ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡೋರಿಗೆ ಬಂತು ಹೊಸ ರೂಲ್ಸ್! ಭೂ ಮಾಲೀಕರಿಗೆ ಆದೇಶ
ನಮ್ಮ ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ ಹಾಗಾಗಿ ತಮ್ಮದೇ ಆಗಿರುವ ಸೂರು (Own House) ಹಲವರಿಗೆ ಕೇವಲ ಕನಸಾಗಿ ಬಿಟ್ಟಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯನ್ನು (Agriculture land) ಕೂಡ ಪರಿವರ್ತಿಸಿ ಕಮರ್ಷಿಯಲ್ ಕಟ್ಟಡ (Commercial building) ಅಥವಾ ಮನೆ ನಿರ್ಮಾಣಕ್ಕೆ ಜನ ಮುಂದಾಗಿದ್ದಾರೆ.
ಆದರೆ ಈ ವಿಚಾರದಲ್ಲಿ ಸರ್ಕಾರದ ನಿಯಮಗಳ ಬಗ್ಗೆ ಗಮನ ಹರಿಸಲೇಬೇಕು ಇಲ್ಲವಾದರೆ ಮುಂದೆ ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳೋಕೆ ಸಾಲ (Home Loan) ಮಾಡಿ ಕಟ್ಟುತ್ತಾರೆ, ಆದರೆ ಆ ರೀತಿ ಮಾಡಿದ ಸಾಲ (Loan) ಉಪಯೋಗ ಆಗಬೇಕು ಅಂದರೆ ನಿಯಮಗಳನ್ನು ಪಾಲಿಸಬೇಕು.
ಸ್ವಂತ ಮನೆ ಕಟ್ಟಿಕೊಳ್ಳಲು ಮೋದಿ ಸರ್ಕಾರದ ಹೊಸ ಯೋಜನೆ! ಬಾಡಿಗೆ ಮನೆಯಲ್ಲಿ ಇರೋರಿಗೆ ಗುಡ್ ನ್ಯೂಸ್
ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಸಾಧ್ಯವಿಲ್ಲ!
ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದರ ಬಗ್ಗೆ ಸರ್ಕಾರ (Government) ಅದರದೇ ರೂಲ್ಸ್ (rules) ಹೊಂದಿದೆ, ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲೇಬಾರದು ಎಂದಿಲ್ಲ ಆದರೆ ಇದಕ್ಕೆ ಪ್ರಮುಖವಾದ ನಿಯಮಗಳನ್ನು ಹೇಳಲಾಗಿದೆ. ನೀವು ಕೃಷಿ ಭೂಮಿಯ ಮಾಲೀಕರೇ ಆಗಿದ್ದರು ಕೂಡ ನಿಮ್ಮ ಜಮೀನಿನಲ್ಲಿ ಮನೆಯಲ್ಲಿ ನಿರ್ಮಿಸಿಕೊಳ್ಳಲು ಸರ್ಕಾರದ ಅನುಮತಿ ಬೇಕಾಗುತ್ತದೆ.
ಕೃಷಿ ಭೂಮಿಯ ಕನ್ವರ್ಷನ್;
ಕೃಷಿ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯುತ್ತಿರುವ ರೈತ ಅಥವಾ ಭೂ ಮಾಲೀಕ ಅದನ್ನು ಧ್ವಂಸ ಮಾಡಿ ಅಲ್ಲಿ ಮನೆ ನಿರ್ಮಾಣ ಅಥವಾ ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗೂ ಕೃಷಿ ಭೂಮಿಯನ್ನು ಮನೆ ನಿರ್ಮಾಣ ಮಾಡುವುದಕ್ಕೆ ಬಳಸುವುದಾದರೆ, ವಾಸ ಯೋಗ್ಯ ಭೂಮಿ ಎಂದು ಕನ್ವರ್ಷನ್ (convert) ಮಾಡಿಕೊಳ್ಳಬೇಕಾಗುತ್ತದೆ.
ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು, ಸಂಬಂಧಪಟ್ಟ ಕಚೇರಿಗೆ ನೀಡಿ ಕನ್ವರ್ಷನ್ ಮಾಡಿಕೊಳ್ಳಬಹುದು. ಇದಕ್ಕಾಗಿ ಗ್ರಾಮ ಪಂಚಾಯತ್ ಮುನ್ಸಿಪಾಲಿಟಿ ಹಾಗೂ ಇನ್ನಿತರ ಕಚೇರಿಯಿಂದ ಎನ್ ಓ ಸಿ (no objection certificate-NOC) ಪಡೆದುಕೊಳ್ಳಬೇಕು. ಈ ರೀತಿ ಕನ್ವರ್ಷನ್ ಮಾಡಿಕೊಳ್ಳಲು ಶುಲ್ಕವನ್ನು ಕೂಡ ಪಾವತಿಸಬೇಕು.
ಇನ್ಮುಂದೆ ಕೇವಲ ₹600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್; ಕ್ಯಾಬಿನೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ
ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯಾಗಿ ಕನ್ವರ್ಟ್ ಮಾಡಲು, ರಾಜ್ಯ ಆದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಈ ನಿಯಮ ಆಯಾ ರಾಜ್ಯದಲ್ಲಿ ಬೇರೆಬೇರೆಯಾಗಿರುತ್ತೆ ಎಂಬುದನ್ನು ಗಮನಿಸಿ.
ಕೃಷಿ ಭೂಮಿ ಖರೀದಿಸಿ ಕಟ್ಟಡ ನಿರ್ಮಾಣ ಮಾಡುವವರಿಗೆ ಹೊಸ ರೂಲ್ಸ್!
ಇನ್ನು ನೀವು ಕೃಷಿ ಭೂಮಿ ಖರೀದಿ ಮಾಡಿ ಅದರಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಯೋಚನೆ ಮಾಡಿದರೆ, ಬಹಳ ಜಾಗರೂಕತೆಯಿಂದ ಇರಬೇಕು. ನೀವು ಖರೀದಿ ಮಾಡಿದ ಜಮೀನಿನ ಮೇಲೆ ಸಾಲ (Loan) ಅಥವಾ ಇತರ ಸಮಸ್ಯೆ ಇದೆಯಾ ಎಂಬುದನ್ನು ಮೊದಲು ಪರಿಶೀಲಿಸಿ.
ಯಾವುದೇ ಕಾರಣಕ್ಕೂ ಸಂಬಂಧಪಟ್ಟ ಇಲಾಖೆಯಿಂದ NOC ಪಡೆದುಕೊಳ್ಳದೆ ಕಟ್ಟಡ ನಿರ್ಮಾಣ ಆರಂಭಿಸಬೇಡಿ. ಕಟ್ಟಡ ನಿರ್ಮಾಣವನ್ನು ಅಕ್ರಮವಾಗಿ ಮಾಡಿಕೊಳ್ಳುತ್ತಿರುವುದು ಕಂಡು ಬಂದರೆ ನಿರ್ಮಾಣ ಕಾರ್ಯವನ್ನು ಅರ್ಧದಲ್ಲಿಯೇ ಸರ್ಕಾರ ನಿಲ್ಲಿಸಬಹುದು.
ಮನೆ, ಆಸ್ತಿ, ಭೂಮಿಗೂ ಲಿಂಕ್ ಮಾಡ್ಬೇಕು ಆಧಾರ್ ಕಾರ್ಡ್! ಆಸ್ತಿ ಒಡೆತನಕ್ಕೆ ಹೊಸ ಕಾನೂನು
ಹಾಗಾಗಿ ಕೃಷಿ ಭೂಮಿಯನ್ನು ಕನ್ವರ್ಷನ್ ಮಾಡಿಕೊಂಡು ವಾಸ ಯೋಗ್ಯ ಭೂಮಿ ಎನ್ನುವ ದಾಖಲೆ ನೀಡಿ ನಂತರ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು.
New rules for building houses on agricultural land