ಇನ್ಮುಂದೆ ಕೇವಲ ₹600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್; ಕ್ಯಾಬಿನೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ

ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ (Gas cylinder) ಮೇಲೆ 200 ರೂಪಾಯಿಗಳು ಕಡಿತವನ್ನು ಕೇಂದ್ರ ಸರ್ಕಾರ (central government) ಘೋಷಿಸಿತ್ತು. ಮೊತ್ತವನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಉಜ್ವಲ ಯೋಜನೆಗೆ (Pradhan Mantri Ujjwala Yojana) ಸಂಬಂಧಪಟ್ಟ ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ (prime minister Narendra Modi ji) ಅವರನ್ನು ಒಳಗೊಂಡ ಸಂಪುಟ ಸಭೆ (cabinet meeting) ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.

ಈಗಾಗಲೇ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತಿದ್ದು, ಫಲಾನುಭವಿಗಳಿಗೆ ಸಿಗುತ್ತಿರುವ ಸಹಾಯಧನವನ್ನು (Subsidy) ಇನ್ನಷ್ಟು ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮನೆ, ಆಸ್ತಿ, ಭೂಮಿಗೂ ಲಿಂಕ್ ಮಾಡ್ಬೇಕು ಆಧಾರ್ ಕಾರ್ಡ್! ಆಸ್ತಿ ಒಡೆತನಕ್ಕೆ ಹೊಸ ಕಾನೂನು

ಇನ್ಮುಂದೆ ಕೇವಲ ₹600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್; ಕ್ಯಾಬಿನೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ - Kannada News

ಹೆಚ್ಚಳವಾಯಿತು ಉಜ್ವಲ ಯೋಜನೆಯ ಸಹಾಯಧನ:

ಇತ್ತೀಚಿನ ದಿನಗಳಲ್ಲಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ ಸಿಲಿಂಡರ್ (Gas cylinder) ಮೇಲೆ 200 ರೂಪಾಯಿಗಳು ಕಡಿತವನ್ನು ಕೇಂದ್ರ ಸರ್ಕಾರ (central government) ಘೋಷಿಸಿತ್ತು. ಮೊತ್ತವನ್ನು 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ರಕ್ಷಾ ಬಂಧನ ಹಾಗೂ ಓಣಂ ಸಮಯದಲ್ಲಿ 200 ರೂಪಾಯಿ ಸಬ್ಸಿಡಿ ನೀಡಿದ ಕೇಂದ್ರ ಸರ್ಕಾರ ಇದೀಗ ದೀಪಾವಳಿ, ದಸರಾ ಮೊದಲಾದ ಹಬ್ಬಕ್ಕೆ ಸಿಲೆಂಡರ್ (subsidy for cylinder) ಸಹಾಯಧನವನ್ನು 300 ರೂಗೆ ಹೆಚ್ಚಿಸುವುದರ ಮೂಲಕ, ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಸಂಪುಟ ಸಭೆಯ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ್ (Anurag Thakur) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.

ಕೋಳಿ ಫಾರಂ ಬ್ಯುಸಿನೆಸ್ ಮಾಡೋಕೆ ಸಿಗುತ್ತೆ ಸರ್ಕಾರದಿಂದ ಸಬ್ಸಿಡಿ! ದುಪ್ಪಟ್ಟು ಲಾಭ ಗಳಿಸಿ

Gas Cylinder Subsidy,ರಕ್ಷಾ ಬಂಧನ ಹಾಗೂ ಓಣಂ ಸಮಯದಲ್ಲಿ 200 ರೂಪಾಯಿ ಸಬ್ಸಿಡಿ ನೀಡಲಾಗಿತ್ತು ಅಂದರೆ 1,100 ರೂಪಾಯಿಗಳಿಗೆ ಗೃಹಿಣಿಯರಿಗೆ ಸಿಗುತ್ತಿದ್ದ ಗ್ಯಾಸ್ ಸಿಲೆಂಡರ್ 900ರೂ. ಗಳಿಗೆ ಸಿಗುವಂತೆ ಆಗಿತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ 700 ರೂಪಾಯಿಗಳಿಗೆ ಸಿಲಿಂಡರ್ ಸಿಗುತ್ತಿತ್ತು.

ಇದೀಗ ಕ್ಯಾಬಿನೆಟ್ ಸಭೆಯ ನಂತರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಹಾಯಧನವನ್ನು 200ರಿಂದ 300 ಗಳಿಗೆ ಹೆಚ್ಚಿಸಿದ್ದು, ಮಹಿಳೆಯರು 600ಗಳಿಗೆ ಎಲ್‌ಪಿಜಿ ಸಿಲಿಂಡರ್ (LPG Cylinder) ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯಕ್ಕೆ ಅನುಮೋದನೆ

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ದೇಶದ ಪ್ರಜೆಗಳಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಉಜ್ವಲ ಯೋಜನೆಯ ಅಡಿಯಲ್ಲಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ದರವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ತೆಲಂಗಾಣ (Telangana) ಪ್ರದೇಶದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯವನ್ನು ಅರಣ್ಯ ದೇವತೆಯ ಹೆಸರಿನಲ್ಲಿ ಆರಂಭಿಸಲು ಕೇಂದ್ರ ಅನುಮೋದನೆ ನೀಡಿದೆ.

ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ 889 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಕೇವಲ 7 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುತ್ತೆ 5000 ಪಿಂಚಣಿ; ಸರ್ಕಾರದ ಹೊಸ ಯೋಜನೆ

ಅರಿಶಿಣ ಮಂಡಳಿ ರಚನೆ

ನಮ್ಮ ದೇಶ ಅರಿಶಿಣ ಉತ್ಪಾದಿಸುವ ದೊಡ್ಡ ದೇಶವಾಗಿದೆ ಹಾಗಾಗಿ ನಮ್ಮಲ್ಲಿ ಅರಿಶಿನ ಮಂಡಳಿ ಆರಂಭಿಸಬೇಕು ಎನ್ನುವುದು ಹಲವರ ಬೇಡಿಕೆ ಆಗಿದ್ದು, ಇದೀಗ ಕೇಂದ್ರ ಸರಕಾರ ಇದಕ್ಕೆ ಅನುಮೋದನೆ ನೀಡಿದೆ.

ನಮ್ಮ ದೇಶದ ಅರಿಶಿಣ ರಪ್ತಿನ ಗುರಿ 8400 ಕೋಟಿ ರೂಪಾಯಿಗಳು. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುವ ಅರಿಶಿಣ ಮಂಡಳಿ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ.

LPG Gas cylinder will be available for just 600 Rupees from now

Follow us On

FaceBook Google News

LPG Gas cylinder will be available for just 600 Rupees from now