₹500 ರೂಪಾಯಿ ನೋಟಿನಲ್ಲಿ ಈ ನಕ್ಷತ್ರ ಗುರುತು ಇದ್ದರೆ ನಕಲಿ! ಏನೀ ಸುದ್ದಿಯ ಅಸಲಿಯತ್ತು? ಇಲ್ಲಿದೆ ಸ್ಪಷ್ಟತೆ

ರೂ. 500ರ ನೋಟಿನ ಸರಣಿ ಸಂಖ್ಯೆ ನಕ್ಷತ್ರ (*) ಚಿಹ್ನೆಯನ್ನು ಹೊಂದಿದ್ದರೆ ಅಂತಹ ನೋಟುಗಳು ನಕಲಿ ಎಂದು ಸುದ್ದಿ ಹರಡಲಾಗುತ್ತಿದೆ. ಸಾರ್ವಜನಿಕ ವಲಯದ ಸುದ್ದಿ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ - PIB ಯ ಸತ್ಯ ಪರಿಶೀಲನೆಯ ಪ್ರಕಾರ..

ಸಾಮಾಜಿಕ ಜಾಲತಾಣಗಳಲ್ಲಿ (Social Media) ನಿತ್ಯ ವಿವಿಧ ಸಂದೇಶಗಳು ವೈರಲ್ ಆಗುತ್ತಿವೆ. ಆದರೆ ಪ್ರತಿಯೊಂದು ಸಂದೇಶವೂ (Fake News) ನಿಜವಲ್ಲ. ಅವುಗಳಲ್ಲಿ ಹೆಚ್ಚಿನವು ನಕಲಿ ಸಂದೇಶಗಳಾಗಿವೆ. ಕೆಲವೊಮ್ಮೆ ಅನೇಕ ಜನರು ನಕಲಿ ಸಂದೇಶಗಳಿಂದ ಮೋಸ ಹೋಗುತ್ತಾರೆ. ಪ್ರಸ್ತುತ ರೂ. 500 ನೋಟುಗಳ ಬಗ್ಗೆ ಇಂತಹ ನಕಲಿ ಸಂದೇಶವೊಂದು ವೈರಲ್ ಆಗುತ್ತಿದೆ.

ರೂ. 500ರ ನೋಟಿನ ಸರಣಿ ಸಂಖ್ಯೆ ನಕ್ಷತ್ರ (*) ಚಿಹ್ನೆಯನ್ನು ಹೊಂದಿದ್ದರೆ ಅಂತಹ ನೋಟುಗಳು ನಕಲಿ (Fake Notes) ಎಂದು ಸುದ್ದಿ ಹರಡಲಾಗುತ್ತಿದೆ. ಸಾರ್ವಜನಿಕ ವಲಯದ ಸುದ್ದಿ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ – PIB ಯ ಸತ್ಯ ಪರಿಶೀಲನೆಯ (Fact Check) ಪ್ರಕಾರ.. ಸಾಮಾಜಿಕ ಜಾಲತಾಣಗಳಲ್ಲಿ 500 ನೋಟಗಳ ಬಗ್ಗೆ ಹರಡಿರುವ ಸುದ್ದಿ ಸಂಪೂರ್ಣ ತಪ್ಪು. ನಕ್ಷತ್ರ ಚಿಹ್ನೆ ಇರುವ 500 ರೂಪಾಯಿ ನೋಟುಗಳು ನಕಲಿಯಲ್ಲ.

ಕೇವಲ 5 ಸಾವಿರ ಬಂಡವಾಳ, ಮನೆಯಿಂದಲೇ ಮಾಡಿ! ತಿಂಗಳಿಗೆ 60 ಸಾವಿರ ಆದಾಯ ಕೊಡೋ ಬಿಸಿನೆಸ್ ಐಡಿಯಾ.. ಕೈತುಂಬಾ ದುಡ್ಡು

₹500 ರೂಪಾಯಿ ನೋಟಿನಲ್ಲಿ ಈ ನಕ್ಷತ್ರ ಗುರುತು ಇದ್ದರೆ ನಕಲಿ! ಏನೀ ಸುದ್ದಿಯ ಅಸಲಿಯತ್ತು? ಇಲ್ಲಿದೆ ಸ್ಪಷ್ಟತೆ - Kannada News

2016 ರಲ್ಲಿ ರೂ.500 ಮತ್ತು ರೂ.1000 ನೋಟುಗಳ ಅಮಾನ್ಯೀಕರಣದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್- RBI ನಕ್ಷತ್ರ (*) ಚಿಹ್ನೆಯೊಂದಿಗೆ ಸಂಖ್ಯೆಯ ಸರಣಿಯ ನೋಟುಗಳನ್ನು ಪರಿಚಯಿಸಿತು. ಹಾಗಾಗಿ ಇಂತಹ ನೋಟುಗಳು ನಕಲಿ ಎಂಬ ಸಂದೇಶಗಳನ್ನು ನಂಬಬೇಡಿ.

ಭಾರತೀಯ ಕರೆನ್ಸಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ನೀವು ಹೊಂದಿದ್ದರೆ RBI ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ಇನ್ನು ಇಂತಹ ಸಂದೇಶಗಳನ್ನು ನಂಬಿದ ಹಲವರು ಈಗಾಗಲೇ ತಮ್ಮ ಬಳಿಯಿರುವ ಇಂತಹ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ, ಇನ್ನೂ ಕೆಲವರು ಹೇಗಾದರೂ ಮಾಡಿ ಬದಲಾಯಿಸಿಕೊಳ್ಳಬೇಕು ಎಂದು ನೋಡುತ್ತಿದ್ದಾರೆ.

ಹರಿದ ನೋಟುಗಳನ್ನು ಉಚಿತವಾಗಿ ಬದಲಾಯಿಸುವುದು ಹೇಗೆ? ಬ್ಯಾಂಕ್ ನಿಯಮಗಳೇನು ಗೊತ್ತೇ?

ಈ ಸತ್ಯ ಪರಿಶೀಲನೆಯ ನಂತರವಾದರೂ ಅಂತಹ ನಕಲಿ ಸಂದೇಶಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಆ ನೋಟು ಸಂಪೂರ್ಣ ಒರಿಜಿನಲ್ ನೋಟಾಗಿತ್ತು ಚಲಾವಣೆಗೆ ಯಾವುದೇ ತೊಂದರೆಯಿಲ್ಲ ಎನ್ನಲಾಗಿದೆ.

PIB Fact Check About Rs 500 Currency Note with Star Symbol

Follow us On

FaceBook Google News

PIB Fact Check About Rs 500 Currency Note with Star Symbol