ಇನ್ಮುಂದೆ ಎಲ್ಲರಿಗೂ ಸಿಗಲ್ಲ ಗ್ಯಾಸ್ ಸಬ್ಸಿಡಿ; ಇಂತಹವರಿಗೆ ಮಾತ್ರ ಸಿಗಲಿದೆ ಸೌಲಭ್ಯ
ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು ಗ್ಯಾಸ್ ಸಬ್ಸಿಡಿ (LPG gas subsidy) ಪಡೆದುಕೊಳ್ಳಲು ತಕ್ಷಣವೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ
ದೇಶದಿಂದ ಸಾಕಷ್ಟು ಗೃಹಿಣಿಯರಿಗೆ ಅನುಕೂಲವಾಗುವಂತಹ ಗೃಹ ಬಳಕೆಯ ಗ್ಯಾಸ್ ಸಬ್ಸಿಡಿಯನ್ನು (LPG gas subsidy) ಕೇಂದ್ರ ಸರ್ಕಾರ ಘೋಷಿಸಿದೆ pm Ujjwala Yojana ಅಡಿಯಲ್ಲಿ ಸಾಕಷ್ಟು ಮಹಿಳೆಯರು ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳುತ್ತಿದ್ದಾರೆ.
ಹಣದುಬ್ಬರದ ಸಮಸ್ಯೆ ಹೆಚ್ಚಾಗುತ್ತಿದ್ದ ಹಾಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಯನ್ನು ಕೂಡ ಸರ್ಕಾರ ಘೋಷಣೆ ಮಾಡಿದ್ದು ಗ್ರಾಹಕರಿಗೆ ತುಸು ನೆಮ್ಮದಿ ನೀಡಿತ್ತು
pm Ujjwala Yojana ಅಡಿಯಲ್ಲಿ ಉಚಿತ ಗ್ಯಾಸ್ ಪಡೆದು ಕೊಂಡವರಿಗೆ 300ರೂಪಾಯಿ ಸಬ್ಸಿಡಿ ಹಾಗೂ ಸಾಮಾನ್ಯರಿಗೆ 200 ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ.
ಆದರೆ ಈಗ ಸದ್ಯ ಸಬ್ಸಿಡಿ ಪಡೆದುಕೊಳ್ಳಲು ಪ್ರತಿಯೊಬ್ಬ ಗ್ರಾಹಕರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲದೆ ಇದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಸಿಗುವ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಈ ಕಾರಿನ ಬೆಲೆ 2 ಲಕ್ಷ ರೂಪಾಯಿ ಇಳಿಕೆಯಾಗಿದೆ, ಸ್ಟಾಕ್ ಇರುವಾಗಲೇ ಬುಕ್ ಮಾಡಿ
ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ! (E-KYC mandatory for gas subsidy)
ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ಪಡೆದುಕೊಳ್ಳುತ್ತಿದ್ದರು ಕೂಡ ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಪ್ರ
ತಿಯೊಬ್ಬ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವ ಗ್ರಾಹಕರು ಈ ಕೆಲಸ ಮಾಡಿಕೊಳ್ಳಬೇಕು. ನವೆಂಬರ್ 25 ರಿಂದ ಇ ಕೆ ವೈ ಸಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಕೊನೆಯ ದಿನಾಂಕ ಡಿಸೆಂಬರ್ 15 (last date for ekyc December 15th) ಎಂದೂ ಸರ್ಕಾರ ಘೋಷಿಸಿದ್ದು, ಈ ದಿನಾಂಕದ ಒಳಗೆ ಮಾಡಿಸಿಕೊಳ್ಳದೆ ಇರುವವರಿಗೆ ಯಾವುದೇ ರೀತಿಯ ಸಬ್ಸಿಡಿ ಬೆನಿಫಿಟ್ ಸಿಗುವುದಿಲ್ಲ.
ಬಜಾಜ್ ಚೇತಕ್ ಅಪ್ಡೇಟ್ ವರ್ಷನ್ ಶೀಘ್ರದಲ್ಲೇ ಬಿಡುಗಡೆ,127 ಕಿಮೀ ಮೈಲೇಜ್; ಬೆಲೆ ಎಷ್ಟು ಗೊತ್ತಾ?
ಬಯೋಮೆಟ್ರಿಕ್ ಮಾಡಿಸಿ! (Biometric)
ಗ್ಯಾಸ್ ಏಜೆನ್ಸಿ ನಿರ್ದೇಶಕ ಸಂಜಯ್ ಕುಮಾರ್ ಜೈಸ್ವಾಲ್ ತಿಳಿಸಿರುವಂತೆ ಬಯೋಮೆಟ್ರಿಕ್ ಮೂಲಕ ಈ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಅಂತವರ ಸಬ್ಸಿಡಿ ತಕ್ಷಣಕ್ಕೆ ರದ್ದಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಗ್ಯಾಸ್ ಏಜೆನ್ಸಿಗೆ (Gas agency) ಹೋಗಿ ಆಧಾರ್ ಕಾರ್ಡ್ ಹಾಗೂ ನಿಮ್ಮ ಇತರ ವಿವರಗಳನ್ನು ನೀಡಿ ಬಯೋಮೆಟ್ರಿಕ್ ಮೂಲಕ ಇ ಕೆ ವೈ ಸಿ ಮಾಡಿಸಿಕೊಳ್ಳಬೇಕು.
ಇದು ಆನ್ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ ನೀವೇ ಸ್ವತಃ ಭೇಟಿ ನೀಡಿ ಬಯೋಮೆಟ್ರಿಕ್ ಮಾಡಿಸಿಕೊಳ್ಳಬೇಕು. ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು ಗ್ಯಾಸ್ ಸಬ್ಸಿಡಿ (LPG gas subsidy) ಪಡೆದುಕೊಳ್ಳಲು ತಕ್ಷಣವೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.
ನಿಮ್ಮ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್‌ಗಳಿವು! ಬಾರೀ ಆದಾಯ
No more gas subsidy for everyone, Only such people will get the facility