ಚಿನ್ನ ಖರೀದಿಗೂ ಬಂತು ಹೊಸ ರೂಲ್ಸ್! ಆದಾಯ ತೆರಿಗೆಯ ಹೊಸ ನಿಯಮ

ಮದುವೆ ಮತ್ತಿತರ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದಕ್ಕೂ ಮೊದಲು ಆದಾಯ ತೆರಿಗೆಯ ರೂಲ್ಸ್ ತಿಳಿದುಕೊಳ್ಳಿ

ಮದುವೆ ಮತ್ತಿತರ ಸಮಾರಂಭಗಳಿಗೆ ಚಿನ್ನ ಖರೀದಿ (gold purchase) ಮಾಡುವುದು ಸಹಜ. ಅದರಲ್ಲೂ ಭಾರತೀಯರಿಗೆ ಚಿನ್ನ ಅಂದ್ರೆ ಬಹಳ ಪ್ರೀತಿ, ಸಣ್ಣ ಸಣ್ಣ ಕಾರಣಗಳಿಗೂ ಕೂಡ ಚಿನ್ನ ಖರೀದಿ ಮಾಡುತ್ತಾರೆ. ಆದರೆ ನಮ್ಮ ಬಳಿ ಸಾಕಷ್ಟು ಹಣ ಇದೆ ಎನ್ನುವ ಕಾರಣಕ್ಕೆ ನಾವು ಚಿನ್ನವನ್ನು ಬೇಕಾದಷ್ಟು ಖರೀದಿ ಮಾಡುವಂತಿಲ್ಲ.

ಹೌದು, ಚಿನ್ನ ಖರೀದಿಯ ಮೇಲೆ ಆದಾಯ ತೆರಿಗೆ ಇಲಾಖೆ (Income tax department) ತನ್ನ ನಿಯಮಗಳನ್ನು ಹೇರಿಕೆ ಮಾಡಿದೆ. ನೀವು ನಿಮ್ಮ ಬಳಿ ಇರುವಷ್ಟು ನಗದು ಹಣ (cash) ವನ್ನು ಕೊಟ್ಟು ಚಿನ್ನ ಖರೀದಿ ಮಾಡಬಹುದು ಎಂದುಕೊಂಡಿದ್ದರೆ ಅದು ತಪ್ಪು.

ಪರ್ಸನಲ್ ಲೋನ್ ಬೇಕಿದ್ದರೆ ಈ ತಿಂಗಳೇ ತೆಗೆದುಕೊಳ್ಳಿ, ಫೆಬ್ರವರಿಯಿಂದ ಕಷ್ಟ

If you want a gold loan, you don't need a CIBIL score anymore

ಚಿನ್ನ ಖರೀದಿ ಮಾಡುವುದಕ್ಕಾಗಿ ನಗದು ಹಣವನ್ನು ಸಂಗ್ರಹಿಸುವುದನ್ನು ಇಂದೇ ಬಿಟ್ಟುಬಿಡಿ! ಯಾಕಂದ್ರೆ ಯಾವುದೇ ದಾಖಲೆಗಳು ಇಲ್ಲದೆ (without any documents), ಪ್ಯಾನ್ ಕಾರ್ಡ್ (PAN card) ನೀಡದೆ, ಒಂದು ಮಿತಿಗಿಂತ ಹೆಚ್ಚು ನಗದು ಹಣದಿಂದ ಚಿನ್ನ ಖರೀದಿ (Buy Gold) ಮಾಡಲು ಸಾಧ್ಯವಿಲ್ಲ.

ನಗದು ಚಿನ್ನ ಖರೀದಿ ಮೇಲೆ ಕಠಿಣ ರೂಲ್ಸ್!

Gold Purchaseಚಿನ್ನಾಭರಣ (jewelries) ಗಳನ್ನು ನೀವು ನಗದು ಹಣವನ್ನು ಕೊಟ್ಟು ಖರೀದಿ ಮಾಡುವುದಿದ್ದರೆ, ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳಬೇಕು. ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್ 2022 (- prevention of money laundering Act – PMLA) ಅಡಿಯಲ್ಲಿ ನಗದು ಹಣದೊಂದಿಗೆ ಚಿನ್ನವನ್ನು ಖರೀದಿ ಮಾಡುವ ನಿಯಮವನ್ನು ಸರ್ಕಾರ ತಿಳಿಸಿದೆ.

ಆಧಾರ್ ಕಾರ್ಡ್‌ನಲ್ಲಿ ಫೋಟೋ ಅಪ್ಡೇಟ್ ಮಾಡೋದು ಹೇಗೆ? ಇಲ್ಲಿದೆ ಸರಳ ಹಂತ

10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಗದು ಹಣವನ್ನು ಕೊಟ್ಟು ಚಿನ್ನ ಖರೀದಿ ಮಾಡಿದ್ರೆ, ಚಿನ್ನ ಮಾರಾಟ ಮಾಡುವವರು, ಖರೀದಿ ಮಾಡುವವರ ಈಕೆ ವೈ ಸಿ (E-KYC) ದಾಖಲೆಗಳನ್ನು ತೆಗೆದುಕೊಳ್ಳಬೇಕು. ಆಧಾರ್ ಹಾಗೂ ಪ್ಯಾನ್ ಕಾರ್ಡ್ ಇಲ್ಲದೆ ಇದಕ್ಕಿಂತ ಹೆಚ್ಚಿಗೆ ಮೊತ್ತದ ನಗದು ವ್ಯವಹಾರಕ್ಕೆ ಮಾರಾಟಗಾರರು ಕೂಡ ಅವಕಾಶ ಮಾಡಿಕೊಡುವಂತಿಲ್ಲ.

ಒಂದು ವೇಳೆ ಇದಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡಿದ್ರೆ, ಅದನ್ನು ತಕ್ಷಣ ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕು. ಈ ಬಗ್ಗೆ ಜನವರಿ 28, 2020ರಲ್ಲಿಯೇ ಸರ್ಕಾರ ಸಂಬಂಧಪಟ್ಟ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಿತ್ತು. ಹಾಗಾಗಿ ಈ ನಿಯಮ ಪಾಲನೆ ಮಾಡದಿದ್ದರೆ ಹೆಚ್ಚುವರಿ ಟ್ಯಾಕ್ಸ್ ಕೂಡ ಪಾವತಿಸಬೇಕಾಗುತ್ತದೆ.

ಚಿನ್ನದ ಬೆಲೆ ಧಿಡೀರ್ ಇಳಿಕೆ, ಬೆಳ್ಳಿ ಬೆಲೆಯೂ ಕುಸಿತ! ಇಲ್ಲಿದೆ ಚಿನ್ನ ಬೆಳ್ಳಿ ದರ ಡೀಟೇಲ್ಸ್

New rules for buying gold, New Rules of Income Tax on Gold Purchase

Related Stories