಪೆನ್ಶನ್ ಪಡೆಯಬಹುದು. ಈ ಯೋಜೆನಯಲ್ಲಿ ಹಿರಿಯ ನಾಗರೀಕರು ಹೂಡಿಕೆ ಮಾಡುವುದರಿಂದ ವಯಸ್ಸಾದ ಸಮಯಕ್ಕೆ ಪ್ರತಿ ತಿಂಗಳು ಪೆನ್ಶನ್ ಪಡೆಯಬಹುದು.

ನೀವು ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆಯ ಲಾಭ ಪಡೆದುಕೊಳ್ಳಬಹುದು.

ಆಗಸ್ಟ್ 1 ರಿಂದ ಹೊಸ ನಿಯಮಗಳು.. LPG ಸಿಲಿಂಡರ್‌, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್‌ ಸೇರಿದಂತೆ 8 ಬದಲಾವಣೆ!

ಕೇಂದ್ರ ಸರ್ಕಾರವು ದೇಶದ ಜನರಿಗಾಗಿ ಅದರಲ್ಲೂ ಹಿರಿಯ ನಾಗರೀಕರಿಗಾಗಿ, ವಿಶೇಷವಾಗಿ ಒಂದು ಪಿಂಚಣಿ ಯೋಜನೆ ತಂದಿದೆ. ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme). ಇದೊಂದು ಒಳ್ಳೆಯ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ನೀವು ಕಡಿಮೆ ಹಣ ಹೂಡಿಕೆ ಮಾಡಿ, ಯೋಜನೆ ಶುರು ಮಾಡುವ ಮೂಲಕ ಹೆಚ್ಚು ಲಾಭ ಪಡೆಯಬಹುದು.

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, ಈ ಯೋಜನೆಯನ್ನು ನೀವು 25ನೇ ವಯಸ್ಸಿನಲ್ಲಿ ಶುರು ಮಾಡಿ, ತಿಂಗಳಿಗೆ ₹1500 ಪಾವತಿ ಮಾಡಬಹುದು. ಈ ಹೂಡಿಕೆ ನಿಮಗೆ ದಿನಕ್ಕೆ ಕೇವಲ 50 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ.

The Govt Scheme National Pension System Benefits Details60 ವರ್ಷದ ಅವಧಿಗೆ ಈ ಯೋಜನೆಯಲ್ಲಿ ಹೂಡಿಕೆಯನ್ನು ಲೆಕ್ಕ ಹಾಕಿದರೆ ಒಟ್ಟಾರೆಯಾಗಿ ನೀವು ₹57,42,416 ರೂಪಾಯಿ ಹೂಡಿಕೆ ಮಾಡಿರುತ್ತೀರಿ. ಈ ಯೋಜನೆಯಲ್ಲಿ ನಿಮಗೆ ವಾರ್ಷಿಕ 10% ಬಡ್ಡಿ ನೀಡಲಾಗುತ್ತದೆ.

ನಿಮಗೆ 75 ವರ್ಷ ಆಗುವವರೆಗು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹದು. ಈ ಯೋಜನೆಯಲ್ಲಿ ಪೂರ್ತಿ 100% ವರ್ಷಾಶನ ಖರೀದಿ ಮಾಡಿದರೆ., ತಿಂಗಳಿಗೆ ₹28,712 ರೂಪಾಯಿ ಪಡೆಯುತ್ತೀರಿ.. ಒಂದು ವೇಳೆ 40% ವರ್ಷಾಶನ ಅರಿಸಿಕೊಂಡರೆ ತಿಂಗಳಿಗೆ ₹11,485 ರೂಪಾಯಿ ಪೆನ್ಶನ್ ಪಡೆಯಬಹುದು. ಅಥವಾ ಒಂದೇ ಸಾರಿ ₹34 ಲಕ್ಷ ರೂಪಾಯಿ ಪಡೆಯಬಹುದು.

₹500 ರೂಪಾಯಿ ನೋಟಿನಲ್ಲಿ ಈ ನಕ್ಷತ್ರ ಗುರುತು ಇದ್ದರೆ ನಕಲಿ! ಏನೀ ಸುದ್ದಿಯ ಅಸಲಿಯತ್ತು? ಇಲ್ಲಿದೆ ಸ್ಪಷ್ಟತೆ

ಮತ್ತೊಂದು ಆಯ್ಕೆ, ಈ ಯೋಜನೆಯಲ್ಲಿ ನೀವು ದಿನಕ್ಕೆ 100 ರೂಪಾಯಿ ಹಾಗೆ ತಿಂಗಳಿಗೆ ₹3000 ಉಳಿತಾಯ ಮಾಡುತ್ತಾ ಬಂದರೆ.. 60 ವರ್ಷಕ್ಕೆ ₹1,14,84,831 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಈ ಯೋಜನೆಯಲ್ಲಿ ವರ್ಷಾಶನ ಆಯ್ಕೆ ಮಾಡಿದರೆ ತಿಂಗಳಿಗೆ ₹57,000 ಪೆನ್ಶನ್ ಪಡೆಯುತ್ತೀರಿ. ಈ ಯೋಜನೆಯ ಮೂಲಕ ನಿವೃತ್ತಿ ನಂತರ ₹68 ಲಕ್ಷ ಸಿಗುತ್ತದೆ.

National Pension Scheme Eligibility and Benefits