ಇನ್ಮುಂದೆ ಗ್ಯಾಸ್ ಸಿಲಿಂಡರ್ ಪಡೆಯೋಕೆ ಹೊಸ ನಿಯಮ! ದೇಶಾದ್ಯಂತ ಹೊಸ ರೂಲ್ಸ್
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಬಳಕೆಯಾಗುತ್ತದೆ. ಸೌದೆ ಒಲೆಯಲ್ಲಿ ಯಾರೂ ಅಡುಗೆ ಮಾಡದಂತೆ ಎಲ್ಲರಿಗೂ ಎಲ್ ಪಿಜಿ ಗ್ಯಾಸ್ ಸಿಲಿಂಡರ್ (Gas Cylinder) ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವೂ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆ (Free Gas Connection) ಜಾರಿಗೆ ತಂದಿದೆ.
ಈ ಯೋಜನೆಯ ಭಾಗವಾಗಿ ಅನೇಕ ಮಹಿಳೆಯರು ಉಚಿತ ಗ್ಯಾಸ್ ಸಂಪರ್ಕಗಳನ್ನು (Gas Cylinder) ಪಡೆದಿದ್ದಾರೆ. ದೇಶಾದ್ಯಂತ ಅಡುಗೆ ಅನಿಲ ಸಿಲಿಂಡರ್ ಬಳಸುತ್ತಿರುವ ಗ್ರಾಹಕರ ಒಟ್ಟು ಸಂಖ್ಯೆ 14.45 ಕೋಟಿ.
ಪ್ರಸ್ತುತ 10 ಕೋಟಿ 55 ಲಕ್ಷದ 263 ಜನರು ನೇರ ಸಹಾಯಧನ ಯೋಜನೆಗೆ ಸೇರಿದ್ದಾರೆ. ಆದರೆ ಇನ್ಮುಂದೆ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಪಡೆಯಲು ಬಯೋಮೆಟ್ರಿಕ್ ವಿವರಗಳು, ಬೆರಳಚ್ಚು ಮತ್ತು ರೆಟಿನಾ ಸ್ಕ್ಯಾನ್ ಅಗತ್ಯವಿದೆ ಎಂದು ನಿರ್ಧರಿಸಿವೆ. ಗ್ರಾಹಕರ ದೃಢೀಕರಣವನ್ನು ಪರಿಶೀಲಿಸಲು ಬೆರಳಚ್ಚು ಮಾಡಲಾಗುತ್ತದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಮೊದಲು ಬ್ಯಾಂಕಿಗೆ ಹೋಗಿ ಈ ಫಾರ್ಮ್ ಭರ್ತಿ ಮಾಡಿ, ಇಲ್ಲದಿದ್ದರೆ ಹಣ ಕಟ್ ಆಗುತ್ತೆ!
ಬೆರಳಚ್ಚು ಕಡ್ಡಾಯವೇ?
ತೈಲ ಕಂಪನಿಗಳ ಪ್ರಕಾರ, ಪ್ರತಿಯೊಬ್ಬ ಗ್ರಾಹಕರು ತಮ್ಮ ಬೆರಳಚ್ಚುಗಳನ್ನು ಎಲೆಕ್ಟ್ರಾನಿಕ್ ಮೂಲಕ ನೋಂದಾಯಿಸಿಕೊಳ್ಳಬೇಕು. ಅಲ್ಲದೆ, ಮುಖ ನೋಂದಣಿ ಮೂಲಕ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ಅದಕ್ಕಾಗಿ ಗ್ರಾಹಕರು ಏಜೆನ್ಸಿಗೆ ತೆರಳಿ ಬೆರಳಚ್ಚು ದಾಖಲಿಸಿಕೊಳ್ಳಬೇಕು. ಆದರೆ ಹಿರಿಯ ನಾಗರಿಕರನ್ನು ಅವರ ಮನೆಗಳಲ್ಲಿ ಏಜೆನ್ಸಿ ಸಿಬ್ಬಂದಿಯಿಂದ ಬೆರಳಚ್ಚು ಮತ್ತು ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ.
ಮನೆ ಬಾಡಿಗೆ ನೀಡೋಕೆ ರೆಂಟ್ ಅಗ್ರಿಮೆಂಟ್ ಜೊತೆ ಬೇಕು ಪೊಲೀಸ್ ವೆರಿಫಿಕೇಶನ್!
ಆದಾಗ್ಯೂ, ಇದು ಕಡ್ಡಾಯವಲ್ಲ. ಬೆರಳಚ್ಚು ನೋಂದಣಿಯಾಗದಿದ್ದರೂ ಸಿಲಿಂಡರ್ ಲಭ್ಯವಿದೆ. ಬೆರಳಚ್ಚು ನೋಂದಣಿಗೆ ಯಾವುದೇ ಸಮಯದ ಮಿತಿಯಿಲ್ಲ. ಯಾವುದೇ ಹಂತಗಳಿಲ್ಲದೆ ಇದನ್ನು ಉಚಿತವಾಗಿ ಮಾಡಬಹುದು. ಜನರು ಭಯಪಡುವ ಅಗತ್ಯವಿಲ್ಲ. ಗ್ರಾಹಕರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಈ ಪ್ರಕ್ರಿಯೆಯನ್ನು ಮಾಡಲಾಗಿದೆಯಂತೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣಕ್ಕೆ ಮಿತಿ ಎಷ್ಟು ಗೊತ್ತಾ? ಎಷ್ಟು ಹಣ ಇಡಬಹುದು?
New rule to get gas cylinder, New rules across the country