ಮಾರುಕಟ್ಟೆಯಲ್ಲಿ ಬಾರೀ ಸದ್ದು ಮಾಡುತ್ತಿರುವ ಹೊಸ ಬೈಕ್‌ಗಳು ಇವು! ಹೋಂಡಾ, ಕೆಟಿಎಂ, ಕವಾಸಕಿ
ಈ ವಾರ ಮಾರುಕಟ್ಟೆಗೆ ಬಂದಿರುವ ಬೈಕ್ ಗಳ (New Bikes) ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ
ಹಬ್ಬದ ಸೀಸನ್ ಶುರುವಾಗಿದೆ. ಈ ಸಮಯದಲ್ಲಿ ಅನೇಕ ಜನರು ಹೊಸ ವಾಹನಗಳನ್ನು ಖರೀದಿಸಲು ಬಹಳ ಆಸಕ್ತಿ ವಹಿಸುತ್ತಾರೆ. ಹಬ್ಬದ ಶುಭ ಸಮಯದಲ್ಲಿ ಬೈಕ್ ಖರೀದಿ (Buy Bike) ಮಾಡಲು ಇಷ್ಟ ಪಡುತ್ತಾರೆ.
ಇನ್ನೊಂದೆಡೆ ಈ ಸಮಯದಲ್ಲಿ ಸಾಕಷ್ಟು ರಿಯಾಯಿತಿ ಕೊಡುಗೆಗಳು (Discount Offers) ಲಭ್ಯವಿರುವ ಕಾರಣ ಈ ವೇಳೆ ಖರೀದಿ ಸಹ ಜೋರಾಗಿದೆ. ಅಂತಹವರಿಗಾಗಿ ಈ ವಾರ ಮಾರುಕಟ್ಟೆಗೆ ಬಂದಿರುವ ಬೈಕ್ ಗಳ (New Bikes) ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 11 ಸಾವಿರ ರಿಯಾಯಿತಿ, ಸೀಮಿತ ಅವಧಿಯ ಕೊಡುಗೆ! ಮಿಸ್ ಮಾಡ್ಕೋಬೇಡಿ
Honda CB300F
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ನವೀಕರಿಸಿದ ‘CB300F’ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ ರೂ. 1.70 ಲಕ್ಷ (ಎಕ್ಸ್ ಶೋ ರೂಂ). ದೇಶಾದ್ಯಂತದ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬೈಕ್ ಲಭ್ಯವಿದೆ.
ಬೈಕ್ 24 ಹಾರ್ಸ್ ಪವರ್ ಮತ್ತು 25.6 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಹೊರಹಾಕುವ 293 cc ಆಯಿಲ್-ಕೂಲ್ಡ್ SOHC ಎಂಜಿನ್‌ನಿಂದ ಚಾಲಿತವಾಗಿದೆ.
ಇದು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಸೀಕ್ವೆನ್ಷಿಯಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. 14.1 ಲೀಟರ್ ಇಂಧನ ಸಾಮರ್ಥ್ಯ ಹೊಂದಿರುವ ಈ ಬೈಕ್ ಲಾಂಗ್ ರೈಡ್ ಗೂ ಸೂಕ್ತವಾಗಿದೆ. ಇದು ಕೇವಲ 7.94 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಪಡೆಯುತ್ತದೆ.
ಬರೋಬ್ಬರಿ 34km ಮೈಲೇಜ್ ಕೊಡುವ ಈ ಕಾರ್ ಗೆ ಭಾರಿ ಡಿಮ್ಯಾಂಡ್! ಷೋರೂಮ್ ಮುಂದೆ ಜನಸಂದಣಿ
Kawasaki Ninja ZX-4R
ಕವಾಸಕಿ ನಿಂಜಾ ZX-4R 399 cc ಲಿಕ್ವಿಡ್-ಕೂಲ್ಡ್ ಇನ್‌ಲೈನ್-ಫೋರ್ ಎಂಜಿನ್‌ನಿಂದ ಸ್ಲಿಪ್ಪರ್ ಕ್ಲಚ್‌ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಈ ಎಂಜಿನ್ 14,500 rpm ನಲ್ಲಿ 76 bhp ಪವರ್ ಮತ್ತು 13,000 rpm ನಲ್ಲಿ 39 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
465 ಕಿಮೀ ಮೈಲೇಜ್! ಟಾಟಾ ಮೋಟಾರ್ಸ್ Nexon EV ಮತ್ತು Nexon ರೂಪಾಂತರಗಳು ಮಾರುಕಟ್ಟೆಗೆ ಎಂಟ್ರಿ
New KTM 390 Duke
ಇದು 45 ಹಾರ್ಸ್ ಪವರ್ ಮತ್ತು 39 Nm ಟಾರ್ಕ್ ಅನ್ನು ನೀಡುತ್ತದೆ. ಕಂಪನಿಯು ಈಗಾಗಲೇ ಈ ಬೈಕ್‌ಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.
New Bikes Launches in India, Honda CB300F, Kawasaki Ninja ZX-4R, New KTM 390 Duke
Follow us On
Google News |